ವಿಜಯನಗರ: ರಜೆಯ ದಿನ ಮೋಜಿಗೆಂದು ಈಜಿಗೆ ಇಳಿದ ಯುವಕರಿಬ್ಬರು ಪ್ರಾಣ ಕಳೆದುಕೊಂಡಿರುವ ಪ್ರಕರಣ ನಡೆದಿದೆ. ವಿಜಯನಗರ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದ್ದು, ಒಂದೇ ವಯಸ್ಸಿನ ಗೆಳೆಯರಿಬ್ಬರು ಸಾವಿಗೀಡಾಗಿದ್ದಾರೆ.
ಅಮರ್ (19), ಚಂದ್ರು (19) ಸಾವಿಗೀಡಾದ ಯುವಕರು. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದ ಕೆರೆಯಲ್ಲಿ ಈ ಅವಘಡ ಸಂಭವಿಸಿದೆ. ರಜೆ ಇದ್ದ ಕಾರಣ ಮೋಜಿಗೆಂದು ಅವರು ಈಜಾಡಲು ಕೆರೆಗೆ ಇಳಿದಿದ್ದರು. ಆದರೆ ಕೆರೆಯಲ್ಲಿ ಕೆಸರಿದ್ದ ಕಾರಣ ಕಾಲುಗಳು ಸಿಕ್ಕಿ ಹಾಕಿಕೊಂಡಿದ್ದವು.
ಕೆಸರಿನಿಂದ ತಪ್ಪಿಸಿಕೊಳ್ಳಲು ಆಗದೆ ಇವರಿಬ್ಬರು ಸಾವಿಗೀಡಾಗಿದ್ದಾರೆ. ನೀರಿನಲ್ಲಿ ಮುಳುಗಿ ಸಾವಿಗೀಡಾದ ಇವರಿಬ್ಬರ ಶವಗಳನ್ನು ಮುಳುಗುತಜ್ಞರು ಮೇಲಕ್ಕೆತ್ತಿದ್ದು, ತೆಲಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಹಲವಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.