ನ್ಯೂಸ್

ರಾಹುಲ್ ಜೊತೆ ಮದುವೆಯಾಗಲು ಕಂಡೀಷನ್ ಹಾಕಿದ್ದ, ಸದಾ ವಿವಾದದಿಂದ ಸುದ್ದಿಯಾಗುವ ಈ ಚೆಲುವೆ ಬಗ್ಗೆ ನಿಮಗೆಷ್ಟು ಗೊತ್ತು?

ಮುಂಬೈ: ಖ್ಯಾತ ನಟಿ ಶೆರ್ಲಿನ್ ಚೋಪ್ರಾ ಎಲ್ಲಾ ವಿಚಾರದಲ್ಲೂ ಸಿಕ್ಕಾಪಟ್ಟೆ ಬೋಲ್ಡ್​​​. ಕೆಲವು ವಿವಾದಗಳಿಂದಾಗಿಯೂ ಸುದ್ದಿಯಲ್ಲಿರುವ ಶೆರ್ಲಿನ್, ಕಾಂಗ್ರೆಸ್ ನಾಯಕನ ಜೊತೆ ಮದುವೆಯಾಗಲು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದಾಗ ಸಾಕಷ್ಟು ಸುದ್ದಿ ಮಾಡಿದ್ದರು.

ರಾಹುಲ್ ಜೊತೆ ಮದುವೆಗೆ ಷರತ್ತು ಹಾಕಿದ್ದ ಶೆರ್ಲಿನ್!
ಕಳೆದ ವರ್ಷ ಶೆರ್ಲಿನ್ ಚೋಪ್ರಾ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಮದುವೆಯಾಗಲು ಬಯಸುತ್ತೀರಾ ಎಂದು ಕೇಳಿದಾಗ...ಇದಕ್ಕೆ ಪ್ರತಿಕ್ರಿಯಿಸಿದ ನಟಿ, ಹೌದು, ಆದರೆ ನಾನು ಇದಕ್ಕೆ ಒಂದು ಷರತ್ತನ್ನು ಹಾಕುತ್ತೇನೆ ಎಂದು ಹೇಳಿದ್ದರು. ಹೌದು, ರಾಹುಲ್ ಗಾಂಧಿಯನ್ನು ಮದುವೆಯಾಗಲು ಶೆರ್ಲಿನ್ ಷರತ್ತು ಹಾಕಿದ್ದರು. ಮದುವೆಯ ನಂತರ ತನ್ನ ಉಪನಾಮವನ್ನು ಬದಲಾಯಿಸುವುದಿಲ್ಲ ಎಂದು ನಟಿ ಹೇಳಿದ್ದರು. ಮದುವೆ ವಿಚಾರವಾಗಿ ಆಗ ಶೆರ್ಲಿನ್ ಹೇಳಿಕೆ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಬಗ್ಗೆ ಎಲ್ಲೆಡೆ ಚರ್ಚೆ ಆರಂಭವಾಗಿತ್ತು.

'ವಿನೋದ್' ಬಗ್ಗೆ ಚರ್ಚೆ
ಇಷ್ಟು ಮಾತ್ರವಲ್ಲದೆ ಕಳೆದ ವರ್ಷ ಈ ನಟಿ ಮತ್ತೊಂದು ಹೆಸರಿನೊಂದಿಗೆ ಸುದ್ದಿಯಾಗಿದ್ದರು. ಕಳೆದ ವರ್ಷ ಶೆರ್ಲಿನ್ ಅವರ ವಿಡಿಯೋ ವೈರಲ್ ಆಗಿತ್ತು, ಅದರಲ್ಲಿ ಅವರು ಮರಳಿನ ಮೇಲೆ ಕುಳಿತಿರುವುದು ಗಮನಿಸಬಹುದು. ಈ ಸಮಯದಲ್ಲಿ ನಟಿ ಮರಳಿನ ಮೇಲೆ 'ವಿನೋದ್' ಎಂಬ ಹೆಸರನ್ನು ಬರೆದಿದ್ದರು. ನಂತರ ಅವರು ಸಾಕಷ್ಟು ಸುದ್ದಿಯಾಗಿದ್ದರು. ಆಗ ಯಾರು ಈ ವಿನೋದ್ ಎಂದು ಜನ ಪ್ರಶ್ನಿಸತೊಡಗಿದರು.

ಅಷ್ಟೇ ಅಲ್ಲ, ಶೆರ್ಲಿನ್ ಚೋಪ್ರಾ ಒಮ್ಮೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್​​​ ಮಾಡಿದ್ದ ವಿಡಿಯೋದಲ್ಲಿ, ಹೃದಯದ ಚಿಹ್ನೆಯನ್ನು ಬಳಸಿ, ಎಂವಿ ಎಂದು ಬರೆದಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೇ ಮೊದಲು ಅಥವಾ ಕೊನೆಯಲ್ಲ. ಹೀಗೆ ಕೆಲವು ಕಾರಣಗಳಿಂದಾಗಿ ಶೆರ್ಲಿನ್ ಆಗಾಗ ಸುದ್ದಿಯಲ್ಲಿರುತ್ತಾರೆ. 

ಬೋಲ್ಡ್‌ನೆಸ್‌ಗೆ ಹೆಸರುವಾಸಿ 
ಇಂದು ಶೆರ್ಲಿನ್ ಚೋಪ್ರಾ ಅವರ ಹುಟ್ಟುಹಬ್ಬ. ನಟಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಶೆರ್ಲಿನ್ ಚೋಪ್ರಾ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೂಡ ವಿಶ್ ಮಾಡುತ್ತಿದ್ದಾರೆ. ತನ್ನ ಲುಕ್​​​​ ಮತ್ತು ಬೋಲ್ಡ್‌ನೆಸ್‌ಗೆ ಆಗಾಗ್ಗೆ ಸುದ್ದಿಯಲ್ಲಿರುವ ಶೆರ್ಲಿನ್ ಚೋಪ್ರಾ ಪ್ರತಿಯೊಂದು ಲುಕ್ ಜನರ ಗಮನ ಸೆಳೆಯುತ್ತದೆ. ಅಂದಹಾಗೆ ಶೆರ್ಲಿನ್ ಅವರ ಫೋಟೋಗಳು ಮತ್ತು ವಿಡಿಯೋಗಳು ಕಾಣಿಸಿಕೊಂಡ ತಕ್ಷಣ ಅವು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗುತ್ತವೆ.