Baba Vanga Prediction : 2024 ಮುಗಿದು 2025ರ ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹೊಸ ವರ್ಷದಲ್ಲಾದರೂ ತಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರಿದ್ದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ತೀವ್ರ ಕುತೂಹಲ ಹೊಂದಿರುತ್ತಾರೆ.
ಅಂದಹಾಗೆ 2025ರಲ್ಲಿ 4 ರಾಶಿಯವರು ಆರ್ಥಿಕವಾಗಿ ಉತ್ತಮ ಪ್ರಗತಿ ಕಾಣುತ್ತಾರೆ ಎಂಬುದನ್ನು ಬಲ್ಗೇರಿಯನ್ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಬಹಳ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದಾರೆ. ಯಾವ 4 ರಾಶಿಯವರಿಗೆ ಹೊಸ ವರ್ಷದಲ್ಲಿ ಅಪಾರ ಸಂಪತ್ತು ಹರಿದುಬರಲಿದೆ ಎಂಬುದನ್ನು ತಿಳಿದುಕೊಳ್ಳುವ ಮುನ್ನ ಬಾಬಾ ವಂಗಾರ ಕಿರು ಪರಿಚಯ ಮಾಡಿಕೊಳ್ಳೋಣ.
ಬಲ್ಗೇರಿಯನ್ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.
ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್ ಸುನಾಮಿ, ಬರಾಕ್ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.
ಮೇಷ ರಾಶಿ: ವೈರಲ್ ಆಗುತ್ತಿರುವ ಬಾಬಾ ವಂಗಾ ಭವಿಷ್ಯವಾಣಿಯ ಪ್ರಕಾರ, ಮೇಷ ರಾಶಿಯ ಜನರು 2025ರಲ್ಲಿ ಬಹಳ ಪ್ರಬಲ ಸ್ಥಾನದಲ್ಲಿರುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ಸು ಅವರ ಪಾದಗಳನ್ನು ಮುತ್ತಿಕ್ಕುತ್ತದೆ ಮತ್ತು ಅವರ ಸ್ಥಾನಮಾನವೂ ಹೆಚ್ಚಾಗುತ್ತದೆ. 2024ರಲ್ಲಿ ಮೇಷ ರಾಶಿಯವರಿಗೆ ಯಾವುದೇ ಅದೃಷ್ಟ ಇರಲಿಲ್ಲ. ಆದರೆ, ಈ ವರ್ಷ ಜೀವನದಲ್ಲಿ ಯಶಸ್ಸು ಕೂಡಿಬರುತ್ತದೆ ಎಂದು ಬಾಬಾ ವಂಗಾ ಹೇಳಿದ್ದಾರೆ.
ವೃಷಭ ರಾಶಿ: ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ, ವೃಷಭ ರಾಶಿಯವರಿಗೆ 2025 ಕಠಿಣ ಪರಿಶ್ರಮದ ವರ್ಷವಾಗಿರುತ್ತದೆ. ಆದರೆ, ತಮ್ಮ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯಲಿದ್ದಾರೆ. ಈ ವರ್ಷ ಈ ರಾಶಿಯವರು ದೊಡ್ಡ ಖ್ಯಾತಿಯನ್ನು ಗಳಿಸುತ್ತಾರೆ ಮತ್ತು ಆರ್ಥಿಕವಾಗಿ ಸ್ಥಿರತೆಯನ್ನು ಸಹ ಪಡೆಯುತ್ತಾರೆ. ಇದಿಷ್ಟೇ ಅಲ್ಲದೆ, ನಿಮ್ಮ ಕೆಲಸಕ್ಕೆ ತಕ್ಕಂತೆ ಉತ್ತಮ ವೇತನ ಸಹ ಸಿಗಲಿದೆ.
ಮಿಥುನ ರಾಶಿ: 2025 ರ ವರ್ಷವು ಮಿಥುನ ರಾಶಿಯವರಿಗೆ ಬದಲಾವಣೆಗಳಿಂದ ತುಂಬಿರುತ್ತದೆ. ನೀವು ಬಹಳ ವರ್ಷದಿಂದ ಪ್ಲಾನ್ ಮಾಡಿದ್ದ ಎಲ್ಲ ವಿಷಯಗಳನ್ನು ಈ ವರ್ಷ ನೀವು ಸಾಧಿಸುವಿರಿ. ನಿಮ್ಮ ಜೀವನವು ಸಂತೋಷದಿಂದ ತುಂಬಿರುತ್ತದೆ ಮತ್ತು ನೀವು ಇದ್ದಕ್ಕಿದ್ದಂತೆ ಹಲವಾರು ಪ್ರಯೋಜನಗಳನ್ನು ಪಡೆಯುತ್ತೀರಿ. ಕೆಲಸದಲ್ಲಿ ಕಠಿಣ ಪ್ರಯತ್ನ ವಹಿಸಬೇಕಾಗುತ್ತದೆ ಮತ್ತು ಹಣದ ಒಳಹರಿವು ಕೂಡ ಅನಿಯಮಿತವಾಗಿರುತ್ತದೆ
ಕರ್ಕಾಟಕ ರಾಶಿ: ಈ ರಾಶಿಯವರು 2025ರಲ್ಲಿ ಅನೇಕ ಪ್ರಮುಖ ಅವಕಾಶಗಳನ್ನು ಪಡೆಯುತ್ತಾರೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ನೀವು ಹಣಕಾಸಿನ ಪ್ರಯೋಜನಗಳನ್ನು ಸಹ ಪಡೆಯಬಹುದು. ಎಲ್ಲ ಗ್ರಹಗಳು ಅನುಕೂಲಕರ ಸ್ಥಾನದಲ್ಲಿರುವುದರಿಂದ, ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹೊಸ ವ್ಯಾಪಾರ ಆರಂಭಿಸಲು ಅವಕಾಶವಿರುತ್ತದೆ.
ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ ಮುಂಬರುವ ವರ್ಷದಲ್ಲಿ ಅಂದರೆ, 2025ರಲ್ಲಿ ಯುರೋಪಿನಲ್ಲಿ ಭಾರಿ ಯುದ್ಧದ ಮುನ್ಸೂಚನೆ ನೀಡಿದ್ದಾರೆ. ಈ ಯುದ್ಧದಿಂದ ವ್ಯಾಪಕ ವಿನಾಶ ಮತ್ತು ಗಮನಾರ್ಹ ಜನಸಂಖ್ಯೆಯಷ ನಷ್ಟಕ್ಕೆ ಕಾರಣವಾಗುತ್ತದೆಯಂತೆ. ಈ ಯುದ್ಧವು ಯುರೋಪ್ ಖಂಡವನ್ನೇ ಧ್ವಂಸಗೊಳಿಸುತ್ತದೆಯಂತೆ. 2025ರಲ್ಲಿ ನಡೆಯುವ ಘಟನೆಗಳು ಜಾಗತಿಕ ವಿನಾಶದ ಆರಂಭಕ್ಕೆ ಕಾರಣವಾಗಿ, 5079ಕ್ಕೆ ವಿಶ್ವವೇ ಅಂತ್ಯವಾಗಲಿದೆ. ಅಂದರೆ, 2025ರಿಂದ ಜಗತ್ತಿನ ವಿನಾಶ ಆರಂಭವಾಗಲಿದೆ ಎಂದು ಬಾಂಬಾ ವಂಗಾ ಭಯಾನಕ ಭವಿಷ್ಯ ನುಡಿದಿದ್ದಾರೆ.
ಇನ್ನು 2025ರಲ್ಲಿ ಸೈಬರ್ ದಾಳಿಯ ಮುನ್ಸೂಚನೆ ನೀಡಲಾಗಿದೆ. ನೀರು, ಶಕ್ತಿ ಮತ್ತು ಸಂವಹನ ವ್ಯವಸ್ಥೆಗಳನ್ನು ಒಳಗೊಂಡಂತೆ ಅಗತ್ಯ ಜಾಗತಿಕ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡು ಸಂಘಟಿತ ಸೈಬರ್ ದಾಳಿ ನಡೆಯಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಜಾಗತಿಕವಾಗಿ ಹೆಚ್ಚುತ್ತಿರುವ ಸೈಬರ್ ದೋಷಗಳಿಂದ ಭವಿಷ್ಯದಲ್ಲಿ ಸೈಬರ್ ವಾರ್‌ಫೇರ್ ಮತ್ತು ಡಿಜಿಟಲ್ ಮೂಲಸೌಕರ್ಯದ ದುರ್ಬಲತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.
ಇನ್ನು ಹವಾಮಾನ ಬದಲಾವಣೆಗಳಿಗೆ ಸಂಬಂಧಿಸಿದ ಪರಿಸರ ವಿಪತ್ತುಗಳು ಕೂಡ ಬಾಬಾ ವಂಗಾರ 2025ರ ಮುನ್ಸೂಚನೆಯ ಭಾಗವಾಗಿದೆ. ಭೂಮಿಯ ಕಕ್ಷೆಯಲ್ಲಿನ ಬದಲಾವಣೆಗಳಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಲಿದ್ದು, ವಿನಾಶಕಾರಿ ಬರಗಳು, ಕಾಡ್ಗಿಚ್ಚುಗಳು ಮತ್ತು ಬಿರುಗಾಳಿಗಳಿಗೆ ಕಾರಣವಾಗುತ್ತದೆ ಎಂದು ವಂಗಾ ಹೇಳಿದ್ದಾರೆ. ಇದೆಲ್ಲದರ ನಡುವೆ ಪಾಸಿಟಿವ್ ಅಂಶವೇನೆಂದೆರೆ, 2025ರಲ್ಲಿ ವೈದ್ಯಕೀಯ ಪ್ರಗತಿಯನ್ನು ಬಾಬಾ ವಂಗಾ ಊಹಿಸಿದ್ದಾರೆ. ನಿರ್ದಿಷ್ಟವಾಗಿ ಲ್ಯಾಬ್ನಲ್ಲಿ ಬೆಳೆದ ಮಾನವ ಅಂಗಗಳಿಂದ ಜೀವಿತಾವಧಿಯನ್ನು ತೀವ್ರವಾಗಿ ಸುಧಾರಿಸಬಹುದು ಎಂದು ಬಾಬಾ ವಂಗಾ ಹೇಳಿದ್ದಾರೆ.
ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.