More

    ಪರೀಕ್ಷೆಗೆಂದು ತೆರಳಿದ ಪಿಯುಸಿ ವಿದ್ಯಾರ್ಥಿನಿ 24 ಗಂಟೆಗಳ ಬಳಿಕ ಮಾವಿನ ತೋಟದಲ್ಲಿ ಶವವಾಗಿ ಪತ್ತೆ!

    ಉತ್ತರ ಪ್ರದೇಶ: ಜಿಲ್ಲೆಯ ಶೋಹರತ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ, ಖಾರ್ಗ್ವಾರ್ ಗ್ರಾಮದ ನಿವಾಸಿಯಾದ ವಿದ್ಯಾರ್ಥಿನಿಯೊಬ್ಬಳ ಶವ ಮಾವಿನ ತೋಟದಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿನಿ ಶವ ಪತ್ತೆಯಾದ ಬಳಿಕ ಆ ಪ್ರದೇಶದಲ್ಲಿ ಸಂಚಲನ ಉಂಟಾಗಿದೆ. ಶುಕ್ರವಾರ ಪಿಯುಸಿ ವಿದ್ಯಾರ್ಥಿನಿ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದಳು. ಆದರೆ 24 ಗಂಟೆಗಳ ನಂತರ ಅಂದರೆ ಶನಿವಾರ ಬೆಳಗ್ಗೆ ಮಾವಿನ ತೋಟದಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.

    ಸಂಜೆಯವರೆಗೂ ವಿದ್ಯಾರ್ಥಿನಿ ಮನೆಗೆ ಹಿಂತಿರುಗಿರಲಿಲ್ಲ 
    ವಿದ್ಯಾರ್ಥಿನಿಯ ತಾಯಿ ಮಾಧುರಿ ದೇವಿ ನೀಡಿದ ದೂರಿನ ಪ್ರಕಾರ, ಆಕೆಯ 17 ವರ್ಷದ ಮಗಳು ಸಂಧ್ಯಾ ಶೋಹರತ್‌ಗಢ್‌ನ ಇಂಟರ್ ಕಾಲೇಜಿನಲ್ಲಿ 11 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಶುಕ್ರವಾರ ಸಂಧ್ಯಾ ಕಾಲೇಜಿನಲ್ಲಿ ವಾರ್ಷಿಕ ಪರೀಕ್ಷೆ ಬರೆಯಲು ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೊರಟಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಧ್ಯಾ ಪರೀಕ್ಷೆ ಬರೆದು 12:00 ಗಂಟೆಗೆ ಕಾಲೇಜಿನಿಂದ ತೆರಳಿದಳು. ಆದರೆ ಸಂಜೆಯವರೆಗೆ ಮನೆಗೆ ಹಿಂತಿರುಗಲಿಲ್ಲ. ಸಂಧ್ಯಾ ಬಾರದೇ ಇದ್ದುದರಿಂದ ಆತಂಕಗೊಂಡ ಆಕೆಯ ತಾಯಿ ಮಾಧುರಿ ದೇವಿ ಆಕೆಗಾಗಿ ಹುಡುಕಾಟ ಆರಂಭಿಸಿ ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮುಂಬೈಗೆ ಹೊರಟಿದ್ದ ತಂದೆ 
    ಇದೇ ವೇಳೆ ಮುಂಬೈಗೆ ತೆರಳುತ್ತಿದ್ದ ಸಂಧ್ಯಾ ಅವರ ತಂದೆ ಪ್ರಹ್ಲಾದ್ ಅವರು ಸಂಜೆಯವರೆಗೂ ಮಗಳು ಮನೆಗೆ ಬಾರದಿರುವ ಬಗ್ಗೆ ಮಾಹಿತಿ ಪಡೆದು ಮಧ್ಯದಲ್ಲಿಯೇ ವಾಪಸಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಮುಂಬೈಗೆ ತೆರಳಲು ಪ್ರಹ್ಲಾದ್ ಮನೆಯಿಂದ ಹೊರಟಿದ್ದರು ಎನ್ನಲಾಗಿದೆ. ಪ್ರೇಮ ಪ್ರಕರಣ ಸಂಬಂಧದಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ವಿಷ ಸೇವಿಸಿರುವ ಶಂಕೆ 
    ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪ್ರಾಚಿ ಸಿಂಗ್ ಮತ್ತು ಪೊಲೀಸ್ ಏರಿಯಾ ಅಧಿಕಾರಿ ಅರುಣ್ ಕಾಂತ್ ಸಿಂಗ್ ಕೂಡ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ. ದೂರಿನ ಆಧಾರದ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಅದೇ ಗ್ರಾಮದ ಅಮಿತ್ ಉಪಾಧ್ಯಾಯ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

    ಮೃತದೇಹದ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ ಎಂದು ಎಸ್ಪಿ ಪ್ರಾಚಿ ಸಿಂಗ್ ತಿಳಿಸಿದ್ದಾರೆ. ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿನಿಯು ಶಾಲಾ ಸಮವಸ್ತ್ರ ಮತ್ತು ನೀಲಿ ಬಣ್ಣದ ಜಾಕೆಟ್ ಧರಿಸಿದ್ದು, ಆಕೆಯ ಕೈಯಲ್ಲಿ ಶಾಲಾ ಬ್ಯಾಗ್ ಇತ್ತು. ಮೂಗಿನ ಕೆಳಗೆ ಸ್ವಲ್ಪ ರಕ್ತದ ಕಲೆಯೂ ಇದ್ದ ಕಾರಣ ಆಕೆ ವಿಷ ಸೇವಿಸಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ದೇಹದ ಮೇಲೆ ಕೆಲವು ಗಾಯದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

    ಈ ರಾಜ್ಯಗಳಿಗೆ ಮಳೆ ಎಚ್ಚರಿಕೆ, ರಾಷ್ಟ್ರ ರಾಜಧಾನಿಯಲ್ಲಿ ಹೇಗಿದೆ ಹವಾಮಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts