ಬೆಂಗಳೂರು: ಕೆಲವರು ಪ್ರೀತಿ ಮಾಡುವಾಗ ಇದ್ದಂತೆ, ಮದುವೆಯಾದ ಬಳಿಕ ಇರುವುದಿಲ್ಲ. ವಿವಾಹ ಜೀವನವೇ ಬೇರೆ, ಪ್ರೀತಿ-ಪ್ರೇಮದ ಜೀವನಶೈಲಿಯ ಭಿನ್ನ ಎಂಬುದನ್ನು ಅನೇಕರು ಸಾಬೀತುಪಡಿಸಿದ್ದಾರೆ. ಇದಕ್ಕೆ ನಮ್ಮ-ನಿಮ್ಮ ಸುತ್ತಮುತ್ತವೇ ಹಲವು ನಿದರ್ಶನಗಳಿವೆ. ಪ್ರೀತಿಯ ಸುಳಿಗೆ ಬೀಳುವ ಪ್ರೇಮಿಗಳು ಒಬ್ಬರಿಗೊಬ್ಬರು ಪರಸ್ಪರ ಏನು ಬೇಕಾದರೂ ಮಾಡಲು ದಾಪುಗಾಲು ಇಡುತ್ತಾರೆ.
ಪ್ರೀತಿಗೋಸ್ಕರ, ಪ್ರೀತಿಸಿದವರಿಗೋಸ್ಕರ ಎಂತಹ ಕಠಿಣ ಪರಿಸ್ಥಿತಿಯನ್ನು ಕೂಡ ನಿಭಾಯಿಸಲು, ನಿರ್ವಹಿಸಲು ಮುಂದಾಗುತ್ತಾರೆ. ಅದು ಎಂತಹದ್ದೇ ಪರಿಸ್ಥಿತಿ ಇರಲಿ, ಮುನ್ನುಗ್ಗಲು ಮಾತ್ರ ಕಿಂಚಿತ್ತು ಯೋಚಿಸುವುದಿಲ್ಲ. ಈ ಪೈಕಿ ಹುಡುಗಿಯರಿಗಿಂತ ಹುಡುಗರು ಹೆಚ್ಚು ತ್ಯಾಗಮಯಿಗಳಾಗಿದ್ದು, ತಮ್ಮ ಪ್ರೇಯಸಿಗಾಗಿ ಏನಾದರು ಒಂದು ರೀತಿಯ ಸರ್ಕಸ್ ಮಾಡುತ್ತಲೇ ಇರ್ತಾರೆ. ಅವರ ಖುಷಿಗಾಗಿ ಬೈಕ್, ಕಾರು, ಹೊಸ ಬಗೆಯ ವಸ್ತುಗಳನ್ನು ಖರೀದಿಸುತ್ತಾರೆ.
ತಮ್ಮ ಹುಡುಗಿ ಇದು ಇರಲಿ, ಓಕೆ ಎಂದರೆ ತಮಗಿಷ್ಟವಿಲ್ಲದಿದ್ದರೂ ಖರೀದಿ ಮಾಡುವ ಹುಡುಗರು, ಅವರು ಬೇಡ ಎಂದರೆ ಅದನ್ನು ವಾಪಾಸ್ ಮಾಡಲು ಸಹ ಹಿಂದೇಟು ಹಾಕುವುದಿಲ್ಲ. ಸದ್ಯ ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಪ್ರಿಯಕರನೊಬ್ಬ ತನ್ನ ಪ್ರೇಯಸಿ ಹಾಗೂ ಅವನ ಆಸೆಯಂತೆ ಹೊರಗೆ ತಿರುಗಾಡಲು ಬುಲೆಟ್ ಬೈಕ್ ಖರೀದಿಸುತ್ತಾನೆ. ಆದರೆ, ರಸ್ತೆಯಲ್ಲಿ ಹೋಗುವಾಗ ಆಕೆಯಾಡುತ್ತಿದ್ದ ಯಾವ ಮಾತುಗಳು ಅವನಿಗೆ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ಇದಕ್ಕೆ ಕಾರಣವೂ ಇದೆ.
ಬುಲೆಟ್ ಆದ್ದರಿಂದ ಬೈಕ್ನಿಂದ ಹೊರಬುರುತ್ತಿದ್ದ ಶಬ್ದ ಆಕೆಯ ಮಾತುಗಳು ಕೇಳದಂತೆ ಮಾಡುತ್ತಿತ್ತು. ಇದು ಆತನಿಗೆ ಬೈಕ್ ಮೇಲೆ ಅತೀವ ಬೇಸರ ತಂದಿತು. ತದನಂತರ ಬುಲೆಟ್ ಸೇಲ್ ಮಾಡಿ, ಆಕ್ಟೀವಾ ಬೈಕ್ ತಂದನು. ಇದಾದ ಒಂದು ವರ್ಷದ ಬಳಿಕ ಆತ ತನ್ನ ಪ್ರೇಯಸಿ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾನೆ. ಮದುವೆಯಾದ ಬಳಿಕವು ನಿಲ್ಲದ ಈ ಬದಲಾವಣೆ, ವಿವಾಹ ಜೀವನದ ನಂತರ ಸಹ ಮುಂದುವರೆದಿದೆ. ಕಾರಣ, ಯಾವ ಗಾಡಿಯನ್ನು ಬೇಡವೆಂದು ವಾಪಾಸ್ ಮಾಡಿದ್ದನೋ, ಅದನ್ನೇ ಮತ್ತೆ ಖರೀದಿ ಮಾಡುವ ಮೂಲಕ ಆಕ್ಟೀವಾ ಸ್ಕೂಟರ್ನ ಹಿಂತಿರುಗಿಸಿದ್ದಾನೆ.
ಇದು ಕೊಂಚ ವಿಚಿತ್ರ ಎನಿಸಿದರೂ ಆತನ ಗೊಂದಲ ಮನಸ್ಥಿತಿ ನೆಟ್ಟಿಗರಲ್ಲಿ ನಗು ಮೂಡಿಸಿದೆ. ಆತ ಪದೇ ಪದೇ ಬೈಕ್ ಬದಲಾಯಿಸಲು ಕಾರಣವೇನು? ಬೇಡವೆಂದ ಬೈಕ್ ಅನ್ನೇ ಮತ್ತೆ ಬೇಕೆಂದಿದ್ದು ಏಕೆ? ಎಂಬ ಪ್ರಶ್ನೆಗಳು ಅನೇಕರಲ್ಲಿ ಕಾಡಿದೆ. ಸದ್ಯ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಮಿಶ್ರ ಪ್ರತಿಕ್ರಿಯೆಗಳು ಪಡೆದುಕೊಂಡಿದೆ,(ಏಜೆನ್ಸೀಸ್).