ಬೆಂಗಳೂರು: ಉಡುಪಿ ಹಾಸ್ಟೆಲ್ನ ಟಾಯ್ಲೆಟ್ನಲ್ಲಿ ಕ್ಯಾಮರಾ ಇಟ್ಟ ಪ್ರಕರಣ ಗಂಭೀರ ಆಗತೊಡಗಿದ್ದು, ಇದಕ್ಕೆ ಇದೀಗ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಪ್ರವೇಶ ಮಾಡಿದೆ. ಹೀಗಾಗಿ ಈ ಪ್ರಕರಣ ಈಗ ಮತ್ತಷ್ಟು ಗಮನ ಸೆಳೆಯಲಾರಂಭಿಸಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಈ ಪ್ರಕರಣದಲ್ಲಿ ಗಮನ ಹರಿಸಿರುವ ಕುರಿತು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ವಾಶ್ರೂಮ್ನಲ್ಲಿ ಸಹಪಾಠಿ ಹುಡುಗಿಯರ ವಿಡಿಯೋ ಮಾಡಲು ಹುಡುಗಿಯರೇ ಕ್ಯಾಮರಾ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯತ್ತ ಹೊರಟಿದ್ದೇನೆ. ಮಕ್ಕಳು ಇಂಥ ಅತಿರೇಕದಲ್ಲಿ ತೊಡಗಿಕೊಳ್ಳುವುದು ಅತ್ಯಂತ ದುಃಖಕರ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಟಿಕೆಟ್ ತೆಗೆದುಕೊಳ್ಳಲು ಹೇಳಿದ್ದಕ್ಕೆ ಕಂಡಕ್ಟರ್ ಹತ್ತಿರ ಜಗಳವಾಡಿದ ಯುವತಿ; ಕೇಂದ್ರ ಸರ್ಕಾರಿ ಉದ್ಯೋಗಿ ಎಂದು ರಂಪ
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನಾನು ಈ ಪ್ರಕರಣದತ್ತ ಗಮನಹರಿಸಿದ್ದು, ವಿದ್ಯಾರ್ಥಿನಿಯರ ಜತೆ ಮಾತುಕತೆ ನಡೆಸಿ, ಪೊಲೀಸರನ್ನು ಭೇಟಿಯಾಗಿ, ಕಾಲೇಜಿಗೂ ಹೋಗಿಬರುತ್ತೇನೆ ಎಂದಿರುವ ಅವರು, ಮಹಿಳೆಯ ಘನತೆಯ ವಿಚಾರದಲ್ಲಿ ಯಾರೂ ಆಟ ಆಡಲು ಸಾಧ್ಯವಿಲ್ಲ ಎಂದಿದ್ದಾರೆ.