ಕೋಲಾರ: ಕೆಲಸ ಮಾಡುವ ಜಾಗದಲ್ಲಿ ಮಾಡಬಾರದ್ದು ಮಾಡಲು ಹೋಗಿ ಮೂವರು ಪೊಲೀಸರು ಫಜೀತಿಗೆ ಸಿಲುಕಿದ್ದಲ್ಲದೆ, ಈಗ ಅಮಾನತಿಗೂ ಒಳಗಾಗಿದ್ದಾರೆ. ಹೀಗೆ ತಮ್ಮ ದುಷ್ಕೃತ್ಯದ ಆ ವಿಡಿಯೋ ವೈರಲ್ ಆಗಿದ್ದು, ಅವರು ಮುಖಭಂಗಕ್ಕೆ ಒಳಗಾಗಿದ್ದಲ್ಲದೆ, ಸಸ್ಪೆಂಡ್ ಕೂಡ ಆಗಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಪೊಲೀಸ್ ಕಾನ್ಸ್ಟೆಬಲ್ಗಳಾದ ಚಲಪತಿ, ಮಂಜುನಾಥ್ ಹಾಗೂ ರಮೇಶ್ ಬಾಬು ಅವರನ್ನು ಕೋಲಾರ ಎಸ್ಪಿ ಅಮಾನತುಗೊಳಿಸಿದ್ದಾರೆ.
ಈ ಮೂವರು ಪೊಲೀಸ್ ಕಾನ್ಸ್ಟೆಬಲ್ಗಳು ಠಾಣೆಯಲ್ಲೇ ಮದ್ಯಪಾನ ಮಾಡಿದ್ದರು. ಮಾತ್ರವಲ್ಲದೆ ಅದನ್ನು ವಿಡಿಯೋ ಕೂಡ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ನಡೆ ಸಾರ್ವಜನಿಕರಿಂದ ತೀವ್ರ ಟೀಕೆಗೂ ಗುರಿಯಾಗಿತ್ತು. ಹೀಗಾಗಿ ಚಲಪತಿ, ಮಂಜುನಾಥ್ ಜತೆಗೆ ವಿಡಿಯೋ ಮಾಡಿದ್ದ ರಮೇಶ್ ಬಾಬುವನ್ನು ಕೂಡ ಅಮಾನತುಗೊಳಿಸಲಾಗಿದೆ. ಅಂದಹಾಗೆ ಇದು ಒಂದೂವರೆ ವರ್ಷದ ಹಿಂದೆ ನಡೆದಿದ್ದ ಘಟನೆ. ಆದರೆ ಆ ವಿಡಿಯೋ ವೈರಲ್ ಆಗಿದ್ದರಿಂದ ಈ ಪೇದೆಗಳು ಸಸ್ಪೆಂಡ್ ಆಗುವಂತಾಗಿದೆ.