ನ್ಯೂಸ್

ಶ್ರೀದೇವಿ, ರೇಖಾ ಪ್ಲಾಸ್ಟಿಕ್​ ಸರ್ಜರಿ ಬ್ಯೂಟೀಸ್​! ಸನ್ಯಾಸತ್ವ ಪಡೆದ ಮಮತಾ ಕುಲಕರ್ಣಿ ಬಿಚ್ಚುನುಡಿಗೆ ಬೆಚ್ಚಿತ್ತು ಬಾಲಿವುಡ್​ | Mamta Kulkarni

Mamta Kulkarni: ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿದ 90ರ ದಶಕದಲ್ಲಿ ಬಾಲಿವುಡ್​ ಅಂಗಳದಲ್ಲಿ ಮಿಂಚಿ ಕಣ್ಮರೆಯಾಗಿದ್ದ ಹಾಟ್​ ಬ್ಯೂಟಿ ಮಮತಾ ಕುಲಕರ್ಣಿ (52), 25 ವರ್ಷಗಳ ನಂತರ ಮಹಾಕುಂಭ ಮೇಳದಲ್ಲಿ ಭಾಗಿಯಾಗಿ, ಸನ್ಯಾಸಿನಿ ಆಗಲು ಇಚ್ಚಿಸಿರುವುದು ಸದ್ಯ ಅವರ ಅಭಿಮಾನಿಗಳನ್ನು ಅಕ್ಷರಶಃ ಅಚ್ಚರಿಗೆ ದೂಡಿದೆ. ದೀಕ್ಷೆ ಪಡೆದ ಬೆನ್ನಲ್ಲೇ ನಟಿಗೆ ಹೊಸದಾಗಿ ಹೆಸರಿಡಲಾಗಿದೆ. "ಮೈ ಮಮತಾ ನಂದ ಗಿರಿ" ಎಂಬ ಹೆಸರಿನಲ್ಲಿ ಇನ್ಮುಂದೆ ಅವರನ್ನು ಸಂಬೋಧಿಸಿ ಮಾತನಾಡಿಸಲಾಗುತ್ತದೆ. 25 ವರ್ಷಗಳಿಂದ ಭಾರತದತ್ತ ತಿರುಗಿ ನೋಡದ ಹಾಟ್​ ಬ್ಯೂಟಿ, 90ರ ದಶಕದಲ್ಲಿ ಬಾಲಿವುಡ್​ನಲ್ಲಿ ಮಾಡಿಕೊಂಡ ವಿವಾದಗಳು ಒಂದೆರೆಡಲ್ಲ.

ಬಿಚ್ಚುನುಡಿ

ಅಂದು ಬಾಲಿವುಡ್​ ಅಂಗಳದಲ್ಲಿ ಉತ್ತುಂಗದಲ್ಲಿದ್ದ ಮಮತಾ, ಉದ್ಯಮದಲ್ಲಿ ತಮ್ಮದೇ ಆದ ಹೆಸರನ್ನು ಸ್ಥಾಪಿಸಿಕೊಂಡಿದ್ದರು. ಯಾರ ಹೇಳಿಕೆಗೂ, ಟೀಕೆಗೂ ಬಗ್ಗದ ನಟಿ, ತಮ್ಮ ನೇರನುಡಿ, ಮುಕ್ತ ಮನಸ್ಸಿನ ಮಾತುಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರು. ಜಾಲತಾಣದ ಅಸ್ತಿತ್ವವಿಲ್ಲದ ಆ ಸಮಯದಲ್ಲೇ ಸಂದರ್ಶನಗಳಲ್ಲಿ ಆಕೆ ಕೊಡುತ್ತಿದ್ದ ಒಂದೊಂದು ಹೇಳಿಕೆಗೆಳು ಇಡೀ ಚಿತ್ರರಂಗವನ್ನೇ ನಡುಗಿಸುತ್ತಿತ್ತು. ಸ್ಟಾರ್​ ನಟಿ-ನಟರ ಬಗ್ಗೆ ಮಮತಾ ಕುಲಕರ್ಣಿ ಬಿಚ್ಚುನುಡಿಗಳು ಭಾರೀ ಸಂಚಲನ ಸೃಷ್ಟಿಸುತ್ತಿತ್ತು.

ಮುಖಕ್ಕೆ ಹೊಡೆಯುವಂತೆ ಮಾತು

90ರ ದಶಕದಲ್ಲಿ ತಮ್ಮೊಂದಿಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಶ್ರೀದೇವಿ ಮತ್ತು ರೇಖಾ ವಿರುದ್ಧ ಗುಡುಗಿದ್ದ ಮಮತಾ ಕುಲಕರ್ಣಿ, "ನನಗೆ ಸಿನಿಮಾ ಹಿನ್ನೆಲೆ ಇರಲಿಲ್ಲ. ಬಹುತೇಕರಿಗೆ ಒಬ್ಬೊಬ್ಬರು ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ, ನಾನು ಯಾರ ಮೇಲೂ ಅವಲಂಬಿತಳಾಗಿಲ್ಲ. ನಾನು ಸ್ವಂತವಾಗಿ ಕಲಿತಿದ್ದೇನೆ. ನನಗೆ ಒಳ್ಳೆಯ ಮುಖ ಲಕ್ಷಣ, ಸೌಂದರ್ಯವಿದೆ. ಅದು ನನಗೆ ಗೊತ್ತಿತ್ತು. ಅದರಿಂದಲೇ ಮುಂದುವರಿದೆ. ಆದರೆ, ಚಿತ್ರರಂಗದಲ್ಲಿ ಕೆಲವು ನಟಿಯರಿಗೆ ಆ ಬ್ಯೂಟಿ ಇರಲಿಲ್ಲ. ಮೊದಲನೆಯದಾಗಿ, ಕಲಾವಿದೆ ಎಂದರೆ ನಿಮಗೊಂದು ಸುಂದರವಾದ ಮುಖವಿರಬೇಕು" ಎಂದಿದ್ದರು.

ಮಹಾಕುಂಭ ಮೇಳ

"ಆದರೆ, ಕೆಲವು ಮಹಿಳೆಯರಿಗೆ ಅದು ಇರಲಿಲ್ಲ. ಶ್ರೀದೇವಿ ಮತ್ತು ರೇಖಾ ಸಂಪೂರ್ಣವಾಗಿ ಸೌಂದರ್ಯವರ್ಧಕ ಸುಂದರಿಯರು. ಚಿತ್ರರಂಗದಲ್ಲಿ ಇತರರ ಸಹಾಯದಿಂದ ಅವರು ಇಲ್ಲಿಯವರೆಗೂ ಸಾಗಿದ್ದಾರೆ ಹಾಗೂ ಸಾಧಿಸಿದ್ದಾರೆ" ಎಂದು ನೇರವಾಗಿ ಆರೋಪಿಸಿದ್ದರು. ಈ ವಿಷಯ ಅಂದು ಬಾಲಿವುಡ್​ನಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿತು. ಸದ್ಯ ಇಷ್ಟೆಲ್ಲಾ ಸದ್ದು ಮಾಡಿದ್ದ ಮಮತಾ ಕುಲಕರ್ಣಿ, 2000ದಲ್ಲೇ ಬಾಲಿವುಡ್​ಗೆ ಗುಡ್​ಬೈ ಹೇಳುತ, ಭಾರತವನ್ನು ತೊರೆದರು. 25 ವರ್ಷಗಳ ಕಾಲ ದೇಶದಿಂದ ದೂರ ಉಳಿದಿದ್ದ ಮಮತಾ, ಸನ್ಯಾಸತ್ವ ಸ್ವೀಕಾರಕ್ಕಾಗಿ ಭಾರತದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆಗಮಿಸಿದರು. ಈಗ ದೀಕ್ಷೆಯನ್ನು ಪಡೆದು, ಆಧ್ಯಾತ್ಮದತ್ತ ಮುಖ ಮಾಡಿರುವುದು  ನಿಜಕ್ಕೂ ಅಚ್ಚರಿಯೇ.,(ಏಜೆನ್ಸೀಸ್).