ನ್ಯೂಸ್

ಆಡುಗಳ ಮೇಲೆ 'ಅಲ್ಲಾ' ಗುರುತು ಪತ್ತೆ! 51 ಲಕ್ಷ ರೂ.ಗೆ ಮಾರಾಟವಾಯ್ತು ಜೋಡಿ ಮೇಕೆ

ಉತ್ತರ ಪ್ರದೇಶ: ಬಕ್ರೀದ್‌ ಸಂದಂರ್ಭದಲ್ಲಿ ಕುರಿ-ಮೇಕೆಗಳು ಮಾರಾಟ ಭರಾಟೆಯಿಂದ ನಡೆಯುತ್ತಿದ್ದು, ಉತ್ತರ ಪ್ರದೇಶದ ಲಖನೌದಲ್ಲಿ ಜೋಡಿ ಮೇಕೆಗಳು ಬಕ್ರಾ ಮಂಡಿಯಲ್ಲಿ 51 ಲಕ್ಷ ರೂಪಾಯಿಯ ದಾಖಲೆ ಬೆಲೆಗೆ ಮಾರಾಟ ಆಗಿವೆ. ಈ ಆಡುಗಳ ಮೇಲೆ ಅರೇಬಿಕ್ ಭಾಷೆಯಲ್ಲಿ 'ಅಲ್ಲಾ' ಎಂಬ ಗುರುತು ಕೂಡ ಇತ್ತು ಎಂದು ವರ್ತಕರು ಹೇಳಿದ್ದಾರೆ.

18 ತಿಂಗಳ, ಸಲ್ಮಾನ್ ಹೆಸರಿನ ಬರ್ಬಾನಿ ಆಡು 65 ಕೆಜಿ ತೂಕವಿದ್ದು ಅದರ ಬಲ ಕಿವಿ ಮೇಲೆ ಜನ್ಮ ಗುರುತು ಇದೆ. ಘನಿ ಎಂಬ ರಾಜಸ್ಥಾನಿ ಆಡಿನ ಮೇಲೆಯೂ ಇದೇ ರೀತಿಯ ಗುರುತು ಇದ್ದು ಎರಡೂ ಆಡುಗಳು ಭರ್ಜರಿ ಬೆಲೆಗೆ ಮಾರಾಟವಾದವು. ಸ್ಥಳೀಯ ರೈತ ಮುಸ್ತಾಕ್ ಅಹಮದ್‌ ಈ ಆಡುಗಳನ್ನು ಸಾಕಿದ್ದು, ಈ ವರ್ಷ ಇದುವರೆಗೆ ಅತಿ ದುಬಾರಿ ಬೆಲೆ ಬಿಕರಿಯಾಗಿವೆ.

ರೈತ ಮುಸ್ತಾಕ್ ಅಹಮದ್‌ ಎರಡೂ ಆಡುಗಳಿಗೆ ಬಟ್ಟೆಗಳನ್ನು ತೊಡಿಸಿ ಸಿಂಗರಿಸಿ ಮಾರುಕಟ್ಟೆಗೆ ತಂದಿದ್ದ. ಬಕ್ರಾ ಮಂಡಿಯಲ್ಲಿ ವಿವಿಧ ತಳಿಗಳ ಸುಮಾರು ಒಂದು ಲಕ್ಷ ಕುರಿ-ಮೇಕೆಗಳ ಮಾರಾಟವಾಗುತ್ತದೆ. ರೈತರು ಈ ಜಾನುವಾರುಗಳಿಗೆ ಪಠಾಣ್, ಹೀರಾ, ರಾಜ್‌ಕುಮಾರ್ ಮತ್ತು ಟೈಗರ್ ಇತ್ಯಾದಿಯಾಗಿ ಆಸಕ್ತಿದಾಯಕ ಹೆಸರುಗಳನ್ನು ಇಡುತ್ತಾರೆ.