ಶ್ರೀನಗರ: ದೇಶಕ್ಕೇ ಅನ್ವಯವಾಗುವ ಕಾನೂನನ್ನು ಜಮ್ಮು-ಕಾಶ್ಮೀರದಲ್ಲೂ ಅನ್ವಯ ಮಾಡುವ ಮೂಲಕ ಅಪಾಯವನ್ನು ಆಹ್ವಾನಿಸಲಾಗುತ್ತಿದೆ. ಈ ಕರಾಳ ಕಾನೂನು ವಿರೋಧಿಸಲು ಜನರು ಕೈ ಜೋಡಿಸಬೇಕು ಎಂದು ಪಿಡಿಪಿ ನಾಯಕ ಸುರಿಂದರ್ ಚೌಧರಿ ಕರೆ ಕೊಟ್ಟಿದ್ದಾರೆ. ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಹೊರಗಿನವರ ಪ್ರವೇಶದಿಂದ ರೇಪ್ ಮತ್ತು ಇತರೆ ಕ್ರೈಂಗಳು ಹೆಚ್ಚಾಗಲಿವೆ ಎಂದು ಎಚ್ಚರಿಸಿದ್ದಾರೆ.
ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ಜನರಲ್ ಸೆಕ್ರಟರಿ ಮತ್ತು ಮಾಜಿ ಶಾಸಕರೂ ಆಗಿರುವ ಚೌಧರಿ, ಕಾಶ್ಮೀರದಲ್ಲಿ ಯಾರೂ ಜಮೀನು ಖರೀದಿಸಲ್ಲ. ಆದರೆ ಜಮ್ಮುವಿನ ಪರಿಸ್ಥಿತಿ ಹಾಗಲ್ಲ. ಇಲ್ಲಿ ಜನರ ಕುತ್ತಿಗೆ ಮೇಲೆಯೇ ಕತ್ತಿ ಇದೆ. ಮದುವೆಗೆ ಒಪ್ಪಿಲ್ಲ ಎಂದು ಹಾಡುಹಗಲೇ ಬಳ್ಳಾಲ್ ಬಾಗ್ನ ನಡುರಸ್ತೆಯಲ್ಲಿ ಯುವತಿಯೊಬ್ಬಳನ್ನು ಕೊಂದ ಸುದ್ದಿ ನಿನ್ನೆಯಷ್ಟೇ ವರದಿಯಾಗಿದೆ. ಅಂತಹ ಕೃತ್ಯಗಳು ಇನ್ನು ಜಮ್ಮು-ಕಾಶ್ಮೀರದಲ್ಲೂ ಸಾಮಾನ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ‘ಅಭಿನಂದನ್ ರಿಲೀಸ್ ಮಾಡದಿದ್ರೆ ಭಾರತ ದಾಳಿ ಮಾಡುತ್ತೆ ಅಂತ ನಡುಗ್ತಾ ಬೇಡಿಕೊಂಡಿದ್ರು ಬೆಜ್ವಾ, ಖುರೇಶಿ’ !
ಜಮ್ಮು-ಕಾಶ್ಮೀರದಲ್ಲಿ ಆಡಳಿತಾತ್ಮಕ ಬದಲಾವಣೆಯನ್ನು ವಿರೋಧಿಸುತ್ತಿರುವ ಪಿಡಿಪಿ ಮತ್ತು ಇತರೆ ಪಕ್ಷಗಳು ಗುಪ್ತಾರ್ ಮೈತ್ರಿಕೂಟ ರಚಿಸಿಕೊಂಡು ಪ್ರತಿಭಟನೆ ನಡೆಸಲಾರಂಭಿಸಿವೆ. ಪಿಡಿಪಿ, ಎನ್ಸಿಪಿಗಳು ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು ಸ್ವಾರ್ಥ ರಾಜಕೀಯ ಹಿತ ಕಾಪಾಡುವ ದೃಷ್ಟಿಯಿಂದ ಈ ರಾಜಕೀಯ ಪಕ್ಷಗಳ ನಾಯಕರು ಕೆಲಸ ಮಾಡತೊಡಗಿದ್ದಾರೆ. (ಏಜೆನ್ಸೀಸ್)