‘ವಿಜಯೀ ಭವ ಸಂಗೀತಾ ಶೃಂಗೇರಿ’ ಟ್ರೆಂಡ್
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಬಿಗ್ಬಾಸ್ ಟ್ರೋಪಿ ಯಾರ ಪಾಲಾಗಲಿದೆ ಎನ್ನುವ ಲೆಕ್ಕಾಚಾರ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ಬಾರಿ ಬಿಗ್ಬಾಸ್ ಗೆಲ್ಲೋದು ಇವರೆ ಎನ್ನುವ ಲೆಕ್ಕಾಚಾರಕ್ಕೆ ಬಿಗ್ಬಾಸ್ ಅಭಿಮಾನಿಗಳು ಬಂದಿದ್ದಾರೆ. ಹಾಗಿದ್ದರೆ ಆ ಸ್ಪರ್ಧಿ ಯಾರು? ಎನ್ನುವ ಕುರಿತಾಗಿ ಇಂದು ತಿಳಿದುಕೊಳ್ಳೋಣ..
ಫಿನಾಲೆ ಟಿಕೆಟನ್ನು ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್ ಟಿಕೆಟ್ ಪಡೆದುಕೊಂಡಿದ್ದಾರೆ. ವರ್ತೂರ್ ಸಂತೋಷ್ ಈ ವಾರಾ ಸೇವ್ ಆಗಿ ಫಿನಾಲೆ ವಾರದಲ್ಲಿ ಇರಲಿದ್ದಾರೆ. ನಮೃತಾ, ಕಾರ್ತಿಕ್, ವಿನಯ್, ಟ್ರೋನ್ ಪ್ರತಾಪ್ ಫಿನಾಲೆ ಟಿಕೆಟ್ ಸ್ಪರ್ಧೆಯಲ್ಲಿದ್ದಾರೆ. ಈ ನಾಲ್ವರಲ್ಲಿ ಈ ವಾರ ಒಬ್ಬರು ಮನೆಗೆ ಹೋದ್ರೆ.. ಮುಂದಿನ ವಾರದ ಮಧ್ಯದಲ್ಲಿ ಒಬ್ಬರು ಮನೆಗೆ ಹೋಗುತ್ತಾರೆ. ಫಿನಾಲೆ ವಾರಾದಲ್ಲಿ ಟಾಪ್ ಐವರು ಸ್ಪರ್ಧಿಗಳು ಇರಲಿದ್ದಾರೆ.
ಫಿನಾಲೆ ಟಿಕೆಟ್ ಪಡೆದಿರುವ ಸಂಗೀತಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಂಗೀತಾ ಶೃಂಗೇರಿ ಅವರು ದೊಡ್ಮನೆಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆರಂಭದಲ್ಲಿ ಕಾರ್ತಿಕ್ ಅವರಿಂದ ದೂರ ಆದರು. ನಂತರ ವಿನಯ್ ಜೊತೆ ಸೇರಿ ಟ್ರೋಲ್ ಆದರು. ಎಲ್ಲಕ್ಕಿಂತ ಮುಖ್ಯವಾಗಿ ಟಾಸ್ಕ್ ಆಡುವಾಗ ಅವರ ಕಣ್ಣಿಗೆ ಹಾನಿ ಉಂಟಾಯಿತು. ಇದರಿಂದ ಅವರು ಹಿಂಜರಿಯಲಿಲ್ಲ. ಮನೆ ಮಂದಿನೆಲ್ಲ ಎದುರು ಹಾಕಿಕೊಂಡು ಗೇಮ್ ಆಡಿದ್ದಾರೆ. ಈಗ ಅವರ ಹೆಸರು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
ಇಡೀ ಜರ್ನಿಯನ್ನು ಗಮನಿಸಿ ಸುದೀಪ್ ಅವರು ಸಂಗೀತಾ ಹಾಗೂ ವಿನಯ್ಗೆ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ‘ನೀವಿಬ್ಬರು ಇಲ್ಲದೆ ಇದ್ದರೆ ಬಿಗ್ ಬಾಸ್ನ ಈ ಜರ್ನಿ ಅಪೂರ್ಣ ಆಗುತ್ತಿತ್ತು’ ಎಂದು ಸುದೀಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ಸಂಗೀತಾ ಜರ್ನಿಗೆ ಮತ್ತಷ್ಟು ಬೂಸ್ಟ್ ನೀಡಿದೆ.
‘VIJAYIBHAVA SANGEETHA SRINGERI’ ಎಂದು ಟ್ವೀಟ್ ಮಾಡಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 2 ಲಕ್ಷ ಟ್ವೀಟ್ ಆಗಿದೆ. ಭಾರತದ ಟ್ರೆಂಡ್ನಲ್ಲಿ ಅವರ ಹೆಸರು ಐದನೇ ಸ್ಥಾನದಲ್ಲಿದೆ. ಈ ಮೊದಲು ರೂಪೇಶ್ ಶೆಟ್ಟಿ (ಬಿಗ್ ಬಾಸ್ ಸೀಸನ್ 9ರ ವಿಜೇತ), ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್ ಹೆಸರು ಟಾಪ್ ಸ್ಥಾನದಲ್ಲಿ ಇವೆ. ಈ ಮೂಲಕ ಅವರು ದಾಖಲೆ ಮಾಡಿದ್ದಾರೆ.
ಬಿಗ್ ಬಾಸ್ ಪಟ್ಟ ಗೆಲ್ಲೋದಕ್ಕೆ ಅರ್ಹತೆ ಇರುವ ಸ್ಪರ್ಧಿಗಳಲ್ಲಿ ಸಂಗೀತಾ ಕೂಡ ಒಬ್ಬರು. ಆಟದಲ್ಲೂ, ಮಾತಿನಲ್ಲೂ ಎಲ್ಲದರಲ್ಲೂ ತನ್ನ ಇರುವಿಕೆಯನ್ನು ತೋರಿಸುತ್ತಾ ಆಟವಾಡುತ್ತಿರುವ ಸಂಗೀತಾ ಈ ಬಾರಿಯ ಟೈಟಲ್ ವಿನ್ನರ್ ಆಗುವ ಸಾಧ್ಯತೆ ಇದೆ. ಸಂಗೀತಾ ಈ ಬಾರಿ ಬಿಗ್ ಬಾಸ್ ಪಟ್ಟ ಗೆಲ್ಲುವ ಪ್ರಬಲ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದಾರೆ. ತಮ್ಮ ಸ್ವಂತಿಕೆಯನ್ನು ಕಾಪಾಡಿಕೊಂಡು ಆಟವಾಡಿದ ಅವರು, ಮತ್ತೆ ಜನರ ಮನಗೆದ್ದರು, ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್’ಗಳನ್ನು ಹೊಂದಿದ ಸ್ಪರ್ಧಿಗಳಲ್ಲಿ ಒಬ್ಬರಾದರು. ಹೀಗಾಗಿ ಸಂಗೀತಾ ಗೆಲ್ಲುವ ನೀರಿಕ್ಷೆ ಹೆಚ್ಚಾಗಿದೆ.