ನವದೆಹಲಿ: ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ ಇದೀಗ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ತುನಿಷಾ ಶರ್ಮಾ ತಾಯಿ ಕೊಟ್ಟ ದೂರಿನ ಮೇರೆಗೆ ಈಗಾಗಲೇ ನಟ ಶಿಜಾನ್ ಖಾನ್ನನ್ನು ಬಂಧನವಾಗುತ್ತಿದ್ದಂತೆ ಹೆಚ್ಚಿನ ತನಿಖೆಗೆ ನ್ಯಾಯಾಲಯ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಇದೀಗ ತುನಿಷಾ ಶರ್ಮಾಳ ಅಂಕಲ್ ಪವನ್ ಶರ್ಮಾ ಕೆಲವೊಂದು ವಿಚಾರಗಳನ್ನು ಹೊರಹಾಕಿದ್ದು, ಶೀಜನ್ ಖಾನ್ನೊಂದಿಗಿನ ಸ್ನೇಹ ಬೆಳೆಯುತ್ತಿದ್ದಂತೆ ಆಕೆ ಹಿಜಾಬ್ ಧರಿಸಲು ಆರಂಭಿಸಿದ್ದಳು ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆ ಹೊರಬೀಳುತ್ತಿದ್ದಂತೆ ತನಿಷಾ ಶರ್ಮಾ ಲವ್ ಜಿಹಾದ್ಗೆ ಒಳಗಾಗಿದ್ದಳಾ ಎಂಬ ಅನುಮಾನ ಮೂಡುತ್ತಿದ್ದೆ. ಆತ್ಮಹತ್ಯೆ ಕೇಸ್ಗೆ ಲವ್ ಜಿಹಾದ್ ಕಳಂಕವೂ ಅಂಟಿಕೊಳ್ಳುತ್ತಿದ್ದಂತೆ ಪ್ರಕರಣದ ಬಗ್ಗೆ ಜನರ ಕುತೂಹಲವೂ ಕೆರಳುತ್ತಿದೆ.
ಶೀಜನ್ ಖಾನ್ ತುನಿಷಾ ಶರ್ಮಾ ಹೊರತಾಗಿ ಇನ್ನಷ್ಟು ಹುಡುಗಿರಯೊಂದಿಗೆ ಸಂಬಂಧ ಇರಿಸಿಕೊಂಡಿದ್ದ ಎಂದು ಪವನ್ ಶರ್ಮಾ ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಶಿಜಾನ್‌ರನ್ನು ಬಂಧಿಸಲಾಗಿದ್ದು, ಭಾರತೀಯ ದಂಡಸಂಹಿತೆ 306ರಡಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)