ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋದೊಂದಿಗೆ ಸೆಲ್ಫಿ ಪಾಯಿಂಟ್ ಹಾಕುವಂತೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ದೇಶದ ಕಾಲೇಜುಗಳಿಗೆ ಪತ್ರ ಬರೆದಿದೆ.
ಭಾರತದ ಸಾಧನೆಗಳ ಕುರಿತು ಸಾಮೂಹಿಕ ಹೆಮ್ಮೆಯ ಭಾವ ಮೂಡಿಸಲು ಈ ಹಂತಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಮತ್ತು ಸಂದರ್ಶಕರನ್ನು ಪೋತ್ಸಾಹಿಸಬೇಕು ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.
ಮೊದಲು ಸೆಲ್ಫಿ ಪಾಯಿಂಟ್ ಸ್ಥಾಪಿಸಲು ಸೇನೆಯನ್ನು ಕೇಳಲಾಯಿತು, ನಂತರ ಐಎಎಸ್ ಮುಂತಾದ ಹಿರಿಯ ಅಧಿಕಾರಿಗಳಿಗೆ ರಥಯಾತ್ರೆ ಕೈಗೊಳ್ಳುವಂತೆ ಹೇಳಲಾಯಿತು. ಈಗ ವಿವಿಗಳಲ್ಲಿ ಸೆಲ್ಫಿ ಪಾಯಿಂಟ್ಗೆ ಹೇಳಿದ್ದಾರೆ. ದೇಶದ ಜನತೆ ಈ ಅತಿರೇಕದಿಂದ ಬೇಸತ್ತಿದ್ದು, ಶ್ರೀವೇ ಉತ್ತರ ನೀಡಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟೀಕಿಸಿದ್ದಾರೆ.