RCB ಪರ ಎಬಿ ಡಿವಿಲಿಯರ್ಸ್ ಆಡಬಾರದಿತ್ತು! ಕಾರಣ...: ಫ್ರಾಂಚೈಸಿ ಕುರಿತು ಸಂಜಯ್ ಮಂಜ್ರೇಕರ್ ಅಪಹಾಸ್ಯ

ವಿಜಯವಾಣಿ - 2025-01-28T070800.308
Published on

RCB: ಐಪಿಎಲ್​ ಇತಿಹಾಸದಲ್ಲಿ ಇಲ್ಲಿಯವರೆಗೆ ಒಂದು ಬಾರಿಯೂ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಈ ಬಾರಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಪ್ ಎತ್ತಲಿದೆ ಎಂಬ ವಿಶ್ವಾಸ ಅಭಿಮಾನಿಗಳದ್ದು. ಇದೇ ಭರವಸೆ, ಉತ್ಸಾಹದಿಂದ ಮಾರ್ಚ್​21ರಿಂದ ಶುರುವಾಗಲಿರುವ 2025ರ ಐಪಿಎಲ್​ ಪಂದ್ಯಗಳನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ ಸಂಜಯ್ ಮಂಜ್ರೇಕರ್ ಆರ್​ಸಿಬಿ ಫ್ರಾಂಚೈಸಿಯನ್ನು ಅಪಹಾಸ್ಯ ಮಾಡಿದ್ದಾರೆ.

ಒಂದಷ್ಟು ವರ್ಷಗಳ ಕಾಲ ಆರ್​ಸಿಬಿ ತಂಡಕ್ಕೆ ಆಪತ್ಭಾಂಧವನಾಗಿ ಆಡಿದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಆರ್​ಸಿಬಿ ತಂಡದ ಮಿ.360 ಎಬಿ ಡಿವಿಲಿಯರ್ಸ್​, ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಕ್ರಿಕೆಟ್​ ಅಭಿಮಾನಿಗಳು ಪರಿಗಣಿಸಿದ್ದಾರೆ.  "ನನ್ನ ಪ್ರಕಾರ, ಎಬಿ ಡಿವಿಲಿಯರ್ಸ್ ಅವರು ಆರ್​ಸಿಬಿ ಪರ ಆಡಬಾರದಿತ್ತು. ಆ ತಂಡಕ್ಕೆ ಎಬಿಡಿ ಹೋಗಬಾರದಿತ್ತು. ಕಾರಣ, ಅವರಲ್ಲಿದ್ದ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಆರ್​ಸಿಬಿ ಸಂಪೂರ್ಣವಾಗಿ ಎಡವಿತು" ಎಂದು ಮಂಜ್ರೇಕರ್ ಟೀಕಿಸಿದ್ದಾರೆ.

ಮಿ..360 ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಚರ್ಚೆಯಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಭಾರತದ ಸೂರ್ಯಕುಮಾರ್ ಯಾದವ್‌ರನ್ನು ಹೋಲಿಕೆ ಮಾಡುತ ಮಾತನಾಡಿದ ಮಂಜ್ರೇಕರ್, "ಎಬಿಡಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಒಬ್ಬ ಶ್ರೇಷ್ಠ ಆಟಗಾರ. ಆದ್ರೆ, ಟಿ20 ವಿಷಯದಲ್ಲಿ ನಾನು ಅದನ್ನು ಒಪ್ಪಲ್ಲ. ಟಿ20 ಕ್ರಿಕೆಟ್‌ನಲ್ಲಿ ಡಿವಿಲಿಯರ್ಸ್‌ನ ಪೂರ್ಣ ಸಾಮರ್ಥ್ಯವನ್ನು ಆರ್​ಸಿಬಿ ಅಂದು ನಿರ್ಬಂಧಿಸಿತು. ಅವರನ್ನು ಸರಿಯಾಗಿ ಬಳಿಸಿಕೊಳ್ಳಲಿಲ್ಲ. ಅವರಿಂದ ಇನ್ನೂ ಒಳ್ಳೆಯ ಬ್ಯಾಟಿಂಗ್​ ಸ್ಕಿಲ್ಸ್​ಗಳಿತ್ತು. ನನ್ನ ಪ್ರಕಾರ, ಎಬಿಡಿ ಆರ್​ಸಿಬಿ ತಂಡದಲ್ಲಿ ಆಡಬಾರದಿತ್ತು" ಎಂದು ಮಂಜ್ರೇಕರ್​ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net