ನ್ಯೂಸ್

ಇದಿನ್ನೂ ಟ್ರೇಲರ್​​, ಸದ್ಯದಲ್ಲೇ ಇನ್ನಿಬ್ಬರು ಸಚಿವರ ಸಿಡಿ ರಿಲೀಸ್​!? ಈ ಭಾಗದ ಸಚಿವರ ಸಿಡಿ ರಿಲೀಸ್​ ಆಗೋ ಸಾಧ್ಯತೆ!

Mandara

ಬೆಂಗಳೂರು: ರಾಜ್ಯ ಸಲ ಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿಯೊಂದು ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಎದ್ದಿದೆ. ಇದಿನ್ನೂ ಟ್ರೈಲರ್​ ಅಷ್ಟೇ, ಸದ್ಯದಲ್ಲೇ ಇನ್ನಿಬ್ಬರು ಸಚಿವರ ಸಿಡಿ ಬಿಡುಗಡೆಯಾಗಲಿದೆ ಎನ್ನುವ ಚರ್ಚೆಯೂ ಆರಂಭವಾಗಿದೆ.

ಇನ್ನಿಬ್ಬರು ಸಚಿವರ ಸಿಡಿ ಬಿಡುಗಡೆಯಾಗುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳೆರೆಡೂ ಈ ರೀತಿ ಚರ್ಚೆ ನಡೆಸುತ್ತಿವೆ. ಹಳೇ ಮೈಸೂರು ಭಾಗದ ಒಬ್ಬರು ಮತ್ತು ಉತ್ತರ ಕರ್ನಾಟಕ ಭಾಗದ ಒಬ್ಬ ಸಚಿವರ ಸಿಡಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಯಾವಾಗ ಆ ಸಿಡಿಗಳು ಬಿಡುಗಡೆಯಾಗಲಿವೆ ಎನ್ನುವುದರ ಬಗ್ಗೆ ಕುತೂಹಲವಿದ್ದು, ಭಾರೀ ಚರ್ಚೆ ನಡೆಯುತ್ತಿದೆ.

ನಾಳೆ ರಾಜ್ಯ ಸಚಿವ ಸಂಪುಟದ ಸಭೆಯಿದ್ದು, ಅದರ ಹಿಂದಿನ ದಿನವೇ ಒಂದು ಮಹತ್ವದ ಬೆಳವಣಿಗೆ ರಾಜ್ಯದಲ್ಲಾಗಿದೆ. ಸಚಿವ ರಮೇಶ್​ ಜಾರಕಿಹೊಳಿ ಅವರು ಸಭೆಗೆ ಬರಲಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ. ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳು ಸಚಿವರ ಅಭಿಪ್ರಾಯ ಪಡೆಯಲಿದ್ದಾರೆ ಎನ್ನಲಾಗಿದೆ.