More

    ‘ಅಭಿನಂದನ್​ ರಿಲೀಸ್ ಮಾಡದಿದ್ರೆ ಭಾರತ ದಾಳಿ ಮಾಡುತ್ತೆ ಅಂತ ನಡುಗ್ತಾ ಬೇಡಿಕೊಂಡಿದ್ರು ಬೆಜ್ವಾ, ಖುರೇಶಿ’ !

    ನವದೆಹಲಿ: ಪಿಎಂಎಲ್​-ಎನ್​ ನಾಯಕ ಅಯಾಝ್ ಸಾದಿಕ್​ ಪಾಕಿಸ್ತಾನದ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ, ಅಭಿನಂದನ್ ಅವರನ್ನು ಬಿಡುಗಡೆ ಮಾಡಿದ ಸಂದರ್ಭವನ್ನು ನೆನಪಿಸಿದ್ರು. ಅಲ್ಲದೆ, ಇಂತಹ ನಾಟಕೀಯತೆಗಳನ್ನೆಲ್ಲ ಪ್ರದರ್ಶಿಸದೇ ಕಾನೂನುಬದ್ಧ ಆಡಳಿತ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ವರದಿಯಾಗಿದೆ.

    ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ನಿನ್ನೆ ಸಾದಿಕ್ ವಾಗ್ದಾಳಿ ನಡೆಸಿದ್ದು, ಭಾರತದ ಎದುರು ಇಮ್ರಾನ್ ಖಾನ್ ಸರ್ಕಾರ ಹೇಗೆ ಮಂಡಿಯೂರಿಬಿಡುತ್ತದೆ ಎಂಬುದನ್ನು ಉದಾಹರಿಸುತ್ತ ಕುಲಭೂಷಣ್ ಜಾಧವ್ ಶಿಕ್ಷೆಯ ವಿರುದ್ಧ ಇಸ್ಲಾಮಾಬಾದ್ ಹೈಕೋರ್ಟ್​ನಲ್ಲಿ ಅಪೀಲು ಸಲ್ಲಿಸುವುದಕ್ಕೆ ರಾತ್ರೋರಾತ್ರಿ ಆರ್ಡಿನೆನ್ಸ್ ಹೊರಡಿಸಿತು ಈ ಸರ್ಕಾರ. ನಂತರ ಎರಡು ತಿಂಗಳು ಈ ವಿಷಯ ಮುಚ್ಚಿಟ್ಟಿತ್ತು ಎಂದು ಆರೋಪಿಸಿದರು. ನಾವೆಂದೂ ಕುಲಭೂಷಣ್​​ನನ್ನು ಇಷ್ಟೊಂದು ಗೌರವಯುತವಾಗಿ ಹೈಕೋರ್ಟ್​ಗೆಲ್ಲ ಹಾಜರುಪಡಿಸಿರಲಿಲ್ಲ.

    ಇದನ್ನೂ ಓದಿ: ಇಂದು ಕೆಕೆಆರ್-ಸಿಎಸ್‌ಕೆ ಮುಖಾಮುಖಿ, ಗೆದ್ದರಷ್ಟೇ ಮಾರ್ಗನ್ ಪಡೆಗೆ ಉಳಿಗಾಲ

    ಇದೇ ರೀತಿ, ನಂತರದಲ್ಲಿ ಅಭಿನಂದನ್ ಎಪಿಸೋಡ್ ನಡೆಯಿತು. ಅಂದು ಅವರನ್ನು ಬಿಡುಗಡೆ ಮಾಡದೇ ಇರ್ತಿದ್ರೆ ಭಾರತವೇನೂ ನಮ್ಮ ಮೇಲೆ ದಾಳಿ ಮಾಡ್ತಾ ಇರಲಿಲ್ಲ. ಇನ್ನೂ ನೆನಪಿದೆ ನನಗೆ. ಅಂದು ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಸಭೆಯಲ್ಲಿದ್ರು. ಪ್ರಧಾನಿ ಇಮ್ರಾನ್ ಖಾನ್​ ಸಭೆ ಹಾಜರಾಗಲು ನಿರಾಕರಿಸಿದ್ದರು. ಸೇನಾ ಮುಖ್ಯಸ್ಥ ಜನರಲ್​ ಕ್ವಾಮರ್ ಜಾವೇದ್ ಬಜ್ವಾ ಹಾಜರಿದ್ದರು. ಬೆಜ್ವಾ ಅವರ ಕಾಲುಗಳಲ್ಲಿ ನಡುಕ ಇತ್ತು. ಮುಖದ ತುಂಬಾ ಬೆವರಿತ್ತು. ಅವರು ಹೇಳ್ತಾ ಇದ್ರು – ದೇವರಾಣೆಗೂ ಅಭಿನಂದನ್ ಅನ್ನು ಬಿಟ್ಟು ಬಿಡೋಣ. ರಾತ್ರಿ 9 ಗಂಟೆಗೆ ಭಾರತ ದಾಳಿ ನಡೆಸೋದು ಗ್ಯಾರೆಂಟಿ. ಖುರೇಶಿ ಕೂಡ ನಡುಗುತ್ತಿದ್ದರು, ಬೆವೆತಿದ್ದರು ಎಂದು ಸಾದಿಕ್ ಆರೋಪಿಸಿದ್ದಾರೆ. (ಏಜೆನ್ಸೀಸ್)

    Web Exclusive: 10 ತಿಂಗಳಲ್ಲಿ ಆಂಬುಲೆನ್ಸ್​​ನಲ್ಲಿ 635 ಹೆರಿಗೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts