ನ್ಯೂಸ್

ರಾಹುಲ್​ಗಾಂಧಿ ವಿರುದ್ಧ 3 ಎಫ್​ಐಆರ್ ದಾಖಲು​​; ಕಾರಣ ಹೀಗಿದೆ..

ರಾಯಪುರ: ಛತ್ತೀಸ್‌ಗಢದ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮೂರು ಎಫ್​​ಐಆರ್​ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ (ಸೆಪ್ಟೆಂಬರ್​ 20) ತಿಳಿಸಿದ್ದಾರೆ. ಇತ್ತೀಚೆಗೆ ಅಮೆರಿಕ ಪ್ರವಾಸಲ್ಲಿದ್ದ ರಾಹುಲ್​ಗಾಂಧಿ ಅವರು ತಮ್ಮ ಹೇಳಿಕೆಗಳ ಮೂಲಕ ಸಿಖ್​ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಈ ಪ್ರಕರಣಗಳು ದಾಖಲಾಗಿದೆ ಎಂದು ಹೇಳಿದರು.

ಎರಡು ದೂರುಗಳಲ್ಲಿ ಒಂದು ರಾಜಧಾನಿ ರಾಯ್‌ಪುರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಮತ್ತು ಇನ್ನೊಂದು ಬಿಲಾಸ್‌ಪುರ ಜಿಲ್ಲೆಯ ಬಿಲಾಸ್‌ಪುರ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಗುರುವಾರ ದಾಖಲಾಗಿದ್ದರೆ. ಮತ್ತೊಂದು ಶುಕ್ರವಾರ ದುರ್ಗ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಎಲ್ಲಾ ಪ್ರಕರಣಗಳಲ್ಲಿ ರಾಹುಲ್​​ ಗಾಂಧಿಯವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 299 (ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಉದ್ದೇಶದಿಂದ ಅಥವಾ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು 302 (ಉದ್ದೇಶಪೂರ್ವಕವಾಗಿ ಪದಗಳು, ಶಬ್ದಗಳು, ಸನ್ನೆಗಳು ಅಥವಾ ವಸ್ತುಗಳಿಂದ ಇನ್ನೊಬ್ಬರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ನಾಯಕ ಅಮರ್‌ಜೀತ್ ಛಾಬ್ರಾ ಅವರ ದೂರಿನ ಮೇರೆಗೆ ರಾಯ್‌ಪುರದ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಛಾಬ್ರಾ ಅವರ ಅರ್ಜಿಯ ಆಧಾರದ ಮೇಲೆ ರಾಹುಲ್ ಗಾಂಧಿ ವಿರುದ್ಧ ಭಾರತೀಯ ನ್ಯಾಯಾಂಗ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 299 ಮತ್ತು 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಡೀ ವಿಶ್ವದಲ್ಲಿ ಮತ್ತು ಭಾರತದಲ್ಲಿಯೂ ಸಹ ಸಿಖ್ ಸಮುದಾಯವು ಪೇಟ, ಕದ ಧರಿಸುವುದನ್ನು ಮತ್ತು ಗುರುದ್ವಾರಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿಲ್ಲ. ಪ್ರಧಾನಿ ಕೂಡ ಪೇಟ ಧರಿಸಿ ಗುರುದ್ವಾರಕ್ಕೆ ಭೇಟಿ ನೀಡುತ್ತಾರೆ ಎಂಬ ರಾಹುಲ್​ ಗಾಂಧಿ ಅವರ ಹೇಳಿಕೆಯು ಹಲವು ವಾದಗಳನ್ನು ಹುಟ್ಟುಹಾಕಿತು. ರಾಹುಲ್​​ ಗಾಂಧಿ ಅವರ ಹೇಳಿಕೆಯು ಶಾಂತಿಯಿಂದಿರುವ ಜನರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿದೆ. ಸಿಖ್ ಸಮುದಾಯವು ಸಮಾಜದ ಇತರ ಧರ್ಮಗಳೊಂದಿಗೆ ತಾರತಮ್ಯ ಮತ್ತು ದ್ವೇಷವನ್ನು ಉಂಟುಮಾಡಬಹುದು ಎಂಬುದು ಅವರ ಪ್ರತಿಪಾದನೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.(ಏಜೆನ್ಸೀಸ್​​)