More

    ಕೇರಳ ಟೂರಿಸ್ಟ್​ ಬೋಟ್​ ದುರಂತ; 22 ಮಂದಿ ಮೃತ್ಯು, ಹಲವರು ನಾಪತ್ತೆ

    ಮಲಪ್ಪುರಂ: ಡಬಲ್​ ಡೆಕ್ಕರ್​ ಟೂರಿಸ್​ ಬೋಟ್​ ಮುಳುಗಿ 22ಕ್ಕೂ ಹೆಚ್ಚು ಮಮದಿ ಸಾವಿಗೀಡಾಗಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕಡಲತೀರದಲ್ಲಿ ನಡೆದಿದೆ.

    ಮಲಪ್ಪುರಂ ಜಿಲ್ಲೆಯ ತಾನೂರ್ ಪ್ರದೇಶದ ತುವಲ್ತಿರಾಮ್ ಬೀಚ್ ಬಳಿ ಭಾನುವಾರ ಸಂಜೆ 7 ಘಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು ಬೋಟ್​ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ನ್ಯಾಯಾಂಗ ತನಿಖೆಗೆ ಆದೇಶ

    ಘಟನೆ ಸಂಬಂಧ ಕೇರಳ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.

    ದೋಣಿಯಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬ ಬಗ್ಗೆ ಇನ್ನು ತಿಳಿದು ಬಂದಿಲ್ಲ. 40 ಮಂದಿಗೆ ಟಿಕೆಟ್​ ನೀಡಲಾಗಿತ್ತು ಮತ್ತು ಅಧಿಕ ಜನರಿದ್ದರು ಎಂದು ಹೇಳಲಾಗಿದೆ. ಬೋಟ್​ಗೆ ಫಿಟ್​ನೆಸ್​ ಪ್ರಮಾಣಪತ್ರ ಇರದಿರುವುದು ಘಟನೆ ಬಳಿಕ ಬೆಳಕಿಗೆ ಬಂದಿದೆ.

    boat deceased

    ಇದನ್ನೂ ಓದಿ: ಮದುವೆಮನೆಯಲ್ಲಿ ಆಹಾರ ಸೇವಿಸಿ ಆಸ್ಪತ್ರೆ ಸೇರಿದ 10 ಮಂದಿ ಬಾಲಕರು

    ಮುಂದುವರೆದ ರಕ್ಷಣಾ ಕಾರ್ಯಾಚರಣೆ

    ಘಟನೆ ಸಂಬಂಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(NDRF) ಹಾಗೂ ಭಾರತೀಯ ಕೋಸ್ಟ್​ ಗಾರ್ಡ್​ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು ನೀರಿನಲ್ಲಿ ಮುಳುಗಿರುವವರನ್ನು ಪತ್ತೆ ಹಚ್ಚುತ್ತಿದೆ.

    ಬೋಟ್​ ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ. ಪ್ರಧಾನಿ ಕಾರ್ಯಾಲಯದಿಂದ ಮೃತ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts