Pushpa : ಅಲ್ಲು ಅರ್ಜುನ್ ಅವರ ಪುಷ್ಪ 2 ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಈ ಚಿತ್ರದ ಕೊನೆಯಲ್ಲಿ 'ಪುಷ್ಪ 3' ಚಿತ್ರದ ಸುಳಿವನ್ನು ನಾವು ನೋಡಿರುತ್ತೇವೆ. ಇದರೊಂದಿಗೆ ಈ ಕ್ರೇಜಿ ಸೀಕ್ವೆಲ್ ಬಗ್ಗೆ ಈಗಾಗಲೇ ಅನೇಕ ವದಂತಿಗಳು ಹರಡುತ್ತಿವೆ. 2019 ರಲ್ಲಿ ಬಿಡುಗಡೆಯಾದ ಪುಷ್ಪ 1 ಚಿತ್ರ, ಅಲ್ಲು ಅರ್ಜುನ್ ಅವರನ್ನು ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಮಾಡಿತು. ಆದದ ನಂತರ ಪುಷ್ಪ 2 ಕೂಡ ಬಹುದೊಡ್ಡ ಹಿಟ್ ಕಂಡಿತು. ಈ ಸಿನಿಮಾ ಸ್ತ್ರೀ 2 ಮತ್ತು ಪ್ರಭಾಸ್ ಅವರ ಬಾಹುಬಲಿ 2 ಚಿತ್ರವನ್ನು ಮೀರಿಸಿ, ವಿಶ್ವದಾದ್ಯಂತ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ಕೀರ್ತಿಗೆ ಪಾತ್ರವಾಯ್ತು.
ಇದನ್ನೂ ಓದಿ: ಬೇಸಿಗೆ ಬಿಸಿಲಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುವುದೇಗೆ? ಯಾವ ಮಾರ್ಗ ಅನುಸರಿಸಿದರೆ ಉತ್ತಮ; Eye Secure
ಆದರೆ ಇದೀಗ ಅಲ್ಲು ಅರ್ಜುನ್ ಅವರ ಅಭಿಮಾನಿಗಳ ಕಣ್ಣು ಪುಷ್ಪ-3 ಮೇಲೆ ಇದೆ. ಪುಷ್ಪ 2 ರ ಕೊನೆಯಲ್ಲಿ ಪ್ರಮುಖ ಖಳನಾಯಕನನ್ನು ಪರಿಚಯಿಸಲಾಗಿದೆ. ಆದರೆ ನಟನ ಮುಖವನ್ನು ಬಹಿರಂಗಪಡಿಸಿಲ್ಲ, ಆದರೆ ಅ ನಟ ವಿಜಯ್ ದೇವರಕೊಂಡ ಅಥವಾ ನಾನಿಯೇ ಆ ಖಳನಾಯಕ ಆಗಿರಬಹುದು ಎಂಬ ವದಂತಿಗಳು ಹಬ್ಬಿವೆ.
ಪುಷ್ಪ 3 ಚಿತ್ರದಲ್ಲಿ ನಟ ನಾನಿ ಮತ್ತು ವಿಜಯ್ ದೇವರಕೊಂಡ ಅವರುಗಳು ವಿಲನ್ ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ ‘ಪುಷ್ಪ 3’ ಸಿನಿಮಾದಲ್ಲಿ ನಟಿಸುವ ಬಗ್ಗೆ ಈ ಹಿಂದೆಯೇ ಸುದ್ದಿ ಹರಿದಾಡಿತ್ತು. ಆದರೆ ಈಗ ವಿಜಯ್ ದೇವರಕೊಂಡ ಮಾತ್ರ ಅಲ್ಲದೆ ನಟ ನಾನಿ ಸಹ ‘ಪುಷ್ಪ 3 ಸಿನಿಮಾನಲ್ಲಿ ನಟಿಸಲಿದ್ದಾರಂತೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಬಗ್ಗೆ ಮಾತನಾಡಿದ ನಿರ್ದೇಶಕ ಸುಕುಮಾರ್, 2025 ರಲ್ಲಿ ಭೇಟಿಯಾಗುತ್ತಿರುವ ಸುಕುಮಾರ್ಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಬಹುಶಃ 2026 ರಲ್ಲಿ ಸುಕುಮಾರ್ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಬಹುದು ಎಂದು ಹೇಳಿದ್ದಾರೆ.
ಪುಷ್ಪ 2 ಚಿತ್ರದ ಕೊನೆಯಲ್ಲಿ ಒಬ್ಬ ಖಡಕ್ ವಿಲನ್ ಎಂಟ್ರಿಯನ್ನು ತೋರಿಸಲಾಗಿದೆ. ಹೀರೊ ಪುಷ್ಪನನ್ನ ಕೊಲ್ಲಲು ಹೂಗುಚ್ಛದಲ್ಲಿ ವಿಲನ್ ಬಾಂಬ್ ಇಟ್ಟು ಕಳಿಸಿರುತ್ತಾನೆ. ಡೆಟೊನೇಟರ್ ಒತ್ತಿ, ಪುಷ್ಪನ ಮನೆಯಲ್ಲಿ ಬಾಂಬ್ ಸಿಡಿಯುವ ದೃಶ್ಯವನ್ನು ತೋರಿಸಲಾಗುತ್ತದೆ. ಆದರೆ ಆ ಬಾಂಬ್ ಇಟ್ಟವರು ಯಾರು, ಬಾಂಬ್ನ ಬಟನ್ ಒತ್ತಿದವರು ಯಾರು ಎಂಬುದನ್ನು ಮಾತ್ರ ಪುಷ್ಪ2 ನಲ್ಲಿ ತೋರಿಸಿಲ್ಲ. ಅದೆಲ್ಲದರ ಸತ್ಯಾಂಶ ‘ಪುಷ್ಪ 3’ನಲ್ಲಿ ಗೊತ್ತಾಗಲಿದೆ.