ನ್ಯೂಸ್

ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ದಾಳಿ; 11 ಮಂದಿ ಸಾವು

ನವದೆಹಲಿ: 2024ಕ್ಕೂ ರಷ್ಯಾ ಹಾಗೂ ಉಕ್ರೇನ್​ ನಡುವಿನ ಯುದ್ಧ ಯಾಕೋ ನಿಲ್ಲುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯ ಹೆಚ್ಚುತ್ತಿದ್ದು, ಉಭಯ ದೇಶಗಳ ನಡುವಿನ ದಾಳಿ ಕಡಿಮೆಯಾಗುತ್ತಿಲ್ಲ.

ಪೂರ್ವ ಉಕ್ರೇನ್​ ನಗರವನ್ನು ಗುರಿಯಾಗಿಸಿಕೊಂಡು ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಐವರು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾದೇಶಿಕ ಗವರ್ನರ್ ವಾಡಿಮ್ ಫಿಲಾಶ್ಕಿನ್, ಶನಿವಾರ ಮಧ್ಯಾಹ್ನ 3ಗಂಟೆಗೆ ರಷ್ಯಾದ ಪಡೆಗಳು ಎಸ್ -300 ಕ್ಷಿಪಣಿಗಳೊಂದಿಗೆ ಪೊಕ್ರೊವ್‌ಸ್ಕ್‌ ಮೇಲೆ ಸಾಮೂಹಿಕ ಶೆಲ್ ದಾಳಿ ನಡೆಸಿವೆ. ದಾಳಿಯಲ್ಲಿ 3ರಿಂದ 17 ವರ್ಷ ವಯಸ್ಸಿನ ಐದು ಮಕ್ಕಳು ಸೇರಿದಂತೆ 11 ಜನರು ಮೃತಪಟ್ಟಿದ್ದಾರೆ. ಪೂರ್ವ ಉಕ್ರೇನ್ ನಗರ ಪೊಕ್ರೊವ್‌ಸ್ಕ್‌ ತಡರಾತ್ರಿಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆದಿದೆ ಎಂದು ತಿಳಿಸಿದ್ಧಾರೆ.