ನ್ಯೂಸ್

ನಿಂತಿದ್ದ ಕಂಟೈನರ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬಸ್​: ಮುಂದೆ ಆಗಿದ್ದು ದುರಂತ..

ಮೊರೆನಾ: ಭೀಕರ ಅಪಘಾತವೊಂದರಲ್ಲಿ ಕನಿಷ್ಠ ಮೂರು ಜನರು ಮೃತಪಟ್ಟು, ಏಳು ಜನರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಬಳಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆದ ಹುಸಿ ಬಾಂಬ್ ಬೆದರಿಕೆ ಪ್ರಕರಣಕ್ಕೆ ವಿಚಿತ್ರ ಸಿಕ್ತು ತಿರುವು! ಇಬ್ಬರ ಜಗಳಕ್ಕೆ ಪೊಲೀಸರಿಗೆ ಪೀಕಲಾಟ…

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಗ್ವಾಲಿಯರ್‌ನಿಂದ ದೆಹಲಿಗೆ ತೆರಳುತ್ತಿತ್ತು. ದಾಮೋಹ್-ಜಬಲ್‌ಪುರ ರಾಜ್ಯ ಹೆದ್ದಾರಿಯ ನೋಹ್ರಾ ಪೊಲೀಸ್ ಠಾಣೆಯ ಹತ್ತಿ ಗ್ರಾಮದ ಬಳಿ ರಸ್ತೆಬದಿಯಲ್ಲಿ ಕಂಟೈನರ್​ವೊಂದು ನಿಂತಿತ್ತು. ಈ ವೇಳೆ ಬಸ್‌ ಕಂಟೇನರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಬಸ್‌ನ ಮುಂಭಾಗಕ್ಕೆ ತೀವ್ರ ಹಾನಿಯಾಗಿದೆ. ಇದರಿಂದಾಗಿ ಮೂವರು ಮೃತಪಟ್ಟು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಈ ಕುರಿತು ಮಾತನಾಡಿರುವ ಪೊಲೀಸರು, ಘಟನೆಯಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ. ಘಟನೆಯ ವೇಳೆ ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಅಂದಾಜಿಲಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಶೈಲೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ.(ಏಜೆನ್ಸೀಸ್​)