ಹೈದರಾಬಾದ್: ಸುಮಾರು 30 ಕುರಿಮರಿಗಳನ್ನು 20 ಮಂಗಗಳು ಸೇರಿ ಕೊಂದ ಘಟನೆ ತೆಲಂಗಾಣದ ಸೂರ್ಯಪೇಟ್ನಲ್ಲಿ ನಡೆದಿದೆ.
ಇವೆಲ್ಲವೂ ಚಿಂತಲಪಾಲೆಂ ಮಂಡಲದಲ್ಲಿರುವ ಶೋಬಾನಾದ್ರಿಗುಡಂ ಎಂಬ ಹಳ್ಳಿಯ ನಿವಾಸಿಯಾದ ತೊಕಲಾ ಸೈದುಲು ಎಂಬುವರಿಗೆ ಸೇರಿದ್ದಾಗಿದ್ದವು. ಈತ ತನ್ನ ಕುರಿಗಳನ್ನು ಮೇಯಲು ಹಳ್ಳಿಯ ಹೊರವಲಯದಲ್ಲಿರುವ ಹೊಲದಲ್ಲಿ ಬಿಡುತ್ತಿದ್ದ. ಆದರೆ ಮರಿಗಳನ್ನು ಕಳಿಸುತ್ತಿರಲಿಲ್ಲ. ಮನೆಯಲ್ಲಿ ನಿರ್ಮಿಸಿದ ಶೆಡ್ನಲ್ಲೇ ಇರುತ್ತಿದ್ದವು.
ಹೀಗೆ ಒಂದು ದಿನ ಸೈದುಲು ಕುರಿಗಳನ್ನು ಮೇಯಿಸಲು ಹೊಲಕ್ಕೆ ಹೋಗಿದ್ದಾಗ, ಇತ್ತ ಸುಮಾರು 20 ಮಂಗಗಳು ಅವನ ಮನೆಯ ಶೆಡ್ಗೆ ಲಗ್ಗೆಯಿಟ್ಟು, ಕುರಿಮರಿಗಳ ಮೇಲೆ ದಾಳಿ ಮಾಡಿ, ಕೊಂದು ಹಾಕಿವೆ. ಒಟ್ಟು 30 ಕುರಿಮರಿಗಳು ಕೋತಿಗಳಿಂದಾಗಿ ಪ್ರಾಣಕಳೆದುಕೊಂಡಿವೆ. ಇದನ್ನೂ ಓದಿ: video/ ಸಂಗಾತಿ ಜತೆ ರಮಿಸೋದನ್ನು ಬಿಟ್ಟು ಕೋಳಿ ಜತೆ ಕಾಳಗಕ್ಕಿಳಿದ ಮಯೂರ!
ಅಕ್ಕಪಕ್ಕದ ಮನೆಯವರು ಕೋತಿಗಳನ್ನು ನೋಡಿದ್ದಾರೆ. ಅವುಗಳನ್ನು ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕುರಿಮರಿಗಳ ರಕ್ಷಣೆಗಾಗಿ ಶೆಡ್ಗೆ ಹೋದರೂ ಕೂಡ ಮಂಗಗಳ ಕ್ರೌರ್ಯ ಮಿತಿಮೀರಿತ್ತು. ಹತ್ತಿರ ಹೋಗಲು ಅವು ಅಸ್ಪದ ಕೊಡಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಇತ್ತೀಚೆಗೆ ಒಂದು ದಿನ ಖಮ್ಮಮ್ ಜಿಲ್ಲೆಯ ಅಮ್ಮಾಪಾಲೆಮ್ ಗ್ರಾಮದಲ್ಲಿ ಆಹಾರ ಹುಡುಕಿ ಬಂದ ಮಂಗಗಳನ್ನು ನೇಣು ಹಾಕಿ ಕೊಂದಿದ್ದರು. (ಏಜೆನ್ಸೀಸ್)