More

    ಸೋನಿಯಾ, ರಾಹುಲ್ ಸ್ಪರ್ಧೆಯಿಂದ ದೂರ!?: ಬರೇಲಿ, ಅಮೇಥಿಯ ‘ಕೈ’ ಕಲಿಗಳು ಇವರೇ..

    ನವದೆಹಲಿ: ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ದೇಶಾದ್ಯಂತ ರಾಜಕೀಯ ಸಂಚಲನ ಶುರುವಾಗಿದೆ. ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಘೋಷಣೆಯಲ್ಲಿ ಬ್ಯುಸಿಯಾಗಿದ್ದು, ಬುಧವಾರ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯ ನಂತರ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದ್ದ ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ರಾಹುಲ್, ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿದ್ದರೂ, ಅವರು ಸ್ಪರ್ಧಿಸುವುದಿಲ್ಲ ಎಂಬ ಸೂಚನೆ ನೀಡಿದ್ದರಿಂದ ಕಾಂಗ್ರೆಸ್‌ ವಲಯದಲ್ಲಿ ಗೊಂದಲ ಉಂಟಾಗಿದೆ.

    ಇದನ್ನೂ ಓದಿ: ‘ನನ್ನನ್ನು ಕ್ಷಮಿಸಿ, ನನ್ನ ಮಾತುಗಳನ್ನು ವಾಪಸ್​ ತೆಗೆದುಕೊಳ್ಳುತ್ತಿದ್ದೇನೆ’ : ಶೋಭಾ ಕರಂದ್ಲಾಜೆ

    ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬರೇಲಿಯಲ್ಲಿ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಕಾಂಗ್ರೆಸ್ ತನ್ನ ವಕ್ತಾರರಾದ ಸುಪ್ರಿಯಾ ಶ್ರೀನೆಟ್ ಅವರನ್ನು ಅಮೇಥಿಯಿಂದ ಸ್ಪರ್ಧಿಸಲು ಬಯಸಿತ್ತು ಆದರೆ ಅವರು ನಿರಾಕರಿಸಿದರು ಎಂಬುದು ಗಮನಾರ್ಹ.

    ಅಮೇಠಿ ಕ್ಷೇತ್ರದ ಮಾಜಿ ಎಂಎಲ್‌ಸಿ ದೀಪಕ್ ಸಿಂಗ್ ಮತ್ತು ವಿಧಾನಸಭೆ ಅಭ್ಯರ್ಥಿ ವಿಜಯ್ ಪಾಸಿ ಅವರ ಹೆಸರುಗಳೂ ರೇಸ್‌ನಲ್ಲಿವೆ. ಇದೇ ವೇಳೆ ರಾಯ್ ಬರೇಲಿಯಿಂದ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಕಣಕ್ಕಿಳಿಸುವ ಚರ್ಚೆಯೂ ನಡೆಯುತ್ತಿದೆ. ವಾರಣಾಸಿಯಿಂದ ಸ್ಪರ್ಧಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ತನ್ನ ವಕ್ತಾರ ಪವನ್ ಖೇಡಾ ಅವರನ್ನು ಕಣಕ್ಕಿಳಿಸಲು ಆಶಿಸುತ್ತಿದೆ. ಇವರೊಂದಿಗೆ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಕೂಡ ವಾರಣಾಸಿಯಿಂದ ರೇಸ್ ನಲ್ಲಿದ್ದಾರೆ. ಆದರೆ, ಈ ಸ್ಥಾನಗಳ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

    ಇನ್ನೊಂದೆಡೆ ವಾರಣಾಸಿ ಮತ್ತು ಅಮೇಥಿ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಬಾರಿಯೂ ಪ್ರಧಾನಿ ಮೋದಿ ವಾರಣಾಸಿಯಿಂದ ಸ್ಪರ್ಧಿಸುತ್ತಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಅಮೇಥಿಯಿಂದ ಟಿಕೆಟ್ ನೀಡಲಾಗಿದೆ. 2019 ರಲ್ಲಿ ಸ್ಮೃತಿ ಅವರು ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿದರು. ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಿಂದ ಗೆದ್ದರು, ಆದರೆ ಈ ಬಾರಿ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದರು.

    102 ಕ್ಷೇತ್ರಗಳಲ್ಲಿ ಇಂದಿನಿಂದ `ನಾಮಪತ್ರ’ ಸಲ್ಲಿಕೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts