ನ್ಯೂಸ್

ಈ ರೆಸ್ಟೋರೆಂಟ್​​​ನಲ್ಲಿ ತಿನ್ನಲು ಇಂದು ಬುಕ್ ಮಾಡಿದರೆ 4 ವರ್ಷ ಕಾಯಬೇಕು!

ಅಮೆರಿಕ: ನೀವು ಕೆಲವು ರೆಸ್ಟೋರೆಂಟ್​​​ನಲ್ಲಿ ಊಟ ಸೇವಿಸಿರಬಹುದು. ಆದರೆ ಇನ್ನು ಈ ರೆಸ್ಟೋರೆಂಟ್ ಬಗ್ಗೆ ನಿಮಗೆ ತಿಳಿದಿಲ್ಲದಿರಲು ಸಾಧ್ಯವೇ ಇಲ್ಲ. ಆದರೆ ಇಂದು ನಾವು ನಿಮಗೆ ಈ ರೆಸ್ಟೋರೆಂಟ್ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಈ ರೆಸ್ಟೋರೆಂಟ್ ಎಲ್ಲಿದೆ? ವಿಶೇಷತೆ ಏನು ಎಂಬುದನ್ನು ನೋಡಣ ಬನ್ನಿ...

ಸಾಮಾನ್ಯವಾಗಿ ಅನೇಕರು ಹೊರಗೆ ತಿನ್ನಲು ರೆಸ್ಟೋರೆಂಟ್‌ಗಳಿಗೆ ಹೋಗುತ್ತಾರೆ. ಕೆಲವೊಮ್ಮೆ ಕೆಲವು ರೆಸ್ಟೋರೆಂಟ್‌ಗಳಲ್ಲಿ ಕುಳಿತುಕೊಳ್ಳಲು ಸ್ಥಳವಿರುತ್ತಿದೆ. ಕೆಲವು ಉತ್ತಮ ರೆಸ್ಟೋರೆಂಟ್‌ಗಳಲ್ಲಿ, ನೀವು ಒಂದು ದಿನ ಅಥವಾ ಎರಡು ದಿನ ಮುಂಚಿತವಾಗಿಯೇ ಟೇಬಲ್ ಬುಕ್ ಮಾಡಬೇಕು. ಆದರೆ ನಾವು ಹೇಳುತ್ತೀರುವ ರೆಸ್ಟೋರೆಂಟ್‌ ಹೋಗಬೇಕು ಎಂದರೆ ನೀವು ಬರೋಬ್ಬರಿ ನಾಲ್ಕು ವರ್ಷ ಕಾಯಾಲೇ ಬೇಕು.

ಯುಕೆಯಲ್ಲಿರುವ ಸಣ್ಣ ಪಬ್​ವೊಂದು ಸಖತ್​​ ಫೇಮಸ್​​​ ಆಗಿದೆ. UKಯ ಬ್ರಿಸ್ಟಲ್‌ನಲ್ಲಿರುವ The Bank Tavern ಎಂಬ ಸಣ್ಣ ಪಬ್​ನಲ್ಲಿ ಭಾನುವಾರ ಟೇಬಲ್ ಬುಕ್ ಮಾಡುವುದು ಸುಲಭವಲ್ಲ. ಭಾನುವಾರದಂದು ಇಲ್ಲಿ ಊಟವನ್ನು ಸವಿಯುವುದು ಸಾಮಾನ್ಯವಾಗಿದೆ. ಏಕೆಂದರೆ ಇಲ್ಲಿ ವಿಶೇಷವಾಗಿ ತಯಾರಿಸಿದ ಸಂಡೆ ರೋಸ್ಟ್ ಗಳಿಗೆ ಇಲ್ಲಿ ಜನ ನಾಲ್ಕು ವರ್ಷ ಕಾಯಬೇಕು. ಯಾಕೆಂದ್ರೆ ನಮ್ಮ ರೆಸ್ಟೋರೆಂಟ್​​ಗಾಗಿ ಈಗಾಗಲೇ ಬುಕ್​​ ಮಾಡಿರುವ ದೊಡ್ಡ ಪಟ್ಟಿಯೇ ದೊಡ್ಡದು ಇದೆ ಎನ್ನುತ್ತಾರೆ ರೆಸ್ಟೋರೆಂಟ್​​ ಮಾಲೀಕರು.

ಕರೋನಾ ಸಮಯದಲ್ಲಿ ದೇಶಾದ್ಯಂತ ಹೆಚ್ಚಿನ ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಬೇಕಾಯಿತು. ಇದರಿಂದಾಗಿ ಈ ಪಬ್‌ನಲ್ಲಿ ಸಂಡೇ ರೋಸ್ಟ್‌ಗಳಂತಹ ಪ್ರಿ-ಬುಕಿಂಗ್‌ಗಳ ವೇಟಿಂಗ್ ಲಿಸ್ಟ್ ಹೆಚ್ಚಾಗಿದೆ. ಈಗ ಬುಕ್ ಮಾಡುವವರು ಭಾನುವಾರದ ರೋಸ್ಟ್‌ಗಳನ್ನು ಆನಂದಿಸಲು ನಾಲ್ಕು ವರ್ಷಗಳವರೆಗೆ ಕಾಯಬೇಕಾಗುತ್ತದೆ. ಈ ರೋಸ್ಟ್‌ಗಳಲ್ಲಿ ವಿಶೇಷ ಭಕ್ಷ್ಯಗಳನ್ನು ನೀಡಲಾಗುತ್ತದೆ.

2018 ರಲ್ಲಿ ಬ್ರಿಸ್ಟಲ್ ಗುಡ್‌ಫುಡ್ ಅವಾರ್ಡ್ಸ್‌ನಲ್ಲಿ ಇದನ್ನು ಅತ್ಯುತ್ತಮ ಭಾನುವಾರದ ಊಟ ಎಂದು ಆಯ್ಕೆ ಮಾಡಲಾಗಿದೆ. 2019 ರಲ್ಲಿ, ಈ ಸಣ್ಣ ಪಬ್ ಅಬ್ಸರ್ವರ್ ಫುಡ್ ಮಾಸಿಕ ಮತ್ತು ಇತರ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.