ಶಿವಮೊಗ್ಗ : ಜೆಸಿಬಿ ಬಳಸಿ ಎಟಿಎಂ ಲೂಟಿ ಮಾಡಲು ಯತ್ನಿಸಿರುವ ಘಟನೆ ಶಿವಮೊಗ್ಗದ ವಿನೋಬನಗರದ ಶಿವಾಲಯ ಬಳಿ ತಡರಾತ್ರಿ ಘಟನೆ ನಡೆದಿದೆ.
ಇದನ್ನೂ ಓದಿ: ನೀನು ಮುಸ್ಲಿಂ..ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲವೆಂದು ವಿದ್ಯಾರ್ಥಿನಿಯನ್ನು ಕೆಳಗಿಳಿಸಿದ ಬಸ್ ಚಾಲಕ
ಶಿವಾಲಯದ ಮುಂಭಾಗ ಇರುವ ಆಕ್ಸಿಸ್ ಬ್ಯಾಂಕ್ನ ಎಟಿಎಂ ಇದಾಗಿದೆ. ಕಳ್ಳ ಜೆಸಿಬಿ ಬಳಸಿ, ಎಟಿಎಂ ಸಂಪೂರ್ಣ ಜಖಂಗೊಳಿಸಿದ್ದಾನೆ. ಪೊಲೀಸ್ ಬರುವುದು ನೋಡಿ, ಜೆಸಿಬಿ ಸ್ಥಳದಲ್ಲೇ ಬಿಟ್ಟು ಕಳ್ಳ ಪರಾರಿಯಾಗಿದ್ದಾನೆ.
ಕಳ್ಳತನ ಮಾಡಿಕೊಂಡು ಬಂದ ಜೆಸಿಬಿಯಿಂದಲೇ ಎಟಿಎಂ ಲೂಟಿಗೆ ಯತ್ನಿಸಿರುವುದು ವಿಫಲವಾಗಿದೆ. ಜೆಸಿಬಿ ವಶಕ್ಕೆ ಪಡೆದ ಪೊಲೀಸರು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನೇಕ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲದ ಹಿನ್ನೆಲೆ, ಮತ್ತೇ ನಗರಗಳಲ್ಲಿ ಎಟಿಎಂ ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ ಎನ್ನಲಾಗಿದೆ.