ನ್ಯೂಸ್

ತ್ರಿಶಾ ನಟನೆಯ ಬಹುನಿರೀಕ್ಷಿತ 'ದಿ ರೋಡ್'​ ಟ್ರೇಲರ್ ರಿಲೀಸ್​​ಗೆ ಫಿಕ್ಸ್​ ಆಯ್ತು ದಿನಾಂಕ

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ತೆಲುಗು ಮತ್ತು ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅಭಿನಯದ 'ದಿ ರೋಡ್' ಸಿನಿಮಾದ ಟ್ರೇಲರ್ ರಿಲೀಸ್​ ದಿನಾಂಕ ಶೀಘ್ರವೇ ಬಿಡುಗಡೆಯಾಗಲು ಸಜ್ಜಾಗಿದ್ದು, ಇದೀಗ ಚಿತ್ರತಂಡ ಅಧಿಕೃತವಾಗಿ ಟ್ರೇಲರ್​ ಡೇಟ್ ಘೋಷಿಸಿದೆ.

ದಳಪತಿ ವಿಜಯ್​ ನಟನೆಯ ಬಹುನಿರೀಕ್ಷಿತ 'ಲಿಯೋ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ತ್ರಿಶಾ, ಈ ಸಿನಿಮಾದ ಬಿಡುಗಡೆಗೂ ಮುನ್ನವೇ ತಾವು ಅಭಿನಯಿಸಿದ್ದ 'ದಿ ರೋಡ್'​ ಮೂಲಕ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸದ್ಯ ಮುಂಚೂಣಿಯಲ್ಲಿದ್ದಾರೆ. ​ಚಿತ್ರತಂಡ ಈ ಹಿಂದೆಯೇ ತಿಳಿಸಿದಂತೆ ಸಿನಿಮಾ ಇದೇ ಅಕ್ಟೋಬರ್ 6, ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಅರುಣ್ ವಸೀಗರನ್ ಬರೆದು ನಿರ್ದೇಶಿಸಿರುವ 'ದಿ ರೋಡ್‌'ನ ಥಿಯೇಟ್ರಿಕಲ್ ಟ್ರೈಲರ್ ಸೆಪ್ಟೆಂಬರ್ 21, 2023 ರಂದು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಲಿದೆ. ಚಿತ್ರವು ಪ್ರಸ್ತುತ ತಮಿಳಿನಲ್ಲಿ ಮಾತ್ರ ತೆರೆ ಕಾಣಲಿದ್ದು, ಒಟಿಟಿಗೆ ಬಂದ ನಂತರ ಇತರ ಭಾಷೆಗಳಲ್ಲಿ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಸದ್ಯ ಈ ಸಂಗತಿಯಿಂದ ಸಂತಸಪಟ್ಟ ತ್ರಿಶಾ ಅಭಿಮಾನಿಗಳು, ವಿಜಯ್​ ಜತೆ ಅಭಿನಯಿಸಿರುವ ಪ್ಯಾನ್​ ಇಂಡಿಯಾ 'ಲಿಯೋ' ಚಿತ್ರದ ಬಿಡುಗಡೆಗೆ ಬಹಳ ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).