

ಭೀಷ್ಮಪರ್ವ ಮಹಾಭಾರತದಲ್ಲಿ ಯುಧಿಷ್ಠಿರ-ಭೀಷ್ಮರಲ್ಲಿ ಒಂದು ಯುದ್ಧಧರ್ಮದ ರೀತಿಯ ಒಪ್ಪಂದವಾಗಿತ್ತು. ಕಾಲಾಳು ಕಾಲಾಳುವಿನ ಜೊತೆಗಷ್ಟೇ ಹೋರಾಡಬೇಕು. ಅಶ್ವಾರೂಢ, ಗಜಾರೂಢ, ರಥಾರೂಢರು ಹಾಗೆ ಸಮಾನರೊಡನೆ ಕಾದಾಡಬೇಕು. ರಾತ್ರಿ ಯುದ್ಧ ಕೂಡದು. ಹಿಂದಿನಿಂದ ಯಾರನ್ನೂ ಹೊಡೆಯಬಾರದು. ಓಡುವವನನ್ನು ನಿರಾಯುಧನನ್ನು, ಸ್ತ್ರೀಯನ್ನು ಹೊಡೆಯಬಾರದು. ಸಂಧ್ಯೆಯಾದ ನಂತರ ಎಲ್ಲರೂ ಪರಸ್ಪರ ಮಿತ್ರರು, ಇತ್ಯಾದಿ. (ವಿವರಗಳು ನನ್ನ ‘ಆ ಹದಿನೆಂಟು ದಿನಗಳು’ ಗ್ರಂಥದಲ್ಲಿ) ಹತ್ತು ದಿನ ಭೀಷ್ಮಪತನದವರೆಗೂ ಇದು ನಡೆದಿತ್ತು. ದ್ರೋಣಪರ್ವದಲ್ಲಿ ಎಲ್ಲಾ ಗಾಳಿಗೆ ತೂರಿದರು. ಒಬ್ಬನೇ ಅಭಿಮನ್ಯುವನ್ನು ಆರ್ವರು ಅತಿರಥರು- ಕರ್ಣ, ದ್ರೋಣ, ಕೃಪ, ಅಶ್ವತ್ಥಾಮ,
ದುಃಶಾಸನ, ಭೂರಿಶ್ರವಸ್ಸು, ಇನ್ನೊಬ್ಬ ಸೇರಿ ಕುರಿಯಂತೆ ಕೊಚ್ಚಿದರು. ದುರೊ್ಯೕಧನ ಆಚಾರ್ಯನನ್ನು ಛೇಡಿಸಿದಾಗ ‘ನೀನು ಗಂಡಸಾದರೆ ಹಿಂದಿನಿಂದ ಬಂದು ಬಾಲಕನ ಕವಚ ಕತ್ತರಿಸು. ಅದು ಅವರಪ್ಪನಿಗೆ ನಾನು ಹೇಳಿಕೊಟ್ಟಿದ್ದು. ನನಗೆ, ಅವನಿಗೆ, ಈ ಕುಮಾರನಿಗೆ ಮೂವರಿಗೆ ಮಾತ್ರ ರಹಸ್ಯ ಗೊತ್ತು’ ಎಂದವನು ದ್ರೋಣ! ಮಾತಿನಲ್ಲಿ ಜಾರಿಕೊಂಡ. ಕರ್ಣ ಹಾಗೇ ಮಾಡಿದ, ಬಿಲ್ಲು ತುಂಡರಿಸಿದ. ಸಾರಥಿ, ಕುದುರೆ, ರಥಗಳನ್ನು ಇತರರು ಹೇಡಿಗಳಂತೆ ಭೇದಿಸಿದರು. ದುಃಶಾಸನ ಕೈಗಳನ್ನು ಕತ್ತರಿಸಿದ. ಗದೆಯಿಂದ ಕೊಂದ. ಅಲ್ಲಿ ಶುರುವಾಯ್ತು ಕಲಿಯುಗ ಎಂದ ಶ್ರೀಕೃಷ್ಣ!. ಆಮೇಲೆ ರಾತ್ರಿ ಯುದ್ಧ. ಯಾರು ಯಾರೆಂದೇ ತಿಳಿಯದೆ ಕೊಂದುಕೊಂಡದ್ದು. ಮಾಯಾ-ವಂಚನೆಯ ಯುದ್ಧ. ಅಲ್ಲಿ ಭೀಮಪುತ್ರ ಘಟೋತ್ಕಚ ಆಹುತಿ. ಇಷ್ಟಕ್ಕೇ ನಾವು ಕಂಗಾಲಾಗುತ್ತೇವೆ. ಶಕುನಿ, ಕರ್ಣಪರ್ವದಾಚೆ, ಶಂಬರನ ಮಾಯೆ ಬೀಸಿ, ಸಾವಿರಾರು ಸಿಂಹ, ಹುಲಿ, ತೋಳಗಳ ಸೇನೆಯನ್ನು ಛೂಬಿಟ್ಟು ಸಹದೇವನ ಕೈಲಿ ಸಾಯುತ್ತಾನೆ.
ಈ ‘ಶಂಬರ’ ಯಾರು? ರಾಮಾಯಣದ ‘ಶಂಬೂಕ’ನಂತೆ ಅದು ಒಂದು ಸಂಘಟನೆ, ಐಎಸ್ಐ, ಐಎಸ್ಐಎಸ್, ಸಿಮಿ, ಪಿಡಿಎಫ್, ಎಲ್ಟಿಟಿಇಯಂತೆ. ನಾಯಕ ಒಬ್ಬ ಸತ್ತರೆ ಇನ್ನೊಬ್ಬ ಬರುತ್ತಾ ಶಂಬರ ಸಾಯುತ್ತಲೇ ಇರಲಿಲ್ಲ. ರಾಮಾಯಣದ ದಶರಥ ಹೋರಾಡಿದ್ದು ಶಂಬರನೊಡನೆ, ಮಹಾಭಾರತದ ಶಕುನಿಯ ಗುರುವೂ ಇವನೇ, ಇಲ್ವಲ, ವಾತಾಪಿಗಳ ಗುರುವೂ ಇವನೇ. ಮಂಥರೆ, ಕೈಕೇಯಿಗೆ ರಾಮಾಭಿಷೇಕವನ್ನು ನಿಲ್ಲಿಸುವ ಉಪಾಯ ಹೇಳಿಕೊಟ್ಟಾಗ, ಅವಳು ‘ಎಲೈ ಗೂನಿ, ಶಂಬರನ ಮಾಯೆಗಳೆಲ್ಲ ನಿನ್ನ ಡುಬ್ಬಿನಲ್ಲೇ ಅಡಗಿವೆ! ಅದಕ್ಕೊಂದು ಚಿನ್ನದ ಹೊದಿಕೆ-ಕವಚ ಗವಸು- ಮಾಡಿಸಿಕೊಡುತ್ತೇನೆ’ ಎಂದಾಗ ಕೈಕೇಯಿ ಮಂಥರೆಯರಿಗೆ ಶಂಬರನ ವಂಚಕ ಉಪಾಯಗಳು, ಮಾಯೆ ಗೊತ್ತಿದ್ದವು! ಅದೇ ಪ್ರಾಂತ್ಯದವನು ಒಸಾಮಾ ಬಿನ್ ಲಾಡೆನ್! ಅದೇ ಪ್ರಾಂತ್ಯದ್ದು ತಾಲಿಬಾನ್. ಅದೇ ಶಂಬರನ ಗುಟ್ಟು. ವೇದದಲ್ಲಿ ‘ಶಂಬರ’ ಎಂದರೆ ಮೋಡ, ಮೇಘ, ಒಂದೇ ಆಕಾರ ಇಲ್ಲದ ಚಾಲನೆಯ ಒಂದು ಭೂತ, ಬೇತಾಳ, ‘ಡ್ರ್ಯಾಗನ್’ ಎಂದು ಕರೆಸಿಕೊಳ್ಳುತ್ತಿರುವ ಚೀನಿ ಮಾಯಾಶಕ್ತಿ. ಅದು ಕಣ್ಣಿಗೆ ಕಾಣದೆಯೇ ಜಗತ್ತನ್ನು ಆಕ್ರಮಿಸುವ, ತನ್ನವರು, ಪರರು ಎಂಬ ಭೇದವಿಲ್ಲದೆ ಎಲ್ಲರನ್ನು ತನ್ನ ಸ್ವಾರ್ಥಕ್ಕೆ ಬಲಿ ತೆಗೆದುಕೊಳ್ಳುವ ದೈತ್ಯಶಕ್ತಿ, ಸಂಸ್ಥೆ, ಸಂಘಟನೆ. ಅಂಥದೊಂದು ದೇವೇಂದ್ರನನ್ನು ಬಾಧಿಸುತ್ತಲೇ ಅರ್ಜುನ ಇಂದ್ರ ಸಹಾಯಕ್ಕೆ ಹೋದುದು ವನಪರ್ವದ ಕಥೆ. ನಿವಾತಕುಚರು, ಕಾಲಕೇಯರು, ಸಾಲಕಟಂಕರು, ಅಗಸ್ಱರ ಆಪೋಶನಕ್ಕೆ ತುತ್ತಾದವರಲ್ಲು ಶಂಬರನ ಸೇನೆಯೇ. ಅದರ ಇಂದಿನ ರೂಪಾಂತರಗಳೂ, ಒಳ ಸಹಾಯಕರೂ ನಿಮ್ಮೆದುರೇ ಇದ್ದಾರೆ, ಸಿಪಿಐ, ಸಿಪಿಐ(ಎಂ), ಮಾವೋವಾದಿ, ನಕ್ಸಲ್, ಪಿಡಬ್ಲುಎಫ್, ಉಲ್ಪಾ, ಬಂಡುಕೋರ ನಾಗಾ, ನೆಹ್ರೂ ಪರಂಪರೆ, ನಕ್ಸಲರು, ಪರಿಪೋಷಿತ ಬುದ್ಧಿಜೀವಿಗಳು, ನಗರ ನಕ್ಸಲರು, ‘ಮಿ ಟೂ’ ಸೇನೆ, ಹಿಂದಣ ಅನಂತಮೂರ್ತಿ, ಕಾರ್ನಾಡರು, ಆ ನಡೆಯ ಇಂದಿನ ಪಳೆಯುಳಿಕೆಗಳು ಎಲ್ಲ ಶಂಬರ ಸೇನೆಯೇ! ಕಣ್ಣಿಗೆ ಕಾಣದ್ದನ್ನು ಎದುರಿಸುವುದು ಹೇಗೆ? ಅದಕ್ಕೆ ರಘುವಂಶರಾಜರ ‘ಶಬ್ದವೇಧೀ’ ವಿದ್ಯೆಯೇ ಬೇಕಾಗಿಯೇ, ದಶರಥ ಆಯುಸ್ಸನ್ನೆಲ್ಲ ವಾಯವ್ಯದಲ್ಲಿ ಕಳೆದ. ಅಲ್ಲೇ ಬಾಬರ್, ಘಸ್ನಿ, ಘೋರಿ ಮುಂತಾದ ಭಯೋತ್ಪಾದಕರೆಲ್ಲ ಹುಟ್ಟಿ ಬಂದು ದೆಹಲಿಯ ಬೀದಿಬೀದಿಗಳಲ್ಲಿ ಹೆಸರಲ್ಲಿ ನಮ್ಮನ್ನು ಸಾಯಿಸುತ್ತಿರುವ ತೊಘಲಕ್, ಖಿಲ್ಜಿ, ತೈಮೂರ, ಛಂಗೀಸರು. ಅಂದಿನವೆಲ್ಲ ಕೂಟಾಸ್ತ್ರಗಳು- ಮೋಸದ ಆಯುಧಗಳು. ರಾಮಾಯಣದ ಇಂದ್ರಜಿತ್ತನ ನಾಗಪಾಶ ಅಸ್ತ್ರ ಯಾವುದು? ವಾನರ ಸೇನೆಯೆಲ್ಲ ಸತ್ತುಬಿದ್ದದ್ದು ಯಾವುದರ ದೆಸೆಯಿಂದ? ಆಯುರ್ವೆದದಲ್ಲಿ ‘ನಾಗ’ ಎಂದರೆ ಸೀಸ-lead ಎಂದು ನನ್ನ ಅಣ್ಣ ನರಸಿಂಹಾಚಾರ್ಯರು, ‘ಆಯುರ್ವೆದಾಚಾರ್ಯ’ ಬಿರುದಿನವರು, ಒಮ್ಮೆ ನನ್ನ ಮನೆಗೆ ಬೇಂದ್ರೆಯವರು ಬಂದಿದ್ದಾಗ ಹೇಳಿದ್ದು, ಬೇಂದ್ರೆ ಚಕಿತರಾಗಿ ‘ಹಾಗಾದರೆ, ನಾಗಾಸ್ತ್ರ ಎಂದರೆ ಎಂದರೆ ಉಸಿರು ಕಟ್ಟಿಸಿ ಕೊಲ್ಲುವ GASನಂತಹ ಒಂದು ವಿಷಾನಿಲ ಪ್ರಯೋಗ’ ಎಂದು ಉದ್ಗರಿಸಿ ಕಣ್ಣರಳಿಸಿದ್ದು ನೆನಪಿಗೆ ಬರುತ್ತದೆ. ಅದೇ ಈಗಣ ಕರೊನಾ ಎಂಬುದು ಇದ್ದೀತೇ? ಯೋಚಿಸಿ. ಇಂಥದ್ದು ಮಹಾಭಾರತದ ಕರ್ಣನ ಬಳಿಯೂ ಇತ್ತು. ಕರ್ಣಪ್ರಿಯ ಕರ್ಣಾಟಕದವರ ಕಣ್ಮಣಿಯಲ್ಲಿ ನಾಗಾಸ್ತ್ರ, ಸರ್ಪಾಸ್ತ್ರ! ಅದರ ಭೇದನ ಶ್ರೀಕೃಷ್ಣನಿಗೆ ಗೊತ್ತಿತ್ತು. ಅಸ್ತ್ರ ತಯಾರಕ ಯಾರು? ತಕ್ಷಕ. ಮಾಯಾವೀ. ಅವನ ಸೊಸೆ ಖಾರಾವನದಲ್ಲಿ ಬೆಂದು ಸತ್ತಳು. ತಕ್ಷಕನ ಮಗ ಅಶ್ವಸೇನ ತಪ್ಪಿಸಿಕೊಂಡು ಹೋಗಿ ಈ ಅಸ್ತ್ರ ತಯಾರಿಸಿದ. ಅದು ಪಾಂಡವರ ಮೇಲೆ ಸೇಡಿಗೆ ಕರ್ಣನ ಬತ್ತಳಿಕೆಯಲ್ಲಿ ಸೇರಿ, ತನ್ನನ್ನು ಪ್ರಯೋಗಿಸು ಎಂದು ಪದೇಪದೆ ಹೇಳುತ್ತಿದ್ದು, ಕರ್ಣನ ಕಿವಿಗೆ ಬಿದ್ದು, ಬಾಣ ಬಿಟ್ಟ. ಕೃಷ್ಣ ತಂತ್ರದ ಮುಂದೆ ಶಂಬರನ ಮಾಯೆ ನಡೆಯದು. ತಿಳಿಯಿತೇ ಮಾರಾಯ್ರೆ. ಮೋದಿಯವರ ತಂತ್ರದ ಮುಂದೆ ಚೀನಾ, ಅಮೆರಿಕಾ, ಅರಬ್ಬರ ಅಸ್ತ್ರಗಳು ನಡೆಯುವುದಿಲ್ಲ. ಮೋದಿಯವರದು ಭಾರತಾಸ್ತ್ರ, ಭಾರತೀಯಾಸ್ತ್ರ, ರಾಷ್ಟ್ರಪ್ರೇಮಾಸ್ತ್ರ. ಅದು ಕಾಂಗ್ರೆಸ್ ಮೊದಲಾದ ಹಿಂದುತ್ವದ್ವೇಷಿಗಳಿಗೆ ಭಯಕಾರಕ. ಬೇರೆ ರೀತಿ ಹೇಳಿ ತೋರಿಸುತ್ತೇನೆ. ಹಿಂದಿನಂತೆ ಕತ್ತಿ, ಬಿಲ್ಲು, ಗುರಾಣಿ, ಶಲ್ಯ, ಗದೆ, ತೋಮರ, ಚಕ್ರಗಳ ಕಾಲ ಈಗಿಲ್ಲ. ಚಕ್ರವ್ಯೂಹ, ಪದ್ಮವ್ಯೂಹ, ಹಂಸ, ಕ್ರೌಂಚ, ಗಾರು, ಕ್ರಕಚಾದಿಗಳು ಈಗಿಲ್ಲ. ಈಗಿನ ವ್ಯೂಹಗಳು ಬೇರೆ. ಅಮೆರಿಕೆಯ ನ್ಯಾಟೊ, ಸೀಟೊಗಳು ಒಂದು ಬಗೆ ಈಗ ಶಾಂತಿ, ಮೊಂಡ, ಹಲ್ಲುಕಿತ್ತ ಹಾವಿನಂತೆ ಅಶಕ್ತ. ಸೋವಿಯತ್ ವ್ಯೂಹ ನಾಶವಾಯಿತು. ಈಗ ಚೀನಾದ One Belt One Road ಒಂದು ವ್ಯೂಹ. ಅದರ ಜಾಲ. ವ್ಯಾಪ್ತಿ ನೋಡಿದ್ದೀರಿ. ನೇಪಾಳ, ಶ್ರೀಲಂಕಾ, ಪಾಕ್, ಬಾಂಗ್ಲಾ ಇಂಥವನ್ನು ಹಿಡಿದು ಭಾರತವನ್ನು ಬಿಗಿಯುವುದು. ಆರ್ಥಿಕ ಮಾಯಾಜಾಲದಲ್ಲಿ ಚೀನಾ ಅಮೆರಿಕಾವನ್ನು ಡಾಲರ್ ವಿರುದ್ಧ ಸಿಕ್ಕಿಸಿದ್ದು ವ್ಯೂಹ. ಅಮೆರಿಕೆಯ ಸಿಐಎ, ಇತರರ ಹಮಾಸ್ ಮುಂತಾದವು ಹಳೆಯ ಗೆಸ್ಟಪೊ ಮುಂತಾದವೂ ಶಾಂಬರ ಮಾಯಾಜಾಲಗಳೇ. ಮತ್ತೂ ಕೇಳಿ. ಐರೋಪ್ಯರ ವಸಾಹತುಶಾಹೀ ಸಾಮ್ರಾಜ್ಯಶಾಹೀ ವ್ಯೂಹಗಳು-ಎಲ್ಲಾ ಮಾಯೆ- ಸತ್ತವು. ಸಾಕಷ್ಟು ಹಾವಳಿ ಮಾಡಿದ್ದವು. ಈಗ ಯುರೋಪ್, ಅಮೆರಿಕಾಗಳು ಚೀನಾ ವ್ಯೂಹದಲ್ಲಿ ಸಿಲುಕಿವೆ. ನಮ್ಮ ಭಾಷೆಯಲ್ಲಿ ಇದು ‘ಕರ್ಮ’. ದೇಶ, ರಾಷ್ಟ್ರ ಸಂಘಟನೆಗಳಿಗೂ ಕರ್ಮ, ಕರ್ಮಫಲ ಇರುತ್ತದೆ. ‘ಧರ್ಮ’ ಇದ್ದಲ್ಲಿ ಮಾತ್ರ ‘ಕರ್ಮ’ದ ಬೇಳೆ ಬೇಯುವುದಿಲ್ಲ. ಆ ‘ಧರ್ಮ’ವೇ ಭಾರತೀಯಾಸ್ತ್ರ. ಮೋದಿ ಹೆಸರಿನ ರಾಷ್ಟ್ರೀಯಾಸ್ತ್ರ. ಈಗ ಸೇನೆಯೇ ಇಲ್ಲದೇ ವಿಮಾನ, ಟ್ಯಾಂಕು, ನೌಕಾಸೇನೆ ಇಲ್ಲದೆಯೂ ಚೀನಾ ಜಗತ್ತಿನಲ್ಲಿ ಎಲ್ಲೂ ಪ್ರಜಾನಾಶ ಮಾಡಿದೆ. ರಾಷ್ಟ್ರಗಳನ್ನು ಉಸಿರುಗಟ್ಟಿಸಿ ಸಾಯಿಸುತ್ತಿದೆ. ಅದು ಸಮುದ್ರಮಥನದ ಕಾಲದ ‘ಹಾಲಾಹಲ’. ಆಲ್ಕೊಹಾಲು ಅದರ ಒಂದು ರೂಪ. ಸ್ತ್ರೀಯರು, ಯುವತಿಯರು ಸಾಲುಗಟ್ಟಿ ನಿಂತು ಮದ್ಯಕ್ಕೆ ಅಂಗಡಿಗಳ ಮುಂದೆ ನಿಲ್ಲುವ ದೃಶ್ಯ ನೋಡಿದಾಗ ಋಗ್ವೇದದ ವಿಶ್ವಾಮಿತ್ರ-ತ್ರಿಶಂಕು ಸೇನೆಯ ಬೆತ್ತಲೆ ಸ್ತ್ರೀಯರು ವಸಿಷ್ಠಾಶ್ರಮದ ಮೇಲೆ ಹಲ್ಲೆ ಮಾಡಿದ ಉಲ್ಲೇಖ ನೆನಪಾಯಿತು. ಅಲ್ಲಿ ಉದ್ದೇಶ ವಸಿಷ್ಠರ ಚಾರಿತ್ರ್ಯವಧೆ. ಇಂದು ಭಾರತದ ಚಾರಿತ್ರ್ಯವಧೆಗೆ ಚೀನಾ ಬಂಡವಾಳದ ಟಿವಿ ಚಾನಲ್ಗಳು, ಸೋನಿಯಾ ಬಂಡವಾಳದ ಪತ್ರಿಕೆಗಳು, Anchorಗಳು, ಅರುಂಧತೀ ರಾಯ್, ಮೇಧಾ ಪಾಟ್ಕರ್ ಇನ್ನಿತರರು. ನೆರಳಿನಂತೆ ಹಿಡಿದು ಕೊಲ್ಲುವ ರಾಹು ಕೇತು, ರಾಜಕೀಯ ಪಕ್ಷಗಳು, ಕರ್ನಾಟಕದ ಸಿದ್ಧರು, ಯಕ್ಷರು, ಗಂಧರ್ವರು, ಸಾಹಿತಿಗಳು, ಎಡಪಂಥೀಯ ಸಂಘ ಚಳವಳಿಗಾರರು, ಎಲ್ಲಾ ಕಂಕಣಬದ್ಧರು! ‘ಕೈ’ ಇಲ್ಲದೆಯೂ ಕಂಕಣ! ಯಾರಿಗುಂಟು, ಯಾರಿಗಿಲ್ಲವಯ್ಯ? ಅಬ್ದುಲ್ಲಾ ಅಯ್ಯರು, ದೊರೆಸ್ವಾಮಿ, ‘ಗೀತೆಯನ್ನು ಸುಡುವ’ ‘ಭಗವಾನುವಾ’ಜರು, ಸೀತಾ ಚಾರಿತ್ರ್ಯವಧೆಯ, ರಾಮಾಯಣ ಹೀಯಾಳಿಕೆಯ ದ್ರವಿಡರು, ಇಲ್ಲಿನ ಅವರ ಶಿಷ್ಯವರ್ಗ, ಅಕಾಡೆಮಿ, ಫಿಲ್ಮ ಇನ್ಸ್ಟಿಟ್ಯೂಟ್, ಜೆಎನ್ಯುು ಹಿಡಿದಿಟ್ಟ ಹಿಂದಣ ಪಟ್ಟಭದ್ರರು, ಅಮರ್ತ್ಯೇನರಂಥ ನೊಬೆಲ್ ವಿಜೇತರು, ಮ್ಯಾಗ್ಸೆಸೆ ಅವಾರ್ಡ್ ಗಿಟ್ಟಿಸಿದ ಟಿಎಂ ಕೃಷ್ಣ, ಅರುಣ್ ಶೌರಿಯಂತಹವರು- ಎಲ್ಲಾ ಭಾರತನಾಶಕ್ಕೆ, ‘ತುಕ್ಡೇ ತುಕ್ಡೇ’ ಗ್ಯಾಂಗಿನ ಸಿಪಾಯಿಗಳು! ಶಿಸ್ತಿಲ್ಲದೆಯೂ ಸಿಪಾಯಿಗಳಯ್ಯ, ಶಿಸ್ತು ಯಾರಿಗೆ ಬೇಕು? ಹಣವಿದ್ದರೆ ಸಾಕಲ್ಲ? ಹಿಂದೆ ಸ್ಟಾಲಿನ್ ಸಾರಿದ್ದ. ‘ದೇವರೂ ಕಾಪಾಡಲಾರ. ಈ ಸ್ಟಾಲಿನ್ ಬ್ರೆಡ್ ಬಟರ್ ಇತ್ತು ಕಾಪಾಡುತ್ತಾನೆ’ ಎಂತ. ಅದು ಭಾಗ್ಯಗಳ, ಕ್ಯಾಂಟೀನುಗಳಿಗೆ ಪ್ರೇರಣೆ ಇದ್ದೀತು! Peoples party ಎನ್ನುತ್ತಾ, Peopleಗಳನ್ನೇ ತನ್ನವರನ್ನೇ ಸಾಯಿಸುವ ಚೀನೀ ನಾಯಕರ ತಂತ್ರವ್ಯೂಹ, ಸೇನೆ ಎಂಥದಯ್ಯ? ಪೆಡಂಭೂತ, Dragon, ಎಂಬುದು ಒಂದು ಭ್ರಾಮಕ ಕಾಲ್ಪನಿಕ ಪ್ರಾಣಿ ಎಂದು ನಂಬಿ ಮೋಸಹೋದೆವು. ಅದು ಶಂಬರ! ಇದಕ್ಕೆ ಈಗ ಮತೀಯ ಮತಾಂಧ ಸಂಘಟನೆಗಳ ಸಹಕಾರ, ಬೆಂಬಲ-ದೆಹಲಿ, ಉತ್ತರ ಪ್ರದೇಶದಿಂದ ಹಿಡಿದು ಪಾದರಾಯನಪುರದವರೆಗೆ. ಬೇಂದ್ರೆ Heterodoxy ಎಂಬ ಕವನ ಬರೆದರು ‘ನಾಕುತಂತಿ’ ಕವನ ಸಂಗ್ರಹದಲ್ಲಿ. ಅಲ್ಲಿ ಜನತೆಗೆ ಬೇಕು ಏನು? ‘ಪಾದರಸ ಅಲ್ಲ. ಶ್ರೀಪಾದರಸ’ ಎನ್ನುತ್ತಾರೆ. Mercury ಎಂಬುದು ವಿಷ, ಅದು ಪಾದರಸ! ಅಮೆರಿಕಾದ ‘ಪಾದ’ ರಸವೋ ಚೀನಾದ ‘ಪಾದ’ ರಸವೋ ಎಲ್ಲವೂ ಸಾಯಿಸುತ್ತವೆ. ‘ಶ್ರೀಪಾದ’ ಎಂಬ ಭಗವಂತನ ಮೂರನೆಯ ಪಾದ, ತ್ರಿವಿಕ್ರಮನ ತೃತೀಯ ಪಾದದ ರಸ, ಅಮೃತ, ಗಂಗೆ. ಅದು ಕಾಪಾಡುತ್ತದೆ. ಅದನ್ನು ಅಂದು ಭೂಮಿಗಿಳಿಸಿದವನು ಭಗೀರಥ. ಉಪಕರಣ ಶಿವನ ಮುಡಿ, ಜಟೆ. ಇಂದು ಮೋದಿ ಭಗೀರಥನೂ, ಮಹಾರುದ್ರನೂ ಆಗಿ, ಶ್ರೀಪಾದರಸವನ್ನು ಲಸಿಕೆಯನ್ನು ಇನ್ನು ಇಳಿಸುತ್ತಿದ್ದಾರೆ. ಬೇಂದ್ರೆ ಬರೆದರು ವಿಡಂಬನೆ: ‘ಯಾರಿಗೆ ಬೇಕು ನಿನ ಕವಿತಾ? ಒಂದು ಬ್ರೆಡ್ ತಾ, ಬಟರ್ ತಾ’ ಎಂದು ಸ್ಟಾಲಿನ್ನನನ್ನು ತಿವಿದರು. ಈಗ ಕರ್ನಾಟಕದ ಕವಿಗಳನೇಕರಿಗೆ ಬ್ರೆಡ್, ಬಟರ್ ತಿನ್ನಿಸುತ್ತಿರುವ, ಹಣವಿತ್ತು, paid servants ಮಾಡಿಕೊಂಡ ಚೀನಾವ್ಯೂಹ, ಖಂಡಿತವಾಗಿ ‘ಶಾಂಬರ’ ಸೇನೆಯೇ! ಇದಕ್ಕೆ ‘ಛಪ್ಪನ್ನೈವತ್ತಾರು’ ಮಾಂಡಲೀಕ ಪುಂಡರು, ಎಲ್ಲಾ ಬಲಿಯಾಗುತ್ತಿರುವ ದುಷ್ಕಾಲ. ಈ ವ್ಯೂಹ ಭಾರತದಲ್ಲೇ ಹೆಣೆದ ಚೀಣಿಯರು ಸಾಮಾನ್ಯರಲ್ಲ. By the People, for the People, of the People ಎಂಬುದಕ್ಕೆ ನನ್ನ ವ್ಯಾಖ್ಯೆ ಸ್ಪೆಲ್ಲಿಂಗ್ ಬದಲಿಸಿದಾಗ ಹೀಗೆ-
Off the people
Bye the people or Buy the People, ÊÜáñÜá¤
Far the people ಅಂತ.
ಈಗ ಮೋದಿ ಬಿಟ್ಟಿರುವ ಕೃಷ್ಣಾಸ್ತ್ರ, ರಾಮಾಸ್ತ್ರಗಳು ಟಿ.ವಿ. ಪ್ರಸರಣದ ಛೋಪ್ರಾ ಮಹಾಭಾರತ, ಹಾಗೂ ರಾಮಾನಂದ ಸಾಗರರ ರಾಮಾಯಣಗಳೆಂಬ ಸಿದ್ಧಾಸ್ತ್ರಗಳು ಭಾರತ ಏಕೀಕರಣ, ಸಾಂಸ್ಕೃತಿಕ ಭದ್ರತೆ, ರಾಷ್ಟ್ರಹಿತಕ್ಕಾಗಿ ಸ್ವಾರ್ಥ ತ್ಯಾಗ, ಇನ್ನಿತರ ಮೌಲ್ಯಗಳ ಮೊನಚಿನ ಮುದ್ರಾಸ್ತ್ರ. ಇದರೆದುರು ಇತರರ ಅಸ್ತ್ರಗಳು ಮೆಜೆಸ್ಟಿಕ್ ದೊಂಬಿ, ಕುಡುಕರ ಛೂ ಭಾಣ, ಅಸಭ್ಯ ಭಾಷಣಗಳು, ಭಾಗ್ಯಗಳೆಂಬ ದೌರ್ಭಾಗ್ಯಗಳು ಎಲ್ಲಾ ಕರ್ಣನ ಸರ್ಪಾಸ್ತ್ರದಂತೆ ‘ಠುಸ್’. ಅರ್ಜುನ ಸಾರಥಿ, ಅರ್ಜುನ ಧ್ವಜದ ಮಾರುತಿ, ಗೀತಾಚಾರ್ಯರು ನಮಗಾಗಿ ಇಟ್ಟ ಈ ಮಹಾಸ್ತ್ರಗಳ ಮುಂದೆ ಕರೊನಾ ಸಾಯುತ್ತದೆ. ಚೀನಾ ಮಣಿಯುತ್ತದೆ. ಭಯ ಬೇಡ.
(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)