ನ್ಯೂಸ್

ಜಂಕ್ ಫುಡ್ ತಿನ್ನಬೇಡ ಎಂದಿದ್ದಕ್ಕೆ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ!

ನಾಗಪುರ: ಜಂಕ್ ಫುಡ್ ತಿಂದಿದ್ದಕ್ಕೆ ತಂದೆ ನಿಂದಿಸಿದ್ದರಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ)ಯ 19 ವರ್ಷದ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಾಗಪುರದ ಸಿಂಧಿ ಕಾಲೋನಿ ನಿವಾಸಿ ಭೂಮಿಕಾ ವಿನೋದ್ ಧನ್ವಾನಿ ಮೃತ ದುರ್ದೈವಿ.

ಭೂಮಿಕಾ ಬಿಬಿಎ ವಿದ್ಯಾರ್ಥಿನಿಯಾಗಿದ್ದು, ಥೈರಾಯ್ಡ್ ಸಮಸ್ಯೆ ಇತ್ತು. ಜಂಕ್ ಫುಡ್ ತಿಂದಿದ್ದಕ್ಕೆ ತಂದೆ ಗದರಿಸಿದ್ದರಿಂದ ಬೇಸರಗೊಂಡು ಅಡುಗೆ ಕೋಣೆಯಲ್ಲಿ ಉದ್ದನೆಯ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರತಾಪ್ ನಗರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

"ಆಕೆಯ ಕುಟುಂಬ ಸದಸ್ಯರು ಗುರುವಾರ ಬೆಳಗ್ಗೆ ನೇಣು ಬಿಗಿದುಕೊಂಡಿರುವುದನ್ನು ಕಂಡುಕೊಂಡರು, ನಂತರ ಆಕೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಯಿತು" ಎಂದು ಅವರು ಹೇಳಿದರು, ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ.