ಮುಂಬೈ: ತೃಪ್ತಿ ದಿಮ್ರಿ ಪೋಸ್ಟರ್ ಬಾಯ್ಸ್ ಸಿನಿಮಾದ ಮೂಲಕ 2017ರಲ್ಲಿ ನಟನೆಗೆ ಪದಾರ್ಪಣೆ ಮಾಡಿದರು. ಅನಿಮಲ್ ಸಿನಿಮಾದಲ್ಲಿನ ಅತಿಥಿ ಪಾತ್ರದಿಂದಾಗಿ ರಾತ್ರೋರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು. ಜೋಯಾ ಪಾತ್ರದ ಮೂಲಕ ಜನಪ್ರಿಯರಾದರು ಅವರ ಬೋಲ್ಡ್ ಪಾತ್ರಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.
ಇತ್ತೀಚಿನ ಸಂದರ್ಶನವೊಂದರಲ್ಲಿ ತೃಪ್ತಿ ದಿಮ್ರಿ ಅವರು ಸಿನಿಮಾರಂಗದಲ್ಲಿನ ತಮ್ಮ ಹೋರಾಟ, ಖ್ಯಾತಿ ಮತ್ತು ಟ್ರೋಲಿಂಗ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅನಿಮಲ್ ಯಶಸ್ತಿನ ನಂತರ ನಾನು ತುಂಬಾ ಸಂತೋಷಪಟ್ಟೆ. ನನ್ನನ್ನು ಗುರುತಿಸಲು ಪ್ರಾರಂಭಿಸಿದರು, ಇಂಟರ್ವ್ಯ್ಯೂಗಳು ಆಗುತಿತ್ತು, ಕೆಲಸ ಸಿಗುತಿತ್ತು ಇದೆಲ್ಲಾವು ನನ್ನ ಸಂತೋಷಕ್ಕೆ ಕಾರಣವಾಯಿತು. ಆದರೆ ಸಿನಿಮಾದಲ್ಲಿನ ಬೋಲ್ಡ್ ದೃಶ್ಯಗಳಿಗೆ ಜನರ ಮಾಡಿದ ನೆಗೆಟಿವ್ ಕಾಮೆಂಟ್ಗಳತ್ತ ನನ್ನ ಗಮನ ಹೋದಾಗ ಆಗಿದ ಅನುಭವವೇ ಬೇರೆ ಎಂದು ಹೇಳಿದ್ದಾರೆ.
ಪೋಸ್ಟರ್ ಬಾಯ್ಸ್, 'ಲೈಲಾ ಮಜ್ನು', 'ಬಲ್ಬುಲ್' ಮತ್ತು 'ಕಾಲಾ' ಸಿನಿಮಾಗಳಲ್ಲಿ ನಟಿಸಿದ ಬಳಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಭಾವಿಸುತ್ತಿದೆ. ಆ ಸಮಯದಲ್ಲಿ ಕಾಮೆಂಟ್‌ಗಳನ್ನು ಓದುತ್ತಿದ್ದೆ, ಜನರು ಒಳ್ಳೆಯದನ್ನು ಮಾತ್ರ ಬರೆಯುತ್ತಾರೆ ಎಂದು ತಿಳಿದಿದ್ದೆ. ಆದರೆ ಅನಿಮಲ್ ಸಿನಿಮಾ ಬಿಡುಗಡೆಯಾದ ಬಳಿಕ ನನ್ನ ಪಾತ್ರವನ್ನು ನೋಡಿ ಜನರು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದರು.
ನನಗೆ ಈ ಅಭ್ಯಾಸವೇ ಇರಲಿಲ್ಲ, ಇದು ಇದ್ದಕ್ಕಿದ್ದಂತೆ ಸಂಭವಿಸಿತು. ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ ಹಾಗೂ ಈ ಟೀಕೆಗಳನ್ನು ಹೇಗೆ ಎದುರಿಸುವುದು ಎಂಬುದು ನನಗೆ ತಿಳಿದಿರಲಿಲ್ಲ. ನೆಗೆಟಿವ್ ಕಾಮೆಂಟ್‌ಗಳನ್ನು ನೋಡಿ ನಾನು ಅಳುತ್ತಿದ್ದೆ. ನನಗೆ ನೆನಪಿದೆ 2ರಿಂದ3 ದಿನಗಳು ರೂಮ್ನಲ್ಲಿಯೇ ಕುಳಿತು ಅಳುತ್ತಿದ್ದೆ. ಈ ಟೀಕೆಗಳನ್ನು ಸಹಿಸಿಕೊಳ್ಳಬೇಕು ಎಂದು ಎಂದಿಗೂ ಯೋಚಿಸಲಿಲ್ಲ ಎಂದಿದ್ದಾರೆ.
ನಾನು ಯಾವಾಗಲೂ ಎಲ್ಲಾ ಕಾಮೆಂಟ್‌ಗಳನ್ನು ಓದುತ್ತೇನೆ. ಆ ಒಂದು ತಿಂಗಳು ನನಗೆ ನೆನಪಿದೆ, ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ, ನನಗೆ ಏಕೆ ತುಂಬಾ ನಕಾರಾತ್ಮಕತೆ ಕಾಮೆಂಟ್ ಬರುತ್ತಿದೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಬಹಳಷ್ಟು ಸಂಗತಿಗಳು ನಡೆಯುತ್ತಿದ್ದವು. ಅರ್ಧದಷ್ಟು ಜನರು ನನ್ನನ್ನು ಹೊಗಳುತ್ತಿದ್ದರು ಮತ್ತು ಅರ್ಧದಷ್ಟು ಜನರು ನನ್ನನ್ನು ಟೀಕಿಸುತ್ತಿದ್ದರು. ನಾನು ಕೆಲಸ ಪಡೆಯುವುದರ ಜತೆಗೆ ಜನರಿಂದ ಕೆಟ್ಟ ಮಾತುಗಳನ್ನು ಕೇಳಬೇಕಾಗಿತ್ತು ಎಂದು ಹೇಳಿದರು.
ನಾನು ಈ ಆಘಾತದಿಂದ ಹೊರಬರಲು ಧ್ಯಾನವನ್ನು ಮಾಡುತ್ತಿದೆ. ನಂತರ ಕ್ರಮೇಣ ನಾನು ಸುಧಾರಿಸಲು ಪ್ರಾರಂಭಿಸಿದೆ ಎಂದು ತಿಳಿಸಿದರು. ತೃಪ್ತಿ ದಿಮ್ರಿ ಅವರು ರಾಜ್‌ಕುಮಾರ್ ರಾವ್ ಜತೆಗೆ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವು ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್)