ನ್ಯೂಸ್

VIDEO| ನಿರ್ಮಾಣ ಹಂತದ ಸೇತುವೆ ಕುಸಿತ

Webdesk - Manjunatha B

ಪಟ್ನಾ: ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಬ್ರಿಡ್ಜ್ ಕುಸಿದು ಬಿದ್ದು ಪ್ರಕರಣ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಘಟನೆಯೊಂದು ಕಿಶನ್​ಗಂಜ್​ ಪ್ರದೇಶದಲ್ಲಿ ನಡೆದಿದೆ.

ಮೆಚ್ಚಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಪಿಲ್ಲರ್​ ಒಂದು ಕುಸಿದು ಬಿದ್ದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ದ ಅಧಿಕಾರಿ ಅರವಿಂದ್​ ಕುಮಾರ್​ ಕಿಶನ್​ಗಂಜ್​ ಹಾಗೂ ಕತಿಹಾರ್​ ಜಿಲ್ಲೆಗಳನ್ನು ಸಂಪರ್ಕಿಸುವ NH-327Eಯ ನಿರ್ಮಾಣ ಹಂತದ ಸೇತುವೆಯೊಂದು ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸೇತುವೆ ನಿರ್ಮಾಣದ ವೇಳೆ ಆಗಿರುವ ಲೋಪದೋಷದಿಂದಾಗಿ ಪಿಲ್ಲರ್​ ಕುಸಿದಿದೆ. ಪ್ರಕರಣ ಸಂಬಂಧ ಸಮಿತಿ ಒಂದನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಅವಘಡಕ್ಕೆ ಕಾರಣವನ್ನು ಪತ್ತೆ ಹಚ್ಚಲಿದ್ಧಾರೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ದ ಅಧಿಕಾರಿ ಅರವಿಂದ್​ ಕುಮಾರ್ ತಿಳಿಸಿದ್ದಾರೆ.