ಯಾದಗಿರಿ: ವಾಹನ ಗುದ್ದಿದ ರಭಸಕ್ಕೆ ಸ್ಕೂಟಿ ಸವಾರನ ಕಣ್ಣು ಗುಡ್ಡೆ ಕಿತ್ತು ರಸ್ತೆಗೆ ಬಿದ್ದಿರುವ ಘಟನೆ ಯಾದಗಿರಿ ನಗರದ ಲಕ್ಷ್ಮೀ ನಗರದಲ್ಲಿ ನಡೆದಿದೆ.
ಚೆನ್ನಾರೆಡ್ಡಿ ಪಾಟೀಲ ಗಾಯಗೊಂಡಿರುವ ವ್ಯಕ್ತಿ. ಇವರು ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.
ನಿನ್ನೆ ನಸುಕಿನ ಜಾವ ಸ್ಕೂಟಿಯಲ್ಲಿ ಊರಿಗೆ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ವಾಹನ ಗುದ್ದಿದ ರಭಸಕ್ಕೆ ಸವಾರ ರಸ್ತೆ ಮೇಲೆ ಬಿದ್ದಿದ್ದಾನೆ. ಈ ಭೀಕರ ಅಪಘಾತದಲ್ಲಿ ಕಣ್ಣು ಗುಡ್ಡೆ ಕಿತ್ತು ರಸ್ತೆಗೆ ಬಿದ್ದಿದೆ. ಗಾಯಗೊಂಡ ಸವಾರನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: 24 ಕೋಟಿ ರೂ. ಬೆಲೆ ಬಾಳುವ ಕೋಣ; ಗೋಡಂಬಿ, ಬಾದಾಮಿ, ತುಪ್ಪ ತಿನ್ನುವ ಇದರ ವೀರ್ಯದಿಂದ ಬರುತ್ತದೆ ಲಕ್ಷಗಟ್ಟಲೆ ಆದಾಯ
ಸವಾರನ ಕಣ್ಣು ಗುಡ್ಡೆ ಹೊರಕ್ಕೆ ಬಿದ್ದಿರುವುದನ್ನು ಗಮನಿಸಿದ ಬೀರಲಿಂಗಪ್ಪ ಎನ್ನುವವರು ಗಾಯಾಳು ವ್ಯಕ್ತಿಗೆ ಸಹಾಯ ಮಾಡಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.