jagan 
ನ್ಯೂಸ್

Tirupati Laddu Row: ಗೋ ಬ್ಯಾಕ್ ಕ್ರಿಶ್ಚಿಯನ್ ಜಗನ್..ತಿರುಪತಿಯಲ್ಲಿ ಅರ್ಚಕರ ಪ್ರತಿಭಟನೆ

ತಿರುಪತಿ: ತಿರುಮಲ ಲಡ್ಡು ವಿವಾದ(Tirupati Laddu Row)ದ ಆರೋಪ ಮತ್ತು ಟೀಕೆಗಳ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಇದೇ ಸೆ.28 ರಂದು ತಿರುಪತಿಗೆ ಭೇಟಿ ನೀಡಲಿದ್ದಾರೆ ಎಂದು ವೈಎಸ್‌ಪಿ ಮೂಲಗಳು ಹೇಳುತ್ತಿದ್ದು, ತಿರುಮಲದಲ್ಲಿ ಗುರುವಾರ ಶ್ರೀನಿವಾಸ ಆನಂದ ಸ್ವಾಮೀಜಿ ಮತ್ತಿತರ ಅರ್ಚಕರು ಅಲಿಪಿರಿಯಲ್ಲಿ ಗೋ ಬ್ಯಾಕ್ ಜಗನ್ ಎಂದು ಪ್ರತಿಭಟನೆ ನಡೆಸಿದರು.

ಗೋ ಬ್ಯಾಕ್ ಕ್ರಿಶ್ಚಿಯನ್ ಜಗನ್ ಎಂದು ಅರ್ಚಕರು ಇಸ್ಪೀಟೆಲೆಗಳನ್ನು ಗಾಳಿಗೆ ತೂರಿ ಘೋಷಣೆಗಳನ್ನು ಕೂಗಿದರು.

ಐದು ವರ್ಷ ಮುಖ್ಯಮಂತ್ರಿಯಾಗಿ ಪತ್ನಿಯೊಂದಿಗೆ ಬಾರದೆ ರೇಷ್ಮೆ ವಸ್ತ್ರ ನೀಡದ ಜಗನ್ ಈಗ ತಿರುಮಲಕ್ಕೆ ಏಕೆ ಬರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಜಗನ್ ಯಾವ ಮುಖ ಇಟ್ಟುಕೊಂಡು ತಿರುಮಲಕ್ಕೆ ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಗನ್ ತಿರುಮಲ ಭೇಟಿಯನ್ನು ತಡೆಯುತ್ತೇವೆ ಒಂದು ವೇಳೆ ಜಗನ್ ಭೇಟಿ ವೇಳೆ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾದರೆ ಜಗನ್ ಹೊಣೆ ಹೊರಬೇಕಾಗುತ್ತದೆ ಎಂದು ಸ್ವಾಮುಲು ಎಚ್ಚರಿಸಿದ್ದಾರೆ.

ತಿರುಮಲಕ್ಕೆ ಬರುವುದು ಡೌಟ್​: Tirupati Laddu Row

ಮತ್ತೊಂದೆಡೆ ಜಗನ್ ತಿರುಮಲಕ್ಕೆ ಆಗಮಿಸುವ ದಿನ ಅಂದರೆ ಇದೇ 28ರಂದು ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ವೈಸಿಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಜಗನ್ ಕರೆ ನೀಡಿದ್ದಾರೆ. ಇದನ್ನು X ನಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಜಗನ್ ತಿರುಮಲಕ್ಕೆ ಭೇಟಿ ನೀಡುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.