ಜಾಣಮರಿ ಜೋಗಪ್ಪನ ಅರಮನೆಯಲ್ಲಿ ಕನ್ನಡದ ಹುಡುಗ, ಮರಾಠಿ ಹುಡುಗಿಯ ಪ್ರೇಮಕಥೆ!

casccscc
Published on

ಅಗ್ನಿಸಾಕ್ಷಿ, ನಾಗಿಣಿ, ಕಮಲಿ ಸೇರಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಹಯವದನ ಆ್ಯಕ್ಷನ್​-ಕಟ್​ ಹೇಳುತ್ತಿರುವ ಸಿನಿಮಾ ಎಲ್ಲೋ ಜೊಗಪ್ಪ ನಿನ್ನರಮನೆ. ಈಗಾಗಲೇ ಹೌದಾ ಹುಲಿಯಾ ಎಂಬ ಹಾಡು ಬಿಡುಗಡೆಯಾಗಿದ್ದು, ಸಂಗೀತಪ್ರಿಯರ ಮೆಚ್ಚುಗೆ ಪಡೆದಿದೆ. ಅದರ ಬೆನ್ನಲ್ಲೇ ಜಂಕಾರ್​ ಮ್ಯೂಸಿಕ್​ನಲ್ಲಿ ಚಿತ್ರದ ಎರಡನೇ ಸಾಂಗ್​ ರಿಲೀಸ್​ ಮಾಡಲಾಗಿದೆ. ಜಾಣಮರಿ ಎಂದು ಸಾಗುವ ಈ ಹಾಡಿಗೆ ಶಿಯೋಮ್​ ಸಂಗೀತ, ಪ್ರಮೋದ್​ ಮರವಂತೆ ಸಾಹಿತ್ಯ ಮತ್ತು ರಕ್ಷಿತಾ ಸುರೇಶ್​ ಮತ್ತು ವಿಶಾಕ್​ ನಾಗಲಾಪುರ ಕಂಠದಲ್ಲಿ ಮೂಡಿಬಂದಿದೆ.

ಈ ರೊಮ್ಯಾಂಟಿಕ್​ ಸಾಂಗ್​ನಲ್ಲಿ ಕನ್ನಡದ ಹುಡುಗ ಮತ್ತು ಮರಾಠಿ ಹುಡುಗಿಯ ನಡುವಿನ ಪ್ರೇಮಸಲ್ಲಾಪವನ್ನು ಸೆರೆಹಿಡಿಯಲಾಗಿದ್ದು, ನಾಯಕ ಅಂಜನ್​ ನಾಗೇಂದ್ರ ಮತ್ತು ನಾಯಕಿ ವೆನ್ಯಾ ರೈ ಕಾಣಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಪಂಢರಾಪುರದಲ್ಲಿ ಇಡೀ ಹಾಡನ್ನು ಶೂಟಿಂಗ್​ ನಡೆಸಲಾಗಿದೆ. ಅಂಜನ್​, ವೆನ್ಯಾ ಜತೆ ಸಂಜನಾ ದಾಸ್​, ಬಿರಾದಾರ್​, ಶರತ್​ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್​ ಮಂಗಳೂರು, ಲಕ್ಷ್ಮೀ ನಾಡಗೌಡ ಪ್ರಮುಖ ತಾರಾಗಣದಲ್ಲಿದ್ದಾರೆ.

ಎಲ್ಲೋ ಜೋಗಪ್ಪ ನಿನ್ನರಮನೆ ಜರ್ನಿಯ ಕಥಾನಕ. ಜೊತೆಗೆ ಅಪ್ಪನ ಮಗನ ಬಾಂಧವ್ಯದ ಎಳೆಯೂ ಚಿತ್ರದಲ್ಲಿದೆ. ಬೆಂಗಳೂರಿನಿಂದ ಶುರುವಾಗುವ ಪ್ರಯಾಣ ಹಿಮಾಲಯದವರೆಗೆ ಸಾಗುತ್ತದೆ. ಹಲವು ರಾಜ್ಯಗಳ ಹತ್ತಾರು ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net