ವಾಷಿಂಗ್ಟನ್: ಕರೊನಾ COVID19 ವೈರಸ್ ಸೋಂಕು ಜಗತ್ತಿನಾದ್ಯಂತ ಹರಡಿ ತಲ್ಲಣಗೊಳಿಸಿದ ನಂತರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಸೋಂಕಿನಿಂದ ಅತಿ ಹೆಚ್ಚು ನಷ್ಟಕ್ಕೀಡಾಗಿರುವುದು ಅಮೆರಿಕವೇ ಎಂಬುದೂ ಇದಕ್ಕೆ ಕಾರಣ. ಈ ನಡುವೆ, ಅಮೆರಿಕದಲ್ಲಿ ಈ ಸೋಂಕು ತಡೆಯಲು ಲಸಿಕೆ ಅಭಿವೃದ್ಧಿ ಪಡಿಸುವ ಕೆಲಸ ಭರದಿಂದ ಸಾಗಿದೆ.ಇದರಲ್ಲಿ ಭಾರತದ ಸೈಂಟಿಸ್ಟ್ಗಳೂ ಕೆಲಸ ಮಾಡುತ್ತಿದ್ದಾರೆ.ಆದರೆ, ಇದೇ ಮೊದಲ ಸಲ ಅಧ್ಯಕ್ಷ ಟ್ರಂಪ್ ಇಂಡಿಯನ್ ಅಮೆರಿಕನ್ ಸೈಂಟಿಸ್ಟ್ಗಳು ಸಂಶೋಧಕರನ್ನು ಗ್ರೇಟ್ ಎಂದು ಕೊಂಡಾಡಿ ಪ್ರಶಂಸಿದ್ದಾರೆ.
ವೈಟ್ಹೌಸ್ನ ರೋಸ್ ಗಾರ್ಡನ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಸಂದರ್ಭದಲ್ಲಿ ಅಧ್ಯಕ್ಷ ಟ್ರಂಪ್ ಈ ವಿಷಯ ಪ್ರಸ್ತಾಪಿಸಿದ್ದು, ಅಮೆರಿಕದಲ್ಲಿ ಭಾರತೀಯರು ಭಾರಿ ಸಂಖ್ಯೆಯಲ್ಲಿ ಇದ್ದಾರೆ.ಅವರಲ್ಲೂ ಬಹುತೇಕರು ಗ್ರೇಟ್ ಸೈಂಟಿಸ್ಟ್ಗಳು, ಸಂಶೋಧಕರು ಇದ್ದು ನಾವೀಗ ತಯಾರಿಸುತ್ತಿರುವ ಕೋವಿಡ್ 19 ಲಸಿಕೆ ಅಭಿವೃದ್ಧಿ ಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.ಅವರ ಕೆಲಸವನ್ನು ಕೊಂಡಾಡಲೇ ಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಂದಿನ ಮಹಾಯುದ್ಧಗಳ ವಂಚನೆಯ ತೀವ್ರತೆ, ಸಾಂದ್ರತೆ
ಬಹುತೇಕ ಇಂಡಿಯನ್ ಅಮೆರಿಕನ್ನರು ಮೆಡಿಕಲ್ ಸೈನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್, ಯೂನಿವರ್ಸಿಟೀಸ್, ರೀಸರ್ಚ್ ಇನ್ಸ್ಟಿಟ್ಯೂಟ್ಸ್, ಬಯೋಫಾರ್ಮಾ ಸ್ಟಾರ್ಟಪ್ಗಳಲ್ಲಿ ಕೆಲಸ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅಮೆರಿಕದಲ್ಲಿ ಅಂದಾಜು 40 ಲಕ್ಷ ಭಾರತೀಯ ಅಮೆರಿಕನ್ನರಿದ್ದಾರೆ.ಈ ಪೈಕಿ ಈ ಸಲದ ಅಧ್ಯಕ್ಷೀಯ ಚುನಾವಣೆಗೆ ಮತಚಲಾಯಿಸುವ ಮತದಾರರ ಸಂಖ್ಯೆ ಅಂದಾಜು 25 ಲಕ್ಷ. ಈ ಹಿಂದೆಯೂ 2016ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಟ್ರಂಪ್ ಅವರು ನ್ಯೂಜೆರ್ಸಿಯಲ್ಲಿ ಭಾರತೀಯ ಅಮೆರಿಕನ್ನರ ಸಭೆಯಲ್ಲಿ ಪಾಲ್ಗೊಂಡ ಮೊದಲಿಗ ಎನಿಸಿಕೊಂಡಿದ್ದಾರೆ.ಅಲ್ಲಿಂದೀಚೆಗೆ ಟ್ರಂಪ್ ಸಂದರ್ಭ ಸಿಕ್ಕಾಗೆಲ್ಲ ಭಾರತವನ್ನು ಭಾರತೀಯರನ್ನು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕೊಂಡಾಡುತ್ತಲೇ ಬಂದಿದ್ದಾರೆ.(ಏಜೆನ್ಸೀಸ್)