More

    ಶಹನಾ ಆತ್ಮಹತ್ಯೆ: ರುವೈಸ್ ಗೆ ಹೈಕೋರ್ಟ್‌ನಲ್ಲಿ ಉಲ್ಟಾ ಹೊಡೆದಿದ್ದು, ವ್ಯಾಸಂಗ ಮುಂದುವರಿಸಲು ಸಾಧ್ಯವಿಲ್ಲ…

    ಕೊಚ್ಚಿ: ತಿರುವನಂತಪುರಂ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಡಾ.ಶಹನಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಡಾ.ಇ.ಎ.ರುವೈಸ್​ಗೆ ವ್ಯಾಸಂಗ ಮುಂದುವರಿಸಲು ಅವಕಾಶ ನೀಡಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ತಳ್ಳಿ ಹಾಕಿದ್ದು, ವ್ಯಾಸಂಗ ಮುಂದುವರಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.

    ಇದನ್ನೂ ಓದಿ: ಸೋನಿಯಾ, ರಾಹುಲ್ ಸ್ಪರ್ಧೆಯಿಂದ ದೂರ!?: ಬರೇಲಿ, ಅಮೇಥಿಯ ‘ಕೈ’ ಕಲಿಗಳು ಇವರೇ..

    ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಮುಖ್ಯ ನ್ಯಾಯಮೂರ್ತಿ ಎ.ಜೆ.ದೇಸಾಯಿ ಮತ್ತು ನ್ಯಾಯಮೂರ್ತಿ ವಿ.ಜಿ.ಅರುಣ್ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದು, ವರದಕ್ಷಿಣೆ ಕಾರಣಕ್ಕೆ ಮದುವೆಯಿಂದ ತಿರಸ್ಕರಿಸಿದ್ದು, ಇದರಿಂದ ಶಹನಾ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

    ಪ್ರಕರಣದಲ್ಲಿ ಮೊದಲು ಜಾಮೀನು ಪಡೆದಿರುವ ರುವೈಸ್, ತನ್ನ ಅಧ್ಯಯನವನ್ನು ಮುಂದುವರಿಸಲು ಮತ್ತು ತನ್ನ ಅಮಾನತು ಹಿಂಪಡೆಯಲು ಅವಕಾಶ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಸಿ.ಪಿ.ಮುಹಮ್ಮದ್ ನಿಯಾಜ್ ಅಧ್ಯಯನವನ್ನು ನಿಷೇಧಿಸುವ ಆರೋಗ್ಯ ವಿಶ್ವವಿದ್ಯಾಲಯದ ಆದೇಶಕ್ಕೆ ತಡೆ ನೀಡಿದ್ದರು. ಈ ಆದೇಶದ ವಿರುದ್ಧ ಪ್ರಾಂಶುಪಾಲರು ವಿಭಾಗೀಯ ಪೀಠದ ಮೊರೆ ಹೋಗಿದ್ದರು.

    ಏಕ ಸದಸ್ಯ ಪೀಠದ ಆದೇಶವು ಮಧ್ಯಂತರ ಆದೇಶವಾಗಿದ್ದರೂ, ಆರೋಪಿಯ ಪ್ರಭಾವದ ಕುರಿತು ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ಪ್ರಾಂಶುಪಾಲರು ಮನವಿ ಮಾಡಿಕೊಂಡಿದ್ದರು. ತನಿಖೆ ಪೂರ್ಣಗೊಳ್ಳುವ ಮೊದಲು ವಿದ್ಯಾರ್ಥಿಯನ್ನು ಕಾಲೇಜಿಗೆ ಸೇರಿಸಿಕೊಳ್ಳುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು, ಬೆದರಿಕೆ ಹಾಕಬಹುದು ಅಥವಾ ಜಾಮೀನು ಷರತ್ತುಗಳನ್ನು ಉಲ್ಲಂಘಿಸಬಹುದು ಎಂದು ಪ್ರಾಂಶುಪಾಲರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.

    ‘ನನ್ನನ್ನು ಕ್ಷಮಿಸಿ, ನನ್ನ ಮಾತುಗಳನ್ನು ವಾಪಸ್​ ತೆಗೆದುಕೊಳ್ಳುತ್ತಿದ್ದೇನೆ’ : ಶೋಭಾ ಕರಂದ್ಲಾಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts