More

    ಸ್ವೀಡಿಷ್ ಸಂಸತ್​ ಉಡಾಯಿಸಲು ಯೋಜಿಸಿದ್ದ ಐಸಿಸ್ ಉಗ್ರರು ಜರ್ಮನಿಯಲ್ಲಿ ಅರಸ್ಟ್​..

    ಬರ್ಲಿನ್: ಸ್ವೀಡನ್‌ನಲ್ಲಿ ಭಯೋತ್ಪಾದಕ ದಾಳಿಗೆ ಯೋಜನೆ ರೂಪಿಸಿದ ಇಬ್ಬರು ಶಂಕಿತರನ್ನು ಜರ್ಮನ್ ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಇಸ್ಲಾಮಿಕ್ ಸ್ಪೇಟ್ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರು ಎಂದು ಶಂಕಿಸಲಾಗಿದೆ.

    ಇದನ್ನೂ ಓದಿ: ‘ಮಗು ಕಾನೂನುಬದ್ಧವಾಗಿ ಜನಿಸಿಲ್ಲ, ದಾಖಲೆ ಸಲ್ಲಿಸಬೇಕು’: ಸಿದ್ದು ಮೂಸಾವಾಲ ಕುಟುಂಬದ ವಿರುದ್ಧ ಸರ್ಕಾರ ಪ್ರಶ್ನೆ ಎತ್ತಿರುವುದೇಕೆ?

    ಯೋಜನೆ ಸಿದ್ಧಪಡಿಸಲು ಜರ್ಮನಿಗೆ ಬಂದಿದ್ದ ಭಯೋತ್ಪಾದಕರಾದ ಇಬ್ರಾಹಿಂ ಮತು ರಮಿನ್ ಆಗಲೇ ಎರಡು ಸಾವಿರ ಯರೋ ದೇಣಿಗೆ ಸಂಗ್ರಹಿಸಿದ್ದರು.

    ಅವರ ಗುರಿ ಸ್ವೀಡಿಷ್ ಸಂಸತ್ತಾಗಿತ್ತು. ಅವರ ಸಂಪೂರ್ಣ ಮಾಹಿತಿ ಕಲೆಹಾಕಿದ ನಂತರವೇ ಸೆರೆಹಿಡಿಯಲಾಯಿತು. ಇಬ್ಬರೂ ಅಫ್ಘಾನಿಸ್ತಾನದ ಪ್ರಜೆಗಳು. ಸ್ವೀಡನ್‌ನಲ್ಲಿ ಕುರಾನ್ ಸುಟ್ಟ ಪ್ರತಿಭಟನೆಗೆ ಪ್ರತೀಕಾರವಾಗಿ ಸಂಸತ್ತಿನ ಮೇಲೆ ದಾಳಿ ನಡೆಸಲು ಯೋಜಿಸಲಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳುತ್ತಾರೆ.

    ಸ್ಟಾಕ್‌ಹೋಮ್‌ನಲ್ಲಿರುವ ಸಂಸತ್​​​​ ಕಟ್ಟಡದ ಮೇಲೆ ದಾಳಿ ಮಾಡಿ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಕೊಲ್ಲುವುದು ಅವರ ಗುರಿಯಾಗಿತ್ತು. ಪ್ರತಿಭಟನಾಕಾರರು ಸ್ವೀಡನ್‌ನಲ್ಲಿ ಕುರಾನ್ ಅನ್ನು ಸುಟ್ಟುಹಾಕಿದ ನಂತರ, ಇಸ್ಲಾಮಿಕ್ ಸ್ಟೇಟ್ ಅವರಿಗೆ 2023 ರಲ್ಲಿ ದಾಳಿ ಕಾರ್ಯಾಚರಣೆಯನ್ನು ನಿಯೋಜಿಸಿದೆ ಎಂದು ಕಂಡುಬಂದಿದೆ.

    ಶಹನಾ ಆತ್ಮಹತ್ಯೆ: ರುವೈಸ್ ಗೆ ಹೈಕೋರ್ಟ್‌ನಲ್ಲಿ ಉಲ್ಟಾ ಹೊಡೆದಿದ್ದು, ವ್ಯಾಸಂಗ ಮುಂದುವರಿಸಲು ಸಾಧ್ಯವಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts