More

    ನಾಯಿಗಳಿಗೆ ಮಧ್ಯರಾತ್ರಿ ದೆವ್ವ ಕಾಣಿಸುತ್ತಾ? ಶ್ವಾನಗಳ ಕೂಗು ಯಾವುದರ ಸಂಕೇತ.. ?

    ನವದೆಹಲಿ: ಮಧ್ಯರಾತ್ರಿಯಲ್ಲಿ ಶ್ವಾನಗಳು ಜೋರಾಗಿ ಕೂಗುತ್ತವೆ. ಇದು ಹೆಚ್ಚಿನವರಿಗೆ ಕಿರಿಕಿರಿ ಉಂಟಾಗುತ್ತದೆ. ಸಾವಿನ ಸಂಕೇತ, ನಾಯಿಗಳು ದೆವ್ವಗಳನ್ನು ನೋಡಿ ಅಳುತ್ತವೆ ಎನ್ನಲಾಗುತ್ತದೆ. ಆದರೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ವಿಜ್ಞಾನಿಗಳು ಬೇರೆನೆ ಹೇಳುತ್ತಾರೆ.

    ಶ್ವಾನಗಳು ಗಾಯಗೊಂಡಾಗ ಅಥವಾ ಅನಾರೋಗ್ಯಕ್ಕೆ ಒಳಗಾದಾಗ ರಾತ್ರಿಯಲ್ಲಿ ಕೂಗುತ್ತವೆ ಅಲ್ಲದೆ ಬೇರೆ ಕಡೆಯಿಂದ ನಾಯಿಗಳು ಬಂದರೂ ರಾತ್ರಿ ವೇಳೆ ಇತರ ನಾಯಿಗಳಿಗೆ ಎಚ್ಚರಿಕೆ ನೀಡಲು ಜೋರಾಗಿ ಕೂಗುತ್ತವೆ. ಅಥವಾ ತಾವು ವಾಸ ಇರುವ ಪ್ರದೇಶದಲ್ಲಿ ಏನಾದರು ವ್ಯತ್ಯಾಸವಾದಾಗ, ನಾಯಿಯು ಕೂಗಲು ಪ್ರಾರಂಭಿಸುತ್ತದೆ. ಮಾನವನ ಗಮನ ಸೆಳೆಯಲು ನಾಯಿಗಳು ರಾತ್ರಿಯಲ್ಲಿ ಕೂಗುತ್ತವೆ. ನಾಯಿಗಳು ತಮ್ಮ ಹಳೆಯ ಪ್ರದೇಶಗಳನ್ನು ತೊರೆದು ಹೊಸ ಪ್ರದೇಶಗಳಿಗೆ ಬಂದಾಗ ದುಃಖಿತವಾಗುತ್ತವೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

    ನಾಯಿಗಳು ಕೂಡ ಹೆದರುತ್ತವೆ. ಆ ಭಯವು ವಯಸ್ಸಾದಂತೆ ಹೆಚ್ಚಾಗುತ್ತದೆ. ಅಭದ್ರತೆ ಹೆಚ್ಚುತ್ತಿದೆ. ಕೆಲವೊಮ್ಮೆ ಆ ಭಯದಿಂದ ನಾಯಿ ಮಧ್ಯರಾತ್ರಿಯಲ್ಲಿ ಅಳುತ್ತದೆ. ನಾಯಿಗಳು ಸಹ ಸಂಗಾತಿಯ ಅನುಪಸ್ಥಿತಿಗಾಗಿ ಅಥವಾ ಸಂಗಾತಿಯ ಮರಣಕ್ಕಾಗಿ ಅಳುತ್ತವೆ.

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಯಿಗಳು ತಮ್ಮ ಸುತ್ತಲೂ ಏನಾದರು ವ್ಯತ್ಯಾಸವಾದಾಗ ಮಾತ್ರ ಅಳುತ್ತವೆ, ಅದಕ್ಕಾಗಿಯೇ ನಾಯಿಗಳು ಕೂಗಿದಾಗ, ಜನರು ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಾರೆ.

    ವಿಜ್ಞಾನಿಗಳ ಪ್ರಕಾರ ನಾಯಿಗಳು ರಾತ್ರಿಯಲ್ಲಿ ಅಳುವುದಿಲ್ಲ.. ಅದು ರಾತ್ರಿಯಲ್ಲಿ ದೂರದಲ್ಲಿರುವ ತನ್ನ ಸಹಚರರಿಗೆ ಸಂದೇಶವನ್ನು ಕಳುಹಿಸಲು ಜೋರಾಗಿ ಕೆಟ್ಟ ಸ್ವರದಲ್ಲಿ ಕೂಗಲು ಪ್ರಯತ್ನಿಸುತ್ತವೆ ಎನ್ನಲಾಗಿದೆ.

    ಧೋನಿ ಅಭಿಮಾನಿ ಸಾವು; ಮನೆಗೆ ಚೆನ್ನೈ ಸೂಪರ್ ಕಿಂಗ್ಸ್ ಬಣ್ಣ ಹಚ್ಚಿ ವೈರಲ್ ಆಗಿದ್ದ ವಿಶೇಷ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts