ರುದ್ರಣ್ಣ ಹರ್ತಿಕೋಟೆ
ಬೆಳಗಾವಿ: ರಾಜ್ಯದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮೂಲಕ ರೈತರ ಬದುಕಿನಲ್ಲಿ ನವ ಚೈತನ್ಯ ಮೂಡಿಸುವ ಹೊಸ ಕೃಷಿ ನೀತಿಯನ್ನು ಸರ್ಕಾರ ಬಹುತೇಕ ಅಂತಿಮಗೊಳಿಸಿದೆ. ಮುಂದಿನ ವರ್ಷದಿಂದ ಈ ಹೊಸನೀತಿ ಜಾರಿಗೆ ತರಲಿದೆ.
ರಾಜ್ಯದಲ್ಲಿನ ಕೃಷಿ ನೀತಿಯ ಅವಧಿ ಮುಕ್ತಾಯವಾಗಿದೆ. ಇಂದಿನ ಅಗತ್ಯಗಳು, ಬದಲಾಗುತ್ತಿರುವ ಹವಾಮಾನ, ಹೊಸ ಹೊಸ ಅವಕಾಶಗಳಿಗೆ ಕೃಷಿ ಸೇರಿಸುವುದು, ತಂತ್ರಜ್ಞಾನವನ್ನು ಎಲ್ಲ ವಲಯದಲ್ಲಿ ಬಳಕೆ ಹೀಗೆ ವಿವಿಧ ಅಂಶಗಳನ್ನು ಒಳಗೊಂಡಂತೆ ಕೃಷಿ ನೀತಿ ಸಿದ್ಧಪಡಿಸಲಾಗಿದೆ. ತಜ್ಞರ ಸಮಿತಿ ಈಗ ಕೃಷಿ ನೀತಿಯನ್ನು ಸಿದ್ಧಪಡಿಸಿದೆ. ಇನ್ನೊಂದು ಸಭೆಯ ನಂತರ ಸರ್ಕಾರಕ್ಕೆ ಸಲ್ಲಿಸಲಿದೆ. ಸರ್ಕಾರ ಸಚಿವ ಸಂಪುಟ ಸಭೆಯ ಮುಂದಿಟ್ಟು ನಂತರ ಅದನ್ನು ಜಾರಿಗೆ ಕೊಡಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.
ನೀತಿಯ ಉದ್ದೇಶವೇನು?: ರೈತರು ಕೃಷಿಯ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವುದನ್ನು ತಪ್ಪಿಸುವುದಕ್ಕಾಗಿ ಒಳಸುರಿಯ ನಿರ್ವಹಣೆಗೆ ಆದ್ಯತೆ ನೀಡುವ ಮೂಲಕ ಉತ್ಪಾದನೆ, ಉತ್ಪಾದಕತೆ, ನಷ್ಟ ಕಡಿಮೆ, ನೀರಿನ ಸಮರ್ಪಕ ಬಳಕೆ, ಮಣ್ಣಿನ ಆರೋಗ್ಯ ಕಾಪಾಡುವುದು, ಡಿಜಿಟಲ್ ಕೃಷಿ, ಕೃಷಿ ಭೂಮಿಯ ಸರಿಯಾದ ನಿರ್ವಹಣೆ, ಉತ್ಪಾದನೆಗೆ ಉತ್ತಮ ಬೆಳೆ ಸಿಗುವಂತೆ ನೋಡಿಕೊಳ್ಳುವ ಕಡೆ ಆದ್ಯತೆ ನೀಡುವುದನ್ನು ನೂತನ ನೀತಿಯಲ್ಲಿ ಖಚಿತಪಡಿಸಲಾಗುತ್ತಿದೆ. ಕೃಷಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ನಡುವೆ ಸಮನ್ವಯ ತರುವುದು. ಕೃಷಿಕರ ಆದಾಯ ಹೆಚ್ಚಿಸುವಲ್ಲಿ ಸವಾಲುಗಳನ್ನು ನಿವಾರಿಸುವುದು ಹೊಸ ನೀತಿ ತರುತ್ತಿರುವ ಉದ್ದೇಶಗಳಾಗಿವೆ ಎನ್ನಲಾಗಿದೆ.
ಕೃಷಿಕರ ಆದಾಯ ಹೆಚ್ಚಳ ಆಗಬೇಕು. ಅದಕ್ಕೆ ತಕ್ಕಂತೆ ಮೂಲಸೌಕರ್ಯವೂ ಅಭಿವೃದ್ಧಿ ಮಾಡಬೇಕಾಗಿದೆ. ಅದಕ್ಕಾಗಿ ಹೊಸ ನೀತಿ ರಚಿಸಲಾಗುತ್ತಿದ್ದು, ಆದಷ್ಟು ಬೇಗ ಜಾರಿಗೆ ಬರಲಿದೆ.
| ಬಿ.ಸಿ. ಪಾಟೀಲ್ ಕೃಷಿ ಸಚಿವ
ಪೂರಕ ವಲಯಗಳಿಗೆ ಆದ್ಯತೆ
ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳಾಗಿ ರೈತರಿಗೆ ಲಾಭ ಆಗಬೇಕಾದರೆ ಪೂರಕ ಕ್ಷೇತ್ರಗಳಾದ ಹೈನುಗಾರಿಕೆ, ಕುಕ್ಕಟ, ರೇಷ್ಮೆ, ನೀರಾವರಿಯಲ್ಲಿ ಅಭಿವೃದ್ಧಿ ಸಾಧಿಸಬೇಕಾಗುತ್ತದೆ. ಈ ಬಾರಿಯ ನೀತಿಯಲ್ಲಿ ಈ ಅಂಶಕ್ಕೆ ಆದ್ಯತೆ ನೀಡಲಾಗಿದೆ. ಆ ಮೂಲಕ ರೈತರ ಆದಾಯ ದ್ವಿಗುಣಕ್ಕೆ ಒತ್ತು ನೀಡಲಾಗುತ್ತಿದೆ.
ಡಿಜಿಟಲ್ ಅಗ್ರಿಕಲ್ಚರ್ ಪರಿಕಲ್ಪನೆ
ಮಾಹಿತಿ ತಂತ್ರಜ್ಞಾನದಲ್ಲಿ ರಾಜ್ಯ ಸಾಕಷ್ಟು ಮುಂದುವರೆದಿದೆ. ಅದನ್ನು ಕೃಷಿ ವಲಯದಲ್ಲಿಯೂ ಬಳಸಿಕೊಳ್ಳುವ ಮೂಲಕ ಡಿಜಿಟಲ್ ಅಗ್ರಿಕಲ್ಚರ್ ಎಂಬ ಹೊಸ ಅಂಶವೂ ನೀತಿಯಲ್ಲಿದೆ. ಹವಾಮಾನ ಮಾಹಿತಿ, ಮಾರ್ಕೆಟ್ ಇಂಟೆಲಿಜೆನ್ಸ್, ವಿವಿಧ ಅಲರ್ಟ್ಗಳನ್ನು ರೈತರಿಗೆ ಸೂಕ್ತಕಾಲಕ್ಕೆ ರವಾನೆ ಮಾಡುವುದು ಡಿಜಿಟಲ್ ಅಗ್ರಿಕಲ್ಚರ್ನ ಪ್ರಮುಖ ಉದ್ದೇಶವಾಗಿದೆ.
ವಿಪಿಒಗಳ ಸ್ಥಾಪನೆ
ರಾಜ್ಯದಲ್ಲಿ ಈಗಾಗಲೆ ರೈತ ಉತ್ಪಾದಕ ಸಂಘಗಳನ್ನು ತೆರೆಯಲಾಗಿದೆ. ಇದೀಗ ಅದರ ಮುಂದುವರೆದ ಭಾಗವಾಗಿ ಗ್ರಾಮೀಣ ಉತ್ಪಾದಕ ಸಂಘಗಳನ್ನು ತೆರೆಯುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿಪಿಒಗಳನ್ನು ತೆರೆಯಬೇಕು. ಅಲ್ಲಿ ರೈತರನ್ನು ಒಗ್ಗೂಡಿಸಿ ಸ್ಥಳೀಯವಾಗಿಯೆ ಸಂಸ್ಕರಣೆ ಸೇರಿ ವಿವಿಧ ಅಂಶಗಳನ್ನು ತರಲಾಗುತ್ತದೆ. ಅಲ್ಲಿಂದ ಎಫ್ಪಿಒಗಳಿಗೆ ಹಾಗೂ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಎಫ್ಪಿಒಗಳ ವಿಕೇಂದ್ರೀಕರಣ ಇದರ ಉದ್ದೇಶವಾಗಿದೆ.
ನಷ್ಟ ತಪ್ಪಿಸುವುದು
ಎರಡನೇ ಕೃಷಿ
ಕೃಷಿ ಕೌಶಲ
ವಿದ್ಯುತ್ ಸುಧಾರಣೆ
ಸಾಂದ್ರತೆ ಹೆಚ್ಚಳ