ನ್ಯೂಸ್

VIDEO| ಮಹಿಳೆಯರ ಒಳಉಡುಪು ಕದ್ದ ಖತರ್ನಾಕ್​ಗಳು! ಪ್ಯಾಂಟಿ ಚೋರ್​ ಅಬ್ದುಲ್​ ವಿಡಿಯೋ ವೈರಲ್​

ಮೀರತ್​: ಕಳ್ಳತನವೆಂದಾಕ್ಷಣ ಹಣ, ಚಿನ್ನಾಭರಣ ನಿಮ್ಮ ತಲೆಗೆ ಬರಬಹುದು. ಆದರೆ ಈ ಕಳ್ಳರು ಹಾಗಲ್ಲ. ಇವರು ಕದ್ದಿದ್ದು ಚಿನ್ನ ಅಥವಾ ಹಣವನ್ನಲ್ಲ. ಹೆಣ್ಣು ಮಕ್ಕಳು ತೊಳೆದು ಒಣೆಸಿದ್ದ ಒಳಉಡುಪು ಕದ್ದು ಪೂರ್ತಿ ಸಮಾಜದೆದುರು ತಲೆ ತಗ್ಗಿಸುವಂತೆ ಮಾಡಿಕೊಂಡಿದ್ದಾರೆ ಈ ಯುವಕರು.

ಉತ್ತರ ಪ್ರದೇಶದ ಮೀರತ್​ನಲ್ಲಿ ಇಂತದ್ದೊಂದು ಕಳ್ಳತನ ನಡೆದಿದೆ. ಮಾರ್ಚ್​ 14ರಂದು ಮೊಹಮದ್​ ಅಬ್ದುಲ್ಲ ಹೆಸರಿನ ಯುವಕ ತನ್ನ ಸ್ನೇಹಿತನೊಂದಿಗೆ ಸ್ಕೂಟಿಯಲ್ಲಿ ಬಂದು ಒಂದು ಮನೆಯ ಬಳಿ ಗಾಡಿ ನಿಲ್ಲಿಸುತ್ತಾನೆ. ಅಲ್ಲೇ ಒಣಹಾಕಲಾಗಿದ್ದ ಹೆಣ್ಣು ಮಕ್ಕಳ ಒಳಉಡುಪನ್ನು ಎತ್ತಿಕೊಂಡು ಬಂದು ಅದನ್ನು ಗಾಡಿಯೊಳಗೆ ಇಟ್ಟುಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಸಕತ್​ ವೈರಲ್​ ಆಗಿದೆ.

ಸಂಜಯ್ ಚೌಧರಿ ಎಂಬ ನಿವಾಸಿಯು ಅದೇ ದಿನದಂದು ಸದರ್ ಬಜಾರ್ ಪೊಲೀಸರಿಗೆ ಈ ಕುರಿತಾಗಿ ದೂರು ನೀಡಿದ್ದಾರೆ. ಯುವಕರು ನನ್ನ ಮಕ್ಕಳ ಒಳಉಡುಪು ಕದ್ದಿರುವುದನ್ನು ನಾನೇ ವಿಡಿಯೋ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಬ್ದುಲ್ಲ ಮತ್ತು ಆತನ ಸ್ನೇಹಿತ ರೋಮಿನ್​ ಅನ್ನು ವಶಕ್ಕೆ ಪಡೆಯಲಾಗಿದೆ. ತಮಾಷೆಗಾಗಿ ಒಳಉಡುಪು ಕದ್ದಿರುವುದಾಗಿ ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)