More

    ನಮ್ಮ ಫ್ರೆಂಡ್ ಭಾರತಕ್ಕೆ ವೆಂಟಿಲೇಟರ್​ಗಳನ್ನು ಕೊಡುಗೆಯಾಗಿ ಕೊಡ್ತೇವೆ ಎಂದ ಅಮೆರಿಕ ಅಧ್ಯಕ್ಷ

    ವಾಷಿಂಗ್ಟನ್​: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಗುಡ್​ಫ್ರೆಂಡ್ ಎಂದು ಹೇಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​, ಮಿತ್ರ ರಾಷ್ಟ್ರ ಭಾರತಕ್ಕೆ ವೆಂಟಿಲೇಟರ್​ಗಳನ್ನು ಕೊಡುಗೆಯಾಗಿ ಒದಗಿಸುತ್ತೇವೆ ಎಂದು ಶುಕ್ರವಾರ ಟ್ವೀಟ್ ಮಾಡುವ ಮೂಲಕ ಘೋಷಿಸಿದ್ದಾರೆ.

    ಇದನ್ನೂ ಓದಿ: ಅಮೆರಿಕ-ಚೀನಾ ನಡುವಿನ ವೈಮನಸ್ಯ ತಾರಕಕ್ಕೆ: ಜಿನ್​ಪಿಂಗ್ ಜತೆ ಮಾತನಾಡಲಾರೆ ಎಂದ ಡೊನಾಲ್ಡ್ ಟ್ರಂಪ್

    ವೆಂಟಿಲೇಟರ್ ಕೊಡುಗೆಯನ್ನು ಘೋಷಿಸುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ.ಈ ಸಂಕಷ್ಟದ ಸಂದರ್ಭದಲ್ಲಿ ಭಾರತ ಮತ್ತು ನರೇಂದ್ರ ಮೋದಿಯವರ ಜತೆಗೆ ನಾವಿದ್ದೇವೆ.ಈ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಅಭಿವೃದ್ಧಿ ಪಡಿಸುವ ವಿಚಾರದಲ್ಲೂ ನಾವು ಸಹಕಾರದೊಂದಿಗೆ ಮುನ್ನಡೆಯುತ್ತಿದ್ದೇವೆ. ಕಣ್ಣಿಗೆ ಕಾಣದ ಈ ಶತ್ರುವನ್ನು ನಾವು ಒಟ್ಟಾಗಿ ಸೋಲಿಸಲಿದ್ದೇವೆ ಎಂದು ಟ್ರಂಪ್ ಟ್ವೀಟ್​ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಆದರೆ, ಈ ಉಪಕರಣಗಳು ಭಾರತಕ್ಕೆ ಹೇಗೆ ತಲುಪಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶ್ವೇತಭವನವೂ ಇದುವರೆಗೂ ಸ್ಪಷ್ಟಪಡಿಸಿಲ್ಲ.

    ಇದನ್ನೂ ಓದಿ: ಇಂದಿನ ಮಹಾಯುದ್ಧಗಳ ವಂಚನೆಯ ತೀವ್ರತೆ, ಸಾಂದ್ರತೆ

    ಭಾರತದಲ್ಲಿ ಶುಕ್ರವಾರ ಕೋವಿಡ್ 19 ಸೋಂಕಿತರ ಸಂಖ್ಯೆ 85,000ದ ಗಡಿ ದಾಟಿದೆ. ಇದೇ ವೇಳೆ ಚೀನಾ ಘೋಷಿಸಿರುವ ಆ ದೇಶದ ಸೋಂಕಿತ ಸಂಖ್ಯೆ 82,933. ಹೀಗಾಗಿ ಚೀನಾವನ್ನು ಈ ವಿಷಯದಲ್ಲಿ ಹಿಂದಿಕ್ಕಿದ ವೇಳೆಯೇ ಅಮೆರಿಕ ಅಧ್ಯಕ್ಷರ ಈ ಟ್ವೀಟ್ ಗಮನಸೆಳೆದಿದೆ.

    ಇದನ್ನೂ ಓದಿ: ನೌಕಾಪಡೆಗೆ ಅತ್ಯಾಧುನಿಕ ಹೆಲಿಕಾಪ್ಟರ್: ಜಲಾಂತರ್ಗಾಮಿಗಳನ್ನು ಗುರುತಿಸಿ ದಾಳಿ ನಡೆಸುವ ಸಾಮರ್ಥ್ಯ

    ಇದಕ್ಕೂ ಮುನ್ನ ಟ್ರಂಪ್ ಅವರ ಮನವಿಯ ಮೇರೆಗೆ ಭಾರತ ಕಳೆದ ತಿಂಗಳು 50 ದಶಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಅಮೆರಿಕಕ್ಕೆ ಕಳುಹಿಸಿಕೊಟ್ಟಿತ್ತು.ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ ಇದನ್ನು ಅಲ್ಲಿ ಬಳಸಲಾಗುತ್ತಿದೆ.ಜಗತ್ತಿನಲ್ಲೇ ಕರೊನಾ ಸೋಂಕಿಗೆ ಹೆಚ್ಚು ತಲ್ಲಣಗೊಂಡಿರುವ ರಾಷ್ಟ್ರ ಅಮೆರಿಕ. ಹೀಗಾಗಿ, ಅಲ್ಲಿ ಚೀನಾ ವಿರೋಧಿ ಭಾವನೆ ವ್ಯಾಪಕವಾಗಿದೆ. (ಏಜೆನ್ಸೀಸ್​)

    ಮಂಗಲಕರ ಆಚಾರವೇ ಶೋಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts