More

    ಪಾಕಿಸ್ತಾನದಲ್ಲಿ ಲೈವ್ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಭೂಕಂಪನದ ಅನುಭವ; ವಿಡಿಯೋ ನೋಡಿ

    ಪಾಕಿಸ್ತಾನ: ಪಾಕಿಸ್ತಾನದಲ್ಲಿ 2024 ರ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯ ಸಮಯದಲ್ಲಿ ಭೂಕಂಪ ಸಂಭವಿಸಿದ್ದು, ಜನರು ತತ್ತರಿಸಿದ್ದಾರೆ. ಶನಿವಾರ 4.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾತ್ರಿ 11 ಗಂಟೆ ಸುಮಾರಿಗೆ ಹಲವೆಡೆ ಹಠಾತ್ ವಿದ್ಯುತ್ ವ್ಯತ್ಯಯ ಉಂಟಾಯಿತು. ಬಾಗಿಲುಗಳು ಅಲುಗಾಡಲು ಪ್ರಾರಂಭಿಸಿದಾಗ, ಜನರು ಭೂಕಂಪ ಸಂಭವಿಸಿದೆ ಎಂಬುದನ್ನು ಅರಿತುಕೊಂಡಿದ್ದಾರೆ.

    ಕಂಪನದ ಅಬ್ಬರ ಜೋರಾಗಿದ್ದು, ಜನರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇಷ್ಟೇ ಅಲ್ಲ, ಮತ ಎಣಿಕೆಯಿಂದಾಗಿ ರಾತ್ರಿ ಸುದ್ದಿವಾಹಿನಿಗಳ ಲೈವ್ ಶೋ ನಡೆಯುತ್ತಿದ್ದು ಅದರಲ್ಲಿ ಕುಳಿತಿದ್ದ ಪತ್ರಕರ್ತರು, ತಜ್ಞರ ಪ್ಯಾನೆಲ್​​​ಗೆ ಕೂಡ ಭೂಕಂಪದ ಅನುಭವ ಗಮನಕ್ಕೆ ಬಂದಿದ್ದು, ವಿಡಿಯೋ ಕೂಡ ಔಟ್ ಆಗಿದೆ.

    ವಿಡಿಯೋ ನೋಡಿ…
    ಭೂಕಂಪದ ಕಂಪನದಿಂದ ಪತ್ರಕರ್ತರು ಮತ್ತು ತಜ್ಞರು ಹೇಗೆ ನಡುಗುತ್ತಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.

    https://twitter.com/attalkhan786/status/1756458451901808912

    ಪಾಕಿಸ್ತಾನದ ಹವಾಮಾನ ಇಲಾಖೆ (ಪಿಎಂಡಿ) ವರದಿಯ ಪ್ರಕಾರ, ಭೂಕಂಪದ ಕೇಂದ್ರಬಿಂದುವು ಹಿಂದೂಕುಶ್ ಪ್ರದೇಶದಲ್ಲಿ ಭೂಮಿಯಿಂದ ಸುಮಾರು 142 ಕಿಲೋಮೀಟರ್ ಆಳದಲ್ಲಿದೆ.

    ಭಯದಿಂದ ಕಿರುಚಿದ ಜನರು
    ಸ್ವಾತ್ ಮತ್ತು ಚಿತ್ರಾಲ್‌ನಲ್ಲಿ ಭೂಕಂಪನವು ತುಂಬಾ ಪ್ರಬಲವಾಗಿದೆ ಎಂದು ವ್ಯಕ್ತಿಯೊಬ್ಬರು ಪತ್ರಕರ್ತರಿಗೆ ತಿಳಿಸಿದ್ದಾರೆ. ರಾತ್ರಿಯ ಸಮಯ ಮತ್ತು ತುಂಬಾ ಚಳಿಯಾಗಿತ್ತು. ಹೊರಗೆ ಚುನಾವಣಾ ವಾತಾವರಣ ಇದ್ದ ಕಾರಣ ರಾತ್ರಿ ಊಟ ಮಾಡಿ ಮಲಗಲು ರೆಡಿಯಾಗಿದ್ದೆವು. ಇದ್ದಕ್ಕಿದ್ದಂತೆ ಅಡುಗೆಮನೆಯಲ್ಲಿ ಪಾತ್ರೆಗಳು ಬಿದ್ದವು. ನಾವೆಲ್ಲಾ ಬೆಕ್ಕು ಇರಬಹುದು ಎಂದು ಭಾವಿಸಿದೆವು. ಆದರೆ ದೀಪಗಳು ಕೂಡ ಆಫ್ ಆದವು ಎಂಬ ಮಾಹಿತಿ ನೀಡಿದ್ದಾರೆ.

    ಜನರ ಸದ್ದು ಕೇಳಿದಾಗ ಭೂಕಂಪ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಜನರು, ಭೂಕಂಪ ಸಂಭವಿಸಿದೆ, ಹೊರಬನ್ನಿ ಎಂದು ಕೂಗುತ್ತಿದ್ದರು. ಹಲವೆಡೆ ಮನೆ ಬಿದ್ದಿರುವ ಬಗ್ಗೆಯೂ ವರದಿಯಾಗಿದೆ. ಕಳೆದ ತಿಂಗಳು ಸಹ ಇದೇ ರೀತಿ ಭೂಕಂಪ ಸಂಭವಿಸಿತ್ತು. 

    ಪರೀಕ್ಷೆಗೆಂದು ತೆರಳಿದ ಪಿಯುಸಿ ವಿದ್ಯಾರ್ಥಿನಿ 24 ಗಂಟೆಗಳ ಬಳಿಕ ಮಾವಿನ ತೋಟದಲ್ಲಿ ಶವವಾಗಿ ಪತ್ತೆ!

    ಈ ರಾಜ್ಯಗಳಿಗೆ ಮಳೆ ಎಚ್ಚರಿಕೆ, ರಾಷ್ಟ್ರ ರಾಜಧಾನಿಯಲ್ಲಿ ಹೇಗಿದೆ ಹವಾಮಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts