Bollywood: ಕೇರಳದಲ್ಲಿ ಶೂಟಿಂಗ್ ನಡೆಸಿದ ನಂತರ ನಿರ್ದೇಶಕ ನೆಲ್ಸನ್ ಮತ್ತು ಅವರ ತಂಡವು ಚೆನ್ನೈನ ಆದಿತ್ಯರಾಮ್ ಸ್ಟುಡಿಯೋದಲ್ಲಿ ಮುಂದಿನ ಜೈಲರ್-2 ಚಿತ್ರೀಕರಣದ ಸಿದ್ಧತೆಗೆ ತೆರಳಿದ್ದಾರೆ. ಇಲ್ಲಿ ರಜನಿಕಾಂತ್ ಅಭಿನಯಿಸುವ ಚಿತ್ರವನ್ನು ಚಿತ್ರೀಕರಿಸಲು ಭವ್ಯವಾದ ಸೆಟ್ನ್ನು ನಿರ್ಮಿಸಿದ್ದಾರೆ. ಹಾಗೆಯೇ ಭಾಗ 1 ರಲ್ಲಿ ಚಲನಚಿತ್ರೋದ್ಯಮದಾದ್ಯಂತ ತಾರೆಯರು ನಟಿಸಿದ್ದರು, ಆದರೆ ಭಾಗ 2 ರಲ್ಲಿ ನೆಲ್ಸನ್ ಹೆಚ್ಚಿನ ನಟರನ್ನು ಸೇರ್ಪಡಿಸುವುದಾಗಿ ಪಟತೊಟ್ಟಿದ್ದಾರೆ.
ಜೈಲರ್ 2 ಚಿತ್ರಕ್ಕಾಗಿ ಸನ್ ಪಿಕ್ಚರ್ಸ್ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರನ್ನು ಸಿನಿಮಾ ತಂಡ ಆಯ್ಕೆ ಮಾಡಿಕೊಂಡಿದೆ ಎಂದು ತಿಳಿದುಬರುತ್ತಿದೆ. ಹಾಗೇ ವಿದ್ಯಾ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಾಗೇಯೇ ಶೂಟಿಂಗ್ಗಾಗಿ ಕೆಲವು ದಿನಗಳಿಂದ ಚೆನ್ನೈನಲ್ಲಿದ್ದು, ತಮ್ಮ ಪಾತ್ರದ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದಾರೆ ಎಂದು ವದಂತಿಗಳು ಕೇಳಿಬರುತ್ತಿವೆ.
ವಿದ್ಯಾ ಬಾಲನ್ ತಮಿಳು ಚಿತ್ರರಂಗದಲ್ಲಿ ಮಾತ್ರ ಹೆಸರು ಪಡೆಯುವುದಲ್ಲದೇ ದಕ್ಷಿಣ ಭಾರತದ ತಮಿಳುನಾಡಿನಲ್ಲೂ ಅನೇಕ ಅನುಯಾಯಿಗಳನ್ನು ಹೊಂದಿದ್ದಾರೆ. ಇವರು ಈ ಹಿಂದೆ ಅಜಿತ್ ಕುಮಾರ್ ಅವರ ನೇರ್ ಕೊಂಡ ಪಾರ್ವೈ (2019) ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ‘ಮಸ್ಕ್’ ಟೆಸ್ಲಾಗೆ ‘ಮಸ್ತ್’ ಬೇಡಿಕೆ!? ಇಲ್ಲಿಯವರೆಗೆ ಭಾರತದಲ್ಲಿ ಎಷ್ಟು ಕಾರುಗಳ ಆರ್ಡರ್? ಹೀಗಿದೆ ವರದಿ | Tesla Cars
ಜೈಲರ್ ಮೊದಲ ಭಾಗದಲ್ಲಿ ನಟಿಸಿದ್ದ ರಮ್ಯಾ ಕೃಷ್ಣನ್ ಮತ್ತು ಶಿವರಾಜ್ಕುಮಾರ್ ಮತ್ತೇ ಭಾಗ-2 ರಲ್ಲೂ ನಟಿಸುವುದು ಖಾತ್ರಿಯಾಗಿದೆ. ರಜನಿಕಾಂತ್ ಸಿನಿಮಾದಲ್ಲಿ ನಾಗಾರ್ಜುನ್ ಮತ್ತೊಮ್ಮೆ ಖಳನಾಯಕನಾಗಿ ಮಿಂಚಲಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 2025ಕ್ಕೆ ಚಿತ್ರೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ. (ಏಜೆನ್ಸೀಸ್)