Google Search: ಪ್ರಸ್ತುತ ವರ್ಷದ ಕೊನೆಯ ತಿಂಗಳು ಡಿಸೆಂಬರ್ನಲ್ಲಿ ನಾವೆಲ್ಲಾ ಇದ್ದೀವಿ. ಇದೊಂದು ತಿಂಗಳು, ವರ್ಷದ ಪೂರ ಏನೇನಾಯಿತೋ ಅದನ್ನೆಲ್ಲ ನೆನಪಿಸಿಕೊಳ್ಳುವ ಒಂದು ಸಮಯ. ಜಗತ್ತು, ದೇಶದಲ್ಲಿ ಉಂಟಾದ ಘಟನೆಗಳು ಹಾಗೂ ನಮ್ಮ ಜೀವನದಲ್ಲಿ ಆದ ಸಿಹಿ-ಕಹಿ ವಿಷಯಗಳನ್ನು ಒಮ್ಮೆ ಮೆಲುಕು ಹಾಕಿಕೊಳ್ಳಲು ಡಿಸೆಂಬರ್ ಸೂಕ್ತವಾಗಿದೆ. ಪ್ರತಿವರ್ಷ ಹೊರಬೀಳುವ ಮಾಹಿತಿ ಪ್ರಕಾರ, ಭಾರತದಲ್ಲಿ ಈ ವರ್ಷ ಯಾವ ವಿಷಯಗಳು ಗೂಗಲ್ನಲ್ಲಿ ಹೆಚ್ಚು ಹುಡುಕಲಾಗಿದೆ ಎಂಬುದರ ವರದಿ ಇದೀಗ ಪ್ರಕಟವಾಗಿದೆ.
ಜಾಗತಿಕವಾಗಿ ಈ ವರ್ಷ ಸಾಕಷ್ಟು ವಿಷಯಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿವೆ ಮತ್ತು ಟ್ರೆಂಡಿಂಗ್ ಸಾಲಿನಲ್ಲಿ ಸದ್ದು ಮಾಡಿವೆ. ರಾಜಕೀಯ ಬದಲಾವಣೆಗಳು, ಕ್ರೀಡೆ ಬೆಳವಣಿಗೆಗಳು, ಸಿನಿಮಾ, ಯುದ್ಧ ಹೀಗೆ ಹಲವು ಬಹುಮುಖ್ಯ ಸುದ್ದಿಗಳು ಸಿಕ್ಕಾಪಟ್ಟೆ ಚರ್ಚೆಯಾಗಿದ್ದವು. ಜನರು ಅತೀ ಹೆಚ್ಚಾಗಿ ಯಾವುದರ ಮೇಲೆ ಹೆಚ್ಚು ಆಸಕ್ತಿ ತೋರಿದ್ದಾರೆ. ಯಾವುದನ್ನು ಗೂಗಲ್ನಲ್ಲಿ ವ್ಯಾಪಕವಾಗಿ ಸರ್ಚ್ ಮಾಡಿದ್ದಾರೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
1.ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)
2. ಟಿ20 ವಿಶ್ವಕಪ್
3. ಭಾರತೀಯ ಜನತಾ ಪಕ್ಷ/ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
4. ಚುನಾವಣಾ ಫಲಿತಾಂಶಗಳು 2024
5. ಒಲಿಂಪಿಕ್ಸ್
6. ಅಧಿಕ ಉಷ್ಣಾಂಶ
7. ರತನ್ ಟಾಟಾ
8. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
9. ಪ್ರೊ ಕಬಡ್ಡಿ ಲೀಗ್
10. ಇಂಡಿಯನ್ ಸೂಪರ್ ಲೀಗ್,(ಏಜೆನ್ಸೀಸ್).