ಈ ಕುರಿತಂತೆ ಮುಂದಿನ ಸಚಿವ ಸಂಪುಟದಲ್ಲಿ ಇದೇ ವಿಚಾರವನ್ನು ಚರ್ಚೆ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ(ಏ.17) ನಡೆದ ಮಹತ್ವದ ಸಂಪುಟಸಭೆಯಲ್ಲಿ ಜಾತಿಗಣತಿ ವರದಿ ಜಾರಿಗೆ ಸಚಿವರ ತೀವ್ರ ಪ್ರತಿರೋಧ ಹಿನ್ನೆಲೆ, ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಕೊಳ್ಳಬಹುದು ಎಂದು ಹೇಳಲಾಗಿದೆ.
Caste Census Report: 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ (Caste Census) ವರದಿ ಜಾರಿ ವಿಚಾರದಲ್ಲಿ ಸದ್ಯಕ್ಕೆ ಸಾಕಷ್ಟು ಚರ್ಚೆಯಾಗುತ್ತಿದ್ದು, ತಾರ್ಕಿಕ ಅಂತ್ಯ ಕಾಣದಾಗಿದೆ.
ಜೊತೆಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಹ ಮಾತನಾಡಿದ್ದು, ಸಭೆಯಲ್ಲಿ ಚರ್ಚೆ ನಡೆದಿದೆ, ನಾನು ನನ್ನ ಅಭಿಪ್ರಾಯವನ್ನು ಮುಂದೆ ವ್ಯಕ್ತಪಡಿಸಬೇಕಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮುಂದುವರಿಯಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಇಂದು ನಡೆದ ಸಭೆಯಲ್ಲಿ ಸಚಿವರು ಅವರವರ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ವರದಿಯನ್ನು ಯಾರೂ ವಿರೋಧಿಸಿಲ್ಲ ಎಂದಿದ್ದಾರೆ.
ಇನ್ನೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಹ ಮಾತನಾಡಿದ್ದು, ಈ ವರದಿಯಲ್ಲಿ ಪರ-ವಿರೋಧ ಎಂದು ಇಲ್ಲ. ವೈಯಕ್ತಿಕವಾಗಿ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಚಿವರು ಇನ್ನಷ್ಟು ಮಾಹಿತಿ ಕೇಳಿದ್ದಾರೆ. ಏನೇನು ಬೇಕು ಅದೆಲ್ಲವನ್ನೂ ಕೊಡಲಿದ್ದಾರೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸಹಕಾರ ಸಚಿವ ಎಂದು ಕೆ.ಎನ್. ರಾಜಣ್ಣ, ಇಂದಿನ ಚರ್ಚೆ ಅಪೂರ್ಣವಾಗಿದೆ, ಮತ್ತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮುಂದುವರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು, ಎಲ್ಲ ಸಚಿವರು ತಮ್ಮಲ್ಲಿರುವ ಸಂಶಯಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಮುಂದಿನ ಸಭೆಯಲ್ಲಿ ವಿಸ್ಕೃತ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈ ತಿಂಗಳಲ್ಲಿ ಜನಿಸಿದವರಿಗೆ ಬೊಜ್ಜಿನ ಸಮಸ್ಯೆ ಬರೋದು ಸಾಮಾನ್ಯ? ಇದು ಜ್ಯೋತಿಷ್ಯವಲ್ಲ; ವಿಜ್ಞಾನಿಗಳೇ ಖಚಿತಪಡಿಸಿದ್ದಾರೆ| Health
ಅಲ್ಲದೆ, ಎಲ್ಲರ ಅಭಿಪ್ರಾಯಗಳನ್ನು ಬರವಣಿಗೆ (ಲಿಖಿತ) ರೂಪದಲ್ಲಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಸಲಹೆ ನೀಡಿದ್ದಾರೆ. ಜಾತಿ ಜನಗಣತಿ ವರದಿ ಸೋರಿಕೆಯಲ್ಲ. ಅಧಿಕೃತ ವರದಿಯಲ್ಲಿರುವ ದತ್ತಾಂಶಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಮೆ.2ರಂದು ವಿಶೇಷ ಕ್ಯಾಬಿನೆಟ್ ಸಭೆ ನಡೆಯಲಿದೆ ಎಂದು ಬಳಿಕ ಎಚ್.ಕೆ.ಪಾಟೀಲ್ ಹೇಳಿದ್ದಾರೆ.