ಉತ್ತರಕಾಶಿ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದ ಒಂದು ಭಾಗ ಕುಸಿದು ಇಂದಿಗೆ ಒಂಬತ್ತು ದಿನಗಳು ಕಳೆದಿದ್ದು, ನಿರ್ಮಾಣ ಹಂತದಲ್ಲಿದ್ದ ಸುರಂಗವು ಕುಸಿತ ಕಂಡ ಪರಿಣಾಮ ಬರೋಬ್ಬರಿ 41 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾರೆ. ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರುವಲ್ಲಿ ರಕ್ಷಣಾ ತಂಡಗಳು ಹರಸಾಹಸ ಪಡುತ್ತಿದೆ. ಈ ಮಧ್ಯೆ ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಭಾರತಕ್ಕೆ ಆಗಮಿಸಿದ್ದು, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಆಸೀಸ್ ವಿರುದ್ಧ ಟಿ20 ಸರಣಿಯಿಂದ ವಿಶ್ವಕಪ್ ತಾರೆಯರಿಗೆ ರೆಸ್ಟ್; ಸೂರ್ಯಕುಮಾರ್ ಹಂಗಾಮಿ ನಾಯಕ; ಅವಳಿ ಉಪನಾಯಕರು!
"ರಕ್ಷಣಾ ಪ್ರಯತ್ನಗಳ ಕುರಿತು ಮಾತನಾಡಿದ ಡಿಕ್ಸ್, ಆದಷ್ಟು ಬೇಗ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವ ಭರವಸೆಯಿದೆ. ಆದಾಗ್ಯೂ, ಅವರನೆಲ್ಲಾ ರಕ್ಷಿಸಲು ದಿನಗಳು ಅಥವಾ ವಾರಗಳೇ ಬೇಕಾಗಬಹುದು ಎಂದು ಹೇಳಿದರು. ರಕ್ಷಣಾ ಕಾರ್ಯಾಚರಣೆಯ ಕುರಿತು ಮಾತನಾಡುತ್ತಾ, ತುರ್ತು ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗಿದೆ. 60 ಜನರ ತಂಡ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತಿದೆ" ಎಂಬುದನ್ನು ಒತ್ತಿ ಹೇಳಿದ್ದಾರೆ.
"ನಾನು ಸುಮಾರು 60 ವಿಷಯ ಪರಿಣತರ ತಂಡವನ್ನು ಹೊಂದಿದ್ದೇನೆ. ಇಲ್ಲಿ ತಂಡಕ್ಕೆ ಸಹಾಯ ಮಾಡಲು ನಾವು ಏನು ಮಾಡಬಹುದೋ ಅದನೆಲ್ಲಾ ಮಾಡುವುದರಲ್ಲಿ ನಿರತರಾಗಿದ್ದೇವೆ. ಇಲ್ಲಿ ನಮ್ಮ ಜತೆಯಿರುವ ತಂಡವು ಅದ್ಭುತವಾಗಿದೆ. ಲಂಬ ಕೊರೆಯುವಿಕೆಯ ಸವಾಲೆಂದರೆ ಅಧಿಕಾರಿಗಳು ಅತ್ಯಂತ ನಿಖರವಾಗಿರಬೇಕು. ಅವರು ಸ್ಥಳವನ್ನು ತಪ್ಪಿಸಿಕೊಂಡರೆ, ಲಂಬ ದ್ರವ್ಯರಾಶಿಯು ಬದಲಾಗಬಹುದು, ಇದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು" ಎಂದು ಸುರಂಗ ತಜ್ಞ ಡಿಕ್ಸ್ ಹೇಳಿದ್ದಾರೆ,(ಏಜೆನ್ಸೀಸ್).