ನ್ಯೂಸ್

50 ಚಿತ್ರಗಳಲ್ಲಿ ಸಿಗದ ಜನಪ್ರಿಯತೆ ಸಿಕ್ಕಿದ್ದು ಇದೊಂದು ಸಿನಿಮಾದಲ್ಲಿ! ಬದಲಾಯ್ತು ನಟಿಯ ಹೆಸರು | Actress

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ಕಳೆದ ತಿಂಗಳು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಜೂ. ಎನ್​ಟಿಆರ್​ ಅಭಿನಯದ 'ದೇವರ' ಸಿನಿಮಾ, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವಲ್ಲಿ ಯಶಸ್ವಿಯಾಯಿತು. ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ್ದೇ ಆದರೂ ಚಿತ್ರಮಂದಿರಗಳಲ್ಲಿ ಹೆಚ್ಚು ದಿನಗಳ ಕಾಲ ಮುಂದುವರಿಯುವಲ್ಲಿ ವಿಫಲವಾಯಿತು. ಸಂಕಲನ, ಸಂಗೀತ ಹಾಗೂ ಒಂದಷ್ಟು ಪಾತ್ರ ವರ್ಗಗಳಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡ ಈ ಸಿನಿಮಾ, ಓರ್ವ ನಟಿಯ (Actress) ವೃತ್ತಿಗೆ ಹೊಸ ಆಯಾಮವನ್ನೇ ನೀಡಿದೆ.

ನಟಿ ಲತಾ ವಿಶ್ವನಾಥ್​ ರೆಡ್ಡಿ

'ದೇವರ ಪಾಪ' ಎಂದೇ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಲತಾ ವಿಶ್ವನಾಥ್​ ರೆಡ್ಡಿ, ಇದೀಗ ತಮ್ಮ ಹೆಸರನ್ನು ತಾವೇ ಮರೆಯುವಂತೆ ಸಿನಿಪ್ರಿಯರು ಮಾಡಿದ್ದಾರೆ. ಅಷ್ಟರ ಮಟ್ಟಿಗೆ ದೇವರ ಪಾಪ ಎಂಬುದು ಅಭಿಮಾನಿಗಳ ಮನದಲ್ಲಿ ಕುಳಿತಿದೆ. ಚಿತ್ರದಲ್ಲಿ ಚಂದ್ರಕಲಾ ಪಾತ್ರವನ್ನು ನಿರ್ವಹಿಸಿದ ಲತಾ, ಇದೊಂದು ಪಾತ್ರದ ಮೂಲಕವೇ ಇಂದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

50ಕ್ಕೂ ಹೆಚ್ಚು ಸಿನಿಮಾಗಳಲ್ಲಿ

ಕಳೆದ 8 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಈ ನಟಿ. ಎಂಟು ವರ್ಷಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಆದರೆ, ಇಲ್ಲಿಯವರೆಗೂ ಸಿಗದ ಪ್ರೀತಿ, ಅಭಿಮಾನ, ಗುರುತಿಸುವಿಕೆ, ಹೆಸರು ಕೇವಲ ದೇವರ ಚಿತ್ರದಿಂದ ಸಿಕ್ಕಿದೆ ಎನ್ನುತ್ತಾರೆ ಲತಾ. ಈ ಚಿತ್ರದಲ್ಲಿನ ಚಂದ್ರಕಲಾ ಪಾತ್ರದಿಂದ ರಾತ್ರೋ ರಾತ್ರಿ ಸ್ಟಾರ್​ ಆದ ಬೆಡಗಿ ಈಕೆ ಎಂದರೆ ತಪ್ಪಾಗಲಾರದು. ಅದರಲ್ಲೂ ಇತ್ತೀಚಿಗೆ ರಿಲೀಸ್ ಆದ 'ಬಾಲ್ಗುಣಿ ಟಾಕೀಸ್'​ನಲ್ಲಿ ರೊಮ್ಯಾಂಟಿಕ್​ ಪಾತ್ರದಲ್ಲಿ ನಟಿ ನೋಡುಗರ ಗಮನಸೆಳೆದಿರುವುದು ವಿಶೇಷ,(ಏಜೆನ್ಸೀಸ್).