ನ್ಯೂಸ್

ಅಂಕಲ್​ನನ್ನು ಮದುವೆಯಾದ ಯುವತಿ! ನಿನ್ನ ನಗು ನೋಡೋಕಾಗ್ತಿಲ್ಲ ಅಂದ್ರು ನೆಟ್ಟಿಗರು

ನವದೆಹಲಿ: ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ ಆದರೆ, ಕೆಲವೊಂದು ಮದುವೆಗಳನ್ನು ನೋಡಿದರೆ ಅದಕ್ಕಿಂತ ಆಶ್ಚರ್ಯ ಮತ್ತೊಂದಿಲ್ಲ. ಏಕೆಂದರೆ, ಕೆಲ ಹುಡುಗಿಯರು ತನಗಿಂತ 20 ರಿಂದ 25 ವರ್ಷ ದೊಡ್ಡವರನ್ನು ಮದುವೆಯಾಗಲು ಬಯಸುತ್ತಾರೆ. ವಯಸ್ಸಾಗಿರಲಿ, ತಲೆಯಲ್ಲಿ ಕೂದಲು ಇಲ್ಲದಿರಲಿ ಅಥವಾ ಆತನಿಗೆ ಎರಡನೇ ಮದುವೆ ಆಗಿರಲಿ ಅದೆಲ್ಲ ವಿಷಯವೇ ಆಗುವುದಿಲ್ಲ. ಯಾವುದೇ ಒಂದು ಕಾರಣದಿಂದ ಮದುವೆ ಆಗಿಬಿಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಇಂತಹ ಮದುವೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. 18ರ ಹರೆಯದ ಹುಡುಗಿ 40 ವರ್ಷದ ಅಂಕಲ್​ ಜತೆ ಮದುವೆಯಾಗುವುದು ಅಥವಾ 25 ವರ್ಷದ ಯುವತಿ 50 ರಿಂದ 60 ವರ್ಷದ ವ್ಯಕ್ತಿಯನ್ನು ವರಿಸುವಂತಹ ಘಟನೆಗಳನ್ನು ನಾವು ನೋಡುತ್ತೇವೆ. ಇದೀಗ ಅಂಥದ್ದೇ ಮದುವೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಧು ದಂತದ ಗೊಂಬೆಯಂತಿದ್ದರೆ, ವರನು ಸುಕ್ಕುಗಟ್ಟಿದ ಮುಖದೊಂದಿಗೆ ಅಜ್ಜನಂತೆ ಕಾಣುತ್ತಾನೆ. ಮದುವೆಗೆ ಸಂಬಂಧಿಸಿದ ಫೋಟೋಗಳು ವೈರಲ್​ ಆಗಿವೆ. ವರನಿಗಿಂತ ವಧು ನಗು ನಗುತ್ತಾ ಕ್ಯಾಮೆರಾಗೆ ಪೋಸ್​ ನೀಡಿದ್ದಾಳೆ. ಆದರೆ, ವರ ಮಾತ್ರ ಮುಖ ಗಂಟು ಹಾಕಿಕೊಂಡು ನಿಂತಿದ್ದಾನೆ. ಯುವತಿಯೇ ಇಷ್ಟಪಟ್ಟು ಮದುವೆ ಆಗಿದ್ದಾಳೆ ಎನ್ನುವುದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ.

ವೈರಲ್​ ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಸರ್ಕಾರಿ ನೌಕರಿ ಮತ್ತು ರೂಪಾಯಿ ಮಾತಾಡುತ್ತಿದೆ ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು ಶುಗರ್ ಡ್ಯಾಡಿ ಎಂದಿದ್ದಾರೆ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಹುಡುಗಿಯರಿಗೆ ಏನಾಗಿದೆ ಎಂದು ಇನ್ನೊಬ್ಬ ನೆಟ್ಟಿಗ ಕಿಡಿಕಾರಿದ್ದಾನೆ. ಇಂತಹ ಮದುವೆಗಳನ್ನು ನಿಲ್ಲಿಸಬೇಕು ಎಂಬ ಅಭಿಪ್ರಾಯವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

ಇದುವರೆಗೂ ಈ ವಿಡಿಯೋವನ್ನು 67 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಈ ವಿಡಿಯೋಗೆ ತರಹೇವಾರಿ ಕಾಮೆಂಟ್‌ಗಳು ಬರುತ್ತಿವೆ. (ಏಜೆನ್ಸೀಸ್​)