More

    ಪಾಕಿಸ್ತಾನಿ ಆ್ಯಂಕರ್ ಗಡಿಪಾರು ವಿವಾದ; ಬಯಲಾಯ್ತು ಅಸಲಿ ಕಾರಣ

    ನವದೆಹಲಿ: ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಪಾಕಿಸ್ತಾನದ ಖ್ಯಾತ ನಿರೂಪಕಿ ಝೈನಾಬ್​ ಅಬ್ಬಾಸ್​ ಅವರನ್ನು ಭಾರತದಿಂದ ಗಡಿಪಾರು ಮಾಡಲಾಗಿಲ್ಲ, ವೈಯಕ್ತಿಕ ಕಾರಣಗಳಿಂದಾಗಿ ದೇಶವನ್ನು ತೊರೆದಿದ್ದಾರೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್​ ಸಮಿತಿ (ICC) ಸ್ಪಷ್ಟನೆ ನೀಡಿದೆ.

    ಅಕ್ಟೋಬರ್​ 6ರಂದು ಹೈದರಾಬಾದಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ನೆದರ್​ಲೆಂಡ್ಸ್​ ತಂಡದ ವಿರುದ್ಧದ ಪಂದ್ಯದಲ್ಲಿ ಅವರು ನಿರೂಪಣೆಯನ್ನು ಮಾಡಿದ್ದರು. ಸೋಮವಾರ ಅವರು ದುಬೈಗೆ ತೆರಳಿದರು ಎಂದು ಐಸಿಸಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

    ಭಾರತದಲ್ಲಿ ನಡೆಯಲಿರುವ ಐಸಿಸಿಗಾಗಿ ವಿಶ್ವಕಪ್‌ನಲ್ಲಿ ಭಾಗವಹಿಸುವುದಾಗಿ ಜೈನಬ್ ತನ್ನ ‘ಎಕ್ಸ್’ ಖಾತೆಯಲ್ಲಿ ಘೋಷಿಸಿದಾಗ, ಜೈನಬ್ ತನ್ನ ಹೆಸರಿನಲ್ಲಿರುವ ಖಾತೆಯಲ್ಲಿನ ಹಿಂದಿನ ಕೆಲವು ಪೋಸ್ಟ್‌ಗಳು ವೈರಲ್ ಆಗಿದ್ದವು. ಹೀಗಿರುವಾಗಲೇ ಪಂದ್ಯಾವಳಿಯ ಮಧ್ಯದಲ್ಲಿ ಭಾರತದಿಂದ ನಿರ್ಗಮಿಸುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳು ತೀವ್ರಗೊಂಡ ನಂತರ, ಐಸಿಸಿ ಝೈನಾಬ್ ಅವರನ್ನು ಆತಿಥೇಯ ದೇಶದಿಂದ ಹೊರಹಾಕಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

    ಐಸಿಸಿ ವಕ್ತಾರರು ಪಿಟಿಐಗೆ ಈ ಬಗ್ಗೆ ಹೇಳಿಕೆ ನೀಡಿದ್ದು, ಜೈನಾಬ್ ಅವರನ್ನು ಗಡೀಪಾರು ಮಾಡಲಾಗಿಲ್ಲ, ವೈಯಕ್ತಿಕ ಕಾರಣಗಳಿಂದ ಅವರು ಹಿಂತಿರುಗಿದ್ದಾರೆ ಎಂದಿದ್ದಾರೆ. ಜೈನಾಬ್ ಕಳೆದ ವಾರ ಹೈದರಾಬಾದ್ ತಲುಪಿದ್ದರು. ಹೈದರಾಬಾದ್‌ನಿಂದ ಅವರು ಬೆಂಗಳೂರು, ಚೆನ್ನೈ, ಅಹಮದಾಬಾದ್ ಸೇರಿದಂತೆ ಪಾಕಿಸ್ತಾನ ಆಡಲಿರುವ ನಗರಗಳಿಗೆ ತೆರಳಬೇಕಿತ್ತು.

    ಭಾರತ, ಹಿಂದೂ ಧರ್ಮ ಭಾರತದಲ್ಲಿ ಪೂಜೆ ಮಾಡುವ ದೇವರು ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ 2014ರಲ್ಲಿ ಜೈನಾಬ್‌ ಅಬ್ಬಾಸ್‌ ಟ್ವೀಟ್‌ ಮಾಡಿದ್ದರು. ಈ ಕುರಿತಾಗಿ ವಕೀಲ ವಿನೀತ್‌ ಜಿಂದಾಲ್‌, ಜೈನಾಬ್‌ ಅಬ್ಬಾಸ್‌ ವಿರುದ್ಧ ದೂರು ದಾಖಲು ಮಾಡಿದ್ದರು. ಸೈಬರ್‌ ಕ್ರೈಮ್‌ನಲ್ಲಿ ದೂರು ದಾಖಲಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಆಕೆ ಮಾಡಿರುವ ಟ್ವೀಟ್‌ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಡಿಲೀಟ್‌ ಮಾಡಲಾಗಿತ್ತು.

    ಪಾಕಿಸ್ತಾನದ ಕ್ರೀಡಾ ನಿರೂಪಕಿ ಜೈನಾಬ್‌ ಅಬ್ಬಾಸ್‌, 2023ರ ಕ್ರಿಕೆಟ್‌ ಏಕದಿನ ವಿಶ್ವಕಪ್‌ ಟೂರ್ನಿಯ ನಿರೂಪಣೆಗಾಗಿ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಪಾಕಿಸ್ತಾನದ ಟಿವಿ ನಿರೂಪಕಿ ಜೈನಾಬ್ ಅಬ್ಬಾಸ್ ಅವರನ್ನು ಭಾರತದಿಂದ ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿದೆ ಎಂದು  ಸ್ವತಃ ಅವರು ಪ್ರತಿನಿಧಿಸುವ ಟಿವಿ ವಾಹಿನಿಯೇ ತಿಳಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts