ನ್ಯೂಸ್

ಬಾಬಾ ವಂಗಾಕ್ಕಿಂತ ಅಪಾಯಕಾರಿ ಭವಿಷ್ಯ ನುಡಿದಿದ್ದಾಳೆ ಈ ಜಪಾನ್​ ಮಹಿಳೆ; 2030ಕ್ಕೆ ಕಾದಿದೆ ಭಯಾನಕ ವಿಪತ್ತು! | Prediction

Prediction : ಭವಿಷ್ಯದ ಬಗ್ಗೆ ಹೇಳುವ ಬಾಬಾ ವಂಗಾ ಬಗ್ಗೆ ಕೇಳಿಯೇ ಇರ್ತಿರಾ ಅಲ್ವಾ ಅವರು ಹೇಳಿದ ಭವಿಷ್ಯ ಸಾಮಾನ್ಯವಾಗಿ ಬಹುತೇಕ ಸಂಭವಿಸಿವೆ. ಇದೀಗ ಬಾಬಾ ವಂಗಾಕ್ಕಿಂತ ಜಪಾನಿನ ಭವಿಷ್ಯ ಹೇಳುವ ಮಹಿಳೆಯೊಬ್ಬಳು ಅಪಾಯಕಾರಿ ಭವಿಷ್ಯ ನುಡಿದ್ದಾಳೆ. ಅಲ್ಲದೆ, ಈ ಮಹಿಳೆ ಹೇಳಿದ ಭವಿಷ್ಯ ಎಲ್ಲವೂ ನಡೆದಿದೆಯಂತೆ. ಈವರು ಯಾರು? ಇವರು ಹೇಳಿದ ಭವಿಷ್ಯವೇನು? ಎಂಬುದು ತಿಳಿಯೋಣ.

ಅಂದಹಾಗೆ 2025 ದೊಡ್ಡ ವಿಪತ್ತು ಜರುಗುತ್ತದೆ ಎಂದು ಬಲ್ಲೇರಿಯನ್‌ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಬಹಳ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದಾರೆ. ಇದೀಗ, ಜಪಾನಿನ ಮಹಿಳೆಯೊಬ್ಬರು ಬಾಬಾ ವಂಗಾಗಿಂತ ಹೆಚ್ಚು ಅಪಾಯಕಾರಿ ಭವಿಷ್ಯವಾಣಿಗಳನ್ನು ನೀಡಿದ್ದಾರೆ. ವಿಶೇಷವೆಂದರೆ ಈ ಮಹಿಳೆಯ ಅನೇಕ ಭವಿಷ್ಯವಾಣಿಗಳು ಇಲ್ಲಿಯವರೆಗೆ ನಿಜವಾಗಿವೆ. ಆ ಮಹಿಳೆ ಬೇರೆ ಯಾರೂ ಅಲ್ಲ, ಜಪಾನ್‌ನ ರಿಯೊ ಟ್ಯಾಟ್ಸುಕಿ, ಅವರನ್ನು ಜಪಾನ್‌ನ ಬಾಬಾ ವಂಗಾ ಎಂದೂ ಕರೆಯುತ್ತಾರೆ.

ರಿಯೊ ಟ್ಯಾಟ್ಸುಕಿ ಹೇಳಿದ್ದ ಭವಿಷ್ಯ ನಿಜ

ಜಪಾನಿನ ಪ್ರವಾದಿ ರಿಯೊ ಟ್ಯಾಟ್ಸುಕಿ ಹೇಳಿದ ಅನೇಕ ವಿಷಯಗಳು ಇಲ್ಲಿಯವರೆಗೆ ನಿಜವಾಗಿವೆ. ಅವಳು ಕನಸಿನಲ್ಲಿ ಏನು ಕಂಡರೂ ಅದು ನಿಜವಾಗುತ್ತದೆ ಎಂದು ಹೇಳಲಾಗುತ್ತದೆ. ರಾಜಕುಮಾರಿ ಡಯಾನಾ, ಗಾಯಕ ಫ್ರೆಡ್ಡಿ ಮರ್ಕ್ಯುರಿ ಅವರ ಮರಣವನ್ನು ಟಾಟ್ಸುಕಿ ಭವಿಷ್ಯ ನುಡಿದಿದ್ದರು, ಅದು ನಿಜವಾಯಿತು. ಇಷ್ಟು ಮಾತ್ರವಲ್ಲದೆ, ಅವರು 1999 ರಲ್ಲಿ ತಮ್ಮ ಪುಸ್ತಕದಲ್ಲಿ ಕರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಭವಿಷ್ಯ ನುಡಿದಿದ್ದರು. ಇದು 2020ರಲ್ಲಿ ನಿಜವಾಗಿದೆ.

ರಿಯೊ ಟ್ಯಾಟ್ಸುಕಿ ನುಡಿದ ಭವಿಷ್ಯವೇನು..?

ರಿಯೊ ಟ್ಯಾಟ್ಸುಕಿ ತಮ್ಮ ಪುಸ್ತಕದಲ್ಲಿ ಮತ್ತೊಮ್ಮೆ ಕೊರೊನಾ ಸಾಂಕ್ರಾಮಿಕ ರೋಗದ ಮರಳುವಿಕೆಯ ಬಗ್ಗೆ ಬರೆದಿದ್ದಾರೆ. ಈ ಸಾಂಕ್ರಾಮಿಕ ರೋಗವು 2030 ರಲ್ಲಿ ಮತ್ತೊಮ್ಮೆ ಮರಳುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಈ ಸಾಂಕ್ರಾಮಿಕ ರೋಗವು ಕಣ್ಮರೆಯಾಗಿ 2030 ರಲ್ಲಿ ಮತ್ತೆ ಮರಳುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಜಗತ್ತಿನಲ್ಲಿ ಭೀಕರ ವಿನಾಶದ ಸಾಧ್ಯತೆಯಿದೆ ಎಂದು ಅವರು ಬರೆದಿದ್ದಾರೆ.(ಏಜೆನ್ಸೀಸ್​)