ನವದೆಹಲಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿರುವ ಮಾರಣಾಂತಿಕ ರಾಕೆಟ್ ದಾಳಿಯನ್ನು ಖಂಡಿಸಿರುವ ಯುನೈಟೆಡ್ ನೇಷನ್ಸ್ ಇದೊಂದು ಹೇಯ ಕೃತ್ಯವಾಗಿದ್ದು, ಈ ರೀತಿ ದುಷ್ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಈ ಕುರಿತು ಪ್ರಕಟಣೆ ಒಂದನ್ನು ಹೊರಡಿಸಿರುವ ಯುಎನ್ ಪ್ರದಾನ ಕಾರ್ಯದರ್ಶಿ ಆ್ಯಂಟೋನಿ ಗುಟೆರೆಸ್ ಇದೊಂದು ಭೀಕರ ದಾಳಿಯಾಗಿದ್ದು, ಅಲ್ಲಿನ ಪರಿಸ್ಥಿತಿ ಘಾತೀಯವಾಗಿ ಹದಗೆಡುತ್ತಿದೆ. ಇದು ಪೈಶಾಚಿಕ ಕೃತ್ಯವಾಗಿದ್ದು, ಕೂಡಲೇ ಎರಡು ದೇಶದವರು ಯುದ್ಧವನ್ನು ನಿಲ್ಲಿಸಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
1,200 ದಾಟಿದೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ ಸುಮಾರು 700 ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಆದರೆ ಗಾಜಾ ಪಟ್ಟಿಯಲ್ಲಿ ಸುಮಾರು 500 ಪ್ಯಾಲೆಸ್ಟೀನಿಯಾದವರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪುಗಳು 130 ಇಸ್ರೇಲಿ ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಿವೆ.